ಬೆಳಗಾವಿ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯಲ್ಲಿ ಕಳೆದ ಸುಮಾರು ವರ್ಷಗಳಿಂದ ಬೆಳಗಾವಿ ನಗರದ ಗೋವನ್ ಡಿಸ್ಟ್ರಿಕ್ಟ್ ವೆಜಿಟೆಬಲ್ ಪರಿಚಿಸರ್ಸ್ ಕೋ ಆಪ್ ರೇಟಿವ್ ಸೊಸೈಟಿ ಲಿ., ಬೆಳಗಾವಿ ಹೋಲಸೇಲ್
ವೆಜಿಟೆಬಲ್,ಕೋಆಪ್ ಸೊಸೈಟಿ ಲಿ. ಕಾಮತಗಲ್ಲಿ, ಕಪಿಲನಾಥ್ ಕ್ರೆಡಿಟ್ ಸೌಹಾರ್ದ ಸೊಸೈಟಿ ರೈತರ ಠೇವಣಿ ಮೋಸ ಮಾಡಿರುವುದನ್ನು ಖಂಡಿಸಿ ಬುಧವಾರ ಠೇವಣಿದಾರರು ಹಾಗೂ ರೈತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ನಗರದ ಗೋವನ್ ಡಿಸ್ಟ್ರಿಕ್ಟ್ ವೆಜಿಟೆಬಲ್ ಪರಿಚಿಸರ್ಸ್ ಕೋ ಆಪ್ ರೇಟಿವ್ ಸೊಸೈಟಿ ಲಿ., ಬೆಳಗಾವಿ ಹೋಲಸೇಲ್ ವೆಜಿಟೆಬಲ್,ಕೋಆಪ್ ಸೊಸೈಟಿ ಲಿ. ಕಾಮತಗಲ್ಲಿ, ಕಪಿಲನಾಥ್ ಕ್ರೆಡಿಟ್ ಸೌಹಾರ್ದ ಸೊಸೈಟಿ ಮಾದವಾ ರಸ್ತೆಲ್ಲಿನ ಸೊಸೈಟಿ ಮೇಲೆ ಕ್ರಮ ಜರುಗಿಸುವ ಸಭೆಯಲ್ಲಿ ಮಾತನಾಡಿದರು. ಪ್ರಾಮಾಣಿಕವಾಗಿ ರೈತರು ಖಾಸಗಿ ಮಾರುಕಟ್ಟೆಯಲ್ಲಿದ್ದ ವರ್ತಕರು ಠೇವಣಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿದರು.
ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ಮಾತನಾಡಿ, ರೈತರು ಹಾಗೂ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ವರ್ತಕರು ಜೈ ಕಿಸಾನ್ ಖಾಸಗಿ ಮಾರುಕಟ್ಟೆಯ ಸೊಸೈಟಿಯಲ್ಲಿ ಕಳೆದ ಹತ್ತು ಹದಿನೈದು ವರ್ಷದಿಂದ ಠೇವಣಿ ಹಣ ನೀಡಲು ಸತಾಯಿಸುತ್ತಿದ್ದಾರೆ. ಅದು ಬಡ ರೈತರ ಹಾಗೂ ವರ್ತಕರ, ಗುಮಾಸ್ತರ ಹಣವನ್ನು ಲೂಟಿ ಮಾಡಿದ್ದಾರೆ. ಅವರ ಹಣವನ್ನು ಪ್ರಾಮಾಣಿಕವಾಗಿ ಮರುಕಳಿಸುವ ಪ್ರಯತ್ನ ಹಾಗೂ ಕಾನೂನು ಹೋರಾಟ ನಡೆಸಲಾಗುವುದು ಎಂದರು.
ಠೇವಣಿದಾರರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದರು.
ರಾಜಕುಮಾರ ಟೋಪಣ್ಣವರ ಮಾತನಾಡಿ, ಗೋವನ್ ಡಿಸ್ಟ್ರಿಕ್ಟ್ ವೆಜಿಟೆಬಲ್ ಪರಿಚಿಸರ್ಸ್ ಕೋ ಆಪ್ ರೇಟಿವ್ ಸೊಸೈಟಿ ಲಿ., ಬೆಳಗಾವಿ ಹೋಲಸೇಲ್ ವೆಜಿಟೆಬಲ್,ಕೋಆಪ್ ಸೊಸೈಟಿ ಲಿ. ಕಾಮತಗಲ್ಲಿ, ಕಪಿಲನಾಥ್ ಕ್ರೆಡಿಟ್ ಸೌಹಾರ್ದ ಸೊಸೈಟಿ ರೈತರ ಕೋಟ್ಯಂತರ ರೂ. ಹಣ ಅವ್ಯವಹಾರ ಮಾಡಿದ್ದಾರೆ. ಎಲ್ಲ ಠೇವಣಿದಾರರು ದಾಖಲೆಗಳನ್ನು ಕೊಡಿ ನಾವು ನಿಮ್ಮ ಪರವಾಗಿ ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಸೋಮವಾರ ರೈತರು ಹಾಗೂ ಜೈಕಿಸಾನ್ ಹೋಲ್ ಸೇಲ್ ಸೊಸೈಟಿ ಸೇರಿದಂತೆ ಮೂರು ಸೊಸೈಟಿಯವರು ರೈತರಿಗೆ ಮೋಸ ಮಾಡಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.
Laxmi News 24×7