ಹುಬ್ಬಳ್ಳಿ: ರೈಲ್ವೆ ಮಂಡಳಿಯು ರೈಲು ಸಂಖ್ಯೆ 07355/07356 ಎಸ್ಎಸ್ಎಸ್ ಹುಬ್ಬಳ್ಳಿ–ರಾಮನಾಥಪುರಂ–ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರದ ಅವಧಿಯನ್ನು ವಿಸ್ತರಿಸಲು ಅನುಮೋದನೆ ನೀಡಿದೆ.
ರೈಲು ಸಂಖ್ಯೆ 07355 ಎಸ್ಎಸ್ಎಸ್ ಹುಬ್ಬಳ್ಳಿ–ರಾಮನಾಥಪುರಂ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಈ ಮೊದಲು ಅಕ್ಟೋಬರ್ 25, 2025ರ ವರೆಗೆ ಓಡಿಸಲು ಸೂಚಿಸಲಾಗಿತ್ತು. ಈಗ, ಇದು ನವೆಂಬರ್ 1, 2025 ರಿಂದ ನವೆಂಬರ್ 29, 2025 ರ ವರೆಗೆ ತನ್ನ ಸೇವೆಯನ್ನು ಶನಿವಾರದಂದು ಐದು ಟ್ರಿಪ್’ಗಳಿಗೆ ಮುಂದುವರೆಸಲಿದೆ.
ಅದೇ ರೀತಿ, ರೈಲು ಸಂಖ್ಯೆ 07356 ರಾಮನಾಥಪುರಂ–ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಮೊದಲು ಅಕ್ಟೋಬರ್ 26, 2025ರ ವರೆಗೆ ಓಡಿಸಲು ಸೂಚಿಸಲಾಗಿತ್ತು. ಈಗ, ಇದು ನವೆಂಬರ್ 2, 2025 ರಿಂದ ನವೆಂಬರ್ 30, 2025ರ ವರೆಗೆ ಭಾನುವಾರದಂದು ಐದು ಟ್ರಿಪ್’ಗಳಿಗೆ ಕಾರ್ಯನಿರ್ವಹಿಸಲಿದೆ.
ಈ ರೈಲುಗಳು ತಮ್ಮ ಈಗಿರುವ ಸಂಯೋಜನೆ, ಸಮಯ ಮತ್ತು ನಿಲುಗಡೆಗಳೊಂದಿಗೆ ಮುಂದುವರಿಯಲಿವೆ.
II. ನೆಲಮಂಗಲದಲ್ಲಿ ಸೋಲಾಪುರ-ಹಾಸನ ಎಕ್ಸ್ ಪ್ರೆಸ್’ನ ತಾತ್ಕಾಲಿಕ ನಿಲುಗಡೆ ವಿಸ್ತರಣೆ
ಸುಬ್ರಹ್ಮಣ್ಯ ರೋಡ್ ಮತ್ತು ಸಕಲೇಶಪುರದ ನಡುವೆ ನಡೆಯುತ್ತಿರುವ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ಹಿನ್ನೆಲೆಯಲ್ಲಿ, ರೈಲು ಸಂಖ್ಯೆ 16575/16576 ಯಶವಂತಪುರ – ಮಂಗಳೂರು ಜಂಕ್ಷನ್ – ಯಶವಂತಪುರ ಎಕ್ಸ್’ಪ್ರೆಸ್ ರದ್ದಾದ ನಂತರ, ನೈಋತ್ಯ ರೈಲ್ವೆಯು ನೆಲಮಂಗಲ ನಿಲ್ದಾಣದಲ್ಲಿ ರೈಲು ಸಂಖ್ಯೆ 11311/11312 ಸೋಲಾಪುರ-ಹಾಸನ-ಸೋಲಾಪುರ ಎಕ್ಸ್ ಪ್ರೆಸ್’ನ ತಾತ್ಕಾಲಿಕ ನಿಲುಗಡೆಯನ್ನು ಡಿಸೆಂಬರ್ 16, 2025ರ ವರೆಗೆ ವಿಸ್ತರಿಸಲು ನಿರ್ಧರಿಸಿದೆ.
1. ರೈಲು ಸಂಖ್ಯೆ 11311 ಸೋಲಾಪುರ–ಹಾಸನ ಎಕ್ಸ್ ಪ್ರೆಸ್ ರೈಲಿನ ನಿಲುಗಡೆಯನ್ನು ಮೊದಲು ಅಕ್ಟೋಬರ್ 31, 2025ರವರೆಗೆ ನಿಗದಿಪಡಿಸಲಾಗಿತ್ತು. ಇದೀಗ ಇದನ್ನು ನವೆಂಬರ್ 1 ರಿಂದ ಡಿಸೆಂಬರ್ 15, 2025ರ ವರೆಗೆ ವಿಸ್ತರಿಸಲಾಗಿದೆ.
2. ರೈಲು ಸಂಖ್ಯೆ 11312 ಹಾಸನ–ಸೋಲಾಪುರ ಎಕ್ಸ್ ಪ್ರೆಸ್’ನ ರೈಲಿನ ನಿಲುಗಡೆಯನ್ನು ಮೊದಲು ನವೆಂಬರ್ 1, 2025ರ ವರೆಗೆ ನಿಗದಿಪಡಿಸಲಾಗಿತ್ತು. ಇದೀಗ ಇದನ್ನು ನವೆಂಬರ್ 2 ರಿಂದ ಡಿಸೆಂಬರ್ 16, 2025ರ ವರೆಗೆ ವಿಸ್ತರಿಸಲಾಗಿದೆ.
ಈ ರೈಲುಗಳು ನೆಲಮಂಗಲ ನಿಲ್ದಾಣದಲ್ಲಿ ತಮ್ಮ ಪ್ರಸ್ತುತ ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿಯಂತೆ ಸಂಚಾರ ಮುಂದುವರೆಸಲಿವೆ.
III. ಹೂಡಿ ನಿಲ್ದಾಣದಲ್ಲಿ ಮೆಮು ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ
ರೈಲು ಸಂಖ್ಯೆ 16519/16520 ಕೆಎಸ್ಆರ್ ಬೆಂಗಳೂರು–ಜೋಲಾರಪೆಟ್ಟೈ–ಕೆಎಸ್ಆರ್ ಬೆಂಗಳೂರು ಮೆಮು ರೈಲಿಗೆ ಹೂಡಿ ನಿಲ್ದಾಣದಲ್ಲಿ ನೀಡಿದ್ದ ತಾತ್ಕಾಲಿಕ ನಿಲುಗಡೆಯನ್ನು ಇನ್ನೂ ಆರು ತಿಂಗಳ ಕಾಲ ಮುಂದುವರಿಸಲಾಗಿದೆ. ಈ ವಿಸ್ತರಣೆಯು 01.12.2025 ರಿಂದ 31.05.2026ರ ವರೆಗೆ ಜಾರಿಯಲ್ಲಿರುತ್ತದೆ ಎಂದು ನೈರುತ್ಯ ರೈಲ್ವೆ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
Laxmi News 24×7