ಬೆಂಗಳೂರು: ಮುಂಬರುವ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಧ್ವಜಾರೋಹಣ ಮಾಡುವಂತೆ ಸರ್ಕಾರ ಸೂಚಿಸಿದೆ.
ನ.1 ರಂದು ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ಮಾಡಲಿರುವ ಸಚಿವರು:
ತುಮಕೂರಲ್ಲಿ ಪರಮೇಶ್ವರ್, ಗದಗನಲ್ಲಿ ಎಚ್.ಕೆ.ಪಾಟೀಲ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೆ.ಎಚ್.ಮುನಿಯಪ್ಪ, ಬೆಂಗಳೂರು ದಕ್ಷಿಣ – ರಾಮಲಿಂಗಾರೆಡ್ಡಿ, ವಿಜಯಪುರ – ಎಂ.ಬಿ.ಪಾಟೀಲ್ , ಚಿಕ್ಕಮಗಳೂರು – ಕೆ.ಜೆ.ಜಾರ್ಜ್, ದಕ್ಷಿಣ ಕನ್ನಡ – ದಿನೇಶ್ ಗುಂಡೂರಾವ್, ಮೈಸೂರು – ಡಾ.ಎಚ್.ಸಿ.ಮಹದೇವಪ್ಪ, ಬೆಳಗಾವಿ – ಸತೀಶ್ ಜಾರಕಿಹೊಳಿ, ಹಾಸನ – ಕೃಷ್ಣಬೈರೇಗೌಡ, ಕಲಬುರಗಿ – ಪ್ರಿಯಾಂಕ್ ಖರ್ಗೆ, ಹಾವೇರಿ – ಶಿವಾನಂದ ಪಾಟೀಲ್, ವಿಜಯನಗರ – ಜಮೀರ್ ಅಹಮದ್, ಯಾದಗಿರಿ – ಶರಣಬಸಪ್ಪ ದರ್ಶನಾಪುರ, ಬೀದರ್ – ಈಶ್ವರ್ ಖಂಡ್ರೆ, ಮಂಡ್ಯ – ಎನ್.ಚೆಲುವರಾಯಸ್ವಾಮಿ, ದಾವಣಗೆರೆ – ಎಸ್.ಎಸ್.ಮಲ್ಲಿಕಾರ್ಜುನ, ಧಾರವಾಡ – ಸಂತೋಷ್ ಲಾಡ್, ರಾಯಚೂರು – ಶರಣಪ್ರಕಾಶ್ ಪಾಟೀಲ್, ಬಾಗಲಕೋಟೆ – ಆರ್.ಬಿ. ತಿಮ್ಮಾಪುರ, ಚಾಮರಾಜನಗರ – ಕೆ.ವೆಂಕಟೇಶ್, ಕೊಪ್ಪಳ – ಶಿವರಾಜ್ ತಂಗಡಗಿ, ಚಿತ್ರದುರ್ಗ – ಡಿ.ಸುಧಾಕರ್, ಬಳ್ಳಾರಿ – ರಹೀಂಖಾನ್, ಕೋಲಾರ – ಬೈರತಿ ಸುರೇಶ್, ಉಡುಪಿ – ಲಕ್ಷ್ಮೀ ಹೆಬ್ಬಾಳ್ಕರ್, ಉತ್ತರ ಕನ್ನಡ – ಮಂಕಾಳ ವೈದ್ಯ, ಶಿವಮೊಗ್ಗ – ಮಧು ಬಂಗಾರಪ್ಪ, ಚಿಕ್ಕಬಳ್ಳಾಪುರ – ಡಾ.ಎಂ.ಸಿ.ಸುಧಾಕರ್ ಹಾಗೂ ಎನ್.ಎಸ್.ಬೋಸರಾಜ್ ಅವರನ್ನ ಕೊಡಗಿನಲ್ಲಿ ಧ್ವಜಾರೋಹಣ ಮಾಡಲಿದ್ದಾರೆ.
ಮೂವರು ಮಾಹಿತಿ ಆಯುಕ್ತರ ನೇಮಿಸಿ ಸರ್ಕಾರ ಆದೇಶ: ರಾಜ್ಯ ಮಾಹಿತಿ ಆಯೋಗದಲ್ಲಿ ಖಾಲಿಯಿದ್ದ ಮೂರು ಮಾಹಿತಿ ಆಯುಕ್ತ ಹುದ್ದೆಗಳನ್ನು ನೇಮಿಸಿ ಸರ್ಕಾರ ಆದೇಶಿಸಿದೆ. ಆಯೋಗದ ಬೆಂಗಳೂರು ವಿಭಾಗಕ್ಕೆ ಡಾ.ರಿಚರ್ಡ್ ವಿನ್ಸಂಟ್ ಡಿಸೋಜಾ, ಡಾ.ಮಹೇಶ್ ವಾಲ್ವೇಕರ್, ಕಲಬುರಗಿ ವಿಭಾಗಕ್ಕೆ ಬಿ.ವೆಂಕಟ್ ಸಿಂಗ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಖಾಲಿಯಿದ್ದ ಮೂವರು ಆಯುಕ್ತರ ಹುದ್ದೆಗಳಿಗೆ 400ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅರ್ಹರಾದ 109 ಅರ್ಜಿಗಳನ್ನು ಗುರುತಿಸಿ ಅಂತಿಮ ಸುತ್ತಿಗೆ 7 ಮಂದಿ ಹೆಸರುಗಳು ಮುನ್ನೆಲೆಗೆ ಬಂದಿದ್ದವು. ಈ ಬಗ್ಗೆ ಅ.8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಭೆಯಲ್ಲಿ ಚರ್ಚಿಸಿ ಅಂತಿಮವಾಗಿ ಮೂವರ ಹೆಸರನ್ನು ಆಯ್ಕೆ ಮಾಡಿಲಾಗಿತ್ತು.
Laxmi News 24×7