Breaking News

ಡಾ. ದೀಪ್ತಿ ಅಭಿಜಿತ್ ಪನೋರೆ ಅವರ ಪ್ರಕೃತಿ ಸ್ಪಾ ಲೋಕಾರ್ಪಣೆ

Spread the love

ಡಾ. ದೀಪ್ತಿ ಅಭಿಜಿತ್ ಪನೋರೆ ಅವರ ಪ್ರಕೃತಿ ಸ್ಪಾ ಲೋಕಾರ್ಪಣೆ
ಡಾ. ದೀಪ್ತಿ ಅಭಿಜಿತ್ ಪನೋರೆ ಅವರ ಪ್ರಕೃತಿ ಸ್ಪಾ ಲೋಕಾರ್ಪಣೆ
ಡಾ. ಆನಂದಮಹಾರಾಜ ಗೋಸಾವಿ ಮತ್ತು ಗಣ್ಯರಿಂದ ಉದ್ಘಾಟನೆ
ಆಯೂರ್ವೇದಿಕ್ ಪದ್ಧತಿಯಿಂದ ಉಪಚಾರ
ಸೌಂದರ್ಯ ವರ್ಧನೆಗೂ ಚಿಕಿತ್ಸೆ
ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಬಳಸಿ ಬೆಳಗಾವಿಯಲ್ಲಿ ಡಾ. ದೀಪ್ತಿ ಅಭಿಜಿತ್ ಪನೋರೆ ಅವರು ಆರಂಭಿಸಿರುವ ಪ್ರಕೃತಿ ಸ್ಪಾ ವನ್ನು ಹತ್ತ ರಕಿ ಶ್ರೀ ಹರಿಕಾಕಾ ಗೋಸಾವಿ ಭಾಗವತ ಮಠದ ಪೀಠಾಧೀಶರಾದ ಡಾ. ಆನಂದಮಹಾರಾಜ ಗೋಸಾವಿ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ನೂತನ ಉದ್ಘಾಟಿಸಲಾಯಿತು.
ಬೆಳಗಾವಿ ಭಾಗ್ಯನಗರದ ಪಂಝೋ ಲಿವಿಂಗ್” ಅಪಾರ್ಟ್‌ಮೆಂಟ್, 9ನೇ ಕ್ರಾಸ್‌ನಲ್ಲಿಡಾ. ದೀಪ್ತಿ ಅಭಿಜಿತ್ ಪನೋರೆ ಅವರ “ಪ್ರಕೃತಿ ಆಯು ಸ್ಪಾ” ಮತ್ತು “ಪಂಚಕರ್ಮ ಸೆಂಟರ್” ಆರಂಭಿಸಿದ್ದು, ಇಲ್ಲಿ ಸಂಪೂರ್ಣ ಆಯುರ್ವೇದ ಪದ್ಧತಿಯಲ್ಲಿ ಔಷಧಿ ಚಿಕಿತ್ಸೆ ನೀಡಲಾಗುತ್ತದೆ. ವಾತ, ಪಿತ್ತ, ಕಫ ಪ್ರಕೃತಿಗಳಿಗೆ ಅನುಗುಣವಾಗಿ ಮಸಾಜ್, ಔಷಧೀಯ ತೈಲ, ಎಲ್ಲ ರೀತಿಯ ಅಭ್ಯಂಗ, ಹಾಗೆಯೇ ಶಿರೋಅಭ್ಯಂಗ, ಪಾದಾಭ್ಯಂಗ, ಸ್ನಾನ, ಸ್ವೇದನ, ಪುಡಿ ಮಸಾಜ್, ಉದ್ವರ್ತನ ಮತ್ತು ಪತ್ರ ಪಿಂಡ, ಕಟಿ ಬಸ್ತಿ, ಜಾನು ಬಸ್ತಿ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆಗಳನ್ನು ನೀಡಲಾಗುತ್ತದೆ.
ಹೇರ್ ಫೇಶಿಯಲ್, ಕೂದಲಿನ ಚಿಕಿತ್ಸೆಗಳು, ಚರ್ಮದ ಚಿಕಿತ್ಸೆಯಂತಹ ಸೌಂದರ್ಯವರ್ಧಕ ಚಿಕಿತ್ಸೆಗಳನ್ನು ಸಹ ನೀಡಲಾಗುತ್ತದೆ. ಎಲ್ಲ ಚಿಕಿತ್ಸೆಗಳನ್ನು ಆಯುರ್ವೇದ ಪದ್ಧತಿಯಲ್ಲಿ ಮಾಡಲಾಗುತ್ತದೆ, ಆದ್ದರಿಂದ ದೇಹಕ್ಕೆ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂದು ಡಾ. ಪನೋರೆ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ವೇಣುಗೋಪಾಲ ಗೋಸಾವಿ, ಅಭಿಜಿತ್ ಪನೋರೆ, ಅಡ್ವಕೇಟ್ ಸಂಗ್ರಾಮ ಕುಲಕರ್ಣಿ, ದಿಲೀಪ್ ಮುತ್ತಾಲಿಕ್ ದೇಸಾಯಿ, ಡಾ. ಪ್ರೊ. ಸುನಿಲ್ ದೇಸಾಯಿ, ರಾಹುಲ್ ಪನೋರೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ