Breaking News

ಈ ನಾಡದೇವಿ ಮೂರ್ತಿ‌ ನೋಡಿದ್ರೆ ಮೈ ಜುಮ್ ಎನ್ನೋದಂತು ಗ್ಯಾರಂಟಿ: ಕಣ್ಮುಂದೆ ಸಿಂಹದ ಸವಾರಿ ಹೊರಟು ಪ್ರತ್ಯಕ್ಷವಾದಂತೆ ಕಾಣುವ ಜಗನ್ಮಾತೆ

Spread the love

ಈ ನಾಡದೇವಿ ಮೂರ್ತಿ‌ ನೋಡಿದ್ರೆ ಮೈ ಜುಮ್ ಎನ್ನೋದಂತು ಗ್ಯಾರಂಟಿ: ಕಣ್ಮುಂದೆ ಸಿಂಹದ ಸವಾರಿ ಹೊರಟು ಪ್ರತ್ಯಕ್ಷವಾದಂತೆ ಕಾಣುವ ಜಗನ್ಮಾತೆ
ನವರಾತ್ರಿಯ ಸಂದರ್ಭದಲ್ಲಿ ನಾಡದೇವಿ ಮೂರ್ತಿಗಳನ್ನು ವೀಕ್ಷಿಸಿ ಕಣ್ತುಂಬಿಕೊಳ್ಳುವದೇ ಒಂದು ಮಹಾದಾನಂದ. ನಾಡದೇವಿ ಅಂದದ ಮೂರ್ತಿಗಳು ಭಕ್ತರ ಭಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇಲ್ಲೊಂದ ನಾಡದೇವಿ ಮೂರ್ತಿಯು ನೋಡಲು ಅತಿ ಸುಂದರ, ರಮಣೀಯವಾಗಿದೆ. ಸಿಂಹದ ಮೇಲೆ ಜಗನ್ಮಾತೆ ಸವಾರಿ ಹೊರಟಿದ್ದಾಳೇನೊ ಎನ್ನುವ ಭಾವನೆ ಮೂಡಿಸುತ್ತಿದೆ. ಈ ಮೂರ್ತಿ ನೋಡಲು ಹಲವು ಭಕ್ತರು ಆಗಮಿಸಿ ಸೆಲ್ಫಿ ತೆಗೆದು ಕೊಳ್ಳುತ್ತಿದ್ದಾರೆ. ಈ ಕುರಿತು ಇಲ್ಲಿದೆ 
ವಿಜಯಪುರ ‌ನಗರದಲ್ಲಿ ನವರಾತ್ರಿ ಸಂಭ್ರಮ ಮೈಳೆಸಿದೆ. ನಾಡದೇವಿ ಗಲ್ಲಿ ಗಲ್ಲಿಗಳಲ್ಲಿ ಪೂಜಿತಗೊಳ್ಳುತ್ತಿದ್ದಾಳೆ. ಭಕ್ತರು ಭಕ್ತಿಯ ಪರವಶರಾಗುತ್ತಿದ್ದಾರೆ. ಇನ್ನೂ ಅಂದದ ಸುಂದರವಾದ ದೇವಿ ಮೂರ್ತಿಗಳನ್ನು ಭಕ್ತರು ಅತಿ ಪ್ರೀತಿಯಿಂದ ಭಕ್ತಿಯಿಂದ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ವಿಜಯಪುರ ನಗರದ ಎಸ್ ಪಿ ಆಫೀಸ್ ಹಿಂದುಗಡೆ ಬರುವ ಕುಂಬಾರ ಗಲ್ಲಿಯಲ್ಲಿ ಶ್ರೀ ಆದಿಮಾತಾ ಸೇವಾ ಸಂಘದವರು ಪ್ರತಿಷ್ಠಾಪನೆ ಮಾಡುವ ನಾಡದೇವಿ ಮೂರ್ತಿ ಅತಿ ಸುಂದರ ಮೂರ್ತಿ ಎಂಬ ಖ್ಯಾತಿಯನ್ನು ಹೊಂದಿದೆ. ಆರು ಅಡಿ ಎತ್ತರದ ಹಾಗೂ ಎಂಟು ಅಡಿ ಅಗಲದ ಸಿಂಹ ಸವಾರಿ ಮಾಡುತ್ತಿರುವ ನಾಡದೇವಿ ಮೂರ್ತಿ ನೋಡುಗರ ಕಣ್ಮನ ಸೆಳೆಯುತ್ತದೆ. ಸಿಂಹದ ಸವಾರಿ ಹೊರಟಿರುವ ಜಗನ್ಮಾತೆ ನಿಜವಾಗಿಯೂ ನಮ್ಮನ್ನೆ ನೋಡುತ್ತಿದ್ದಾಳೆ, ಆ ಜಗನ್ಮಾತೆ ನಮ್ಮ ಮುಂದೆಯೇ ಪ್ರತ್ಯಕ್ಷವಾಗಿದ್ದಾಳೇ ಏನೋ ಎನ್ನುವ ಭಾವನೆ ಮೂಡುತ್ತದೆ. ಒಂದು ಕ್ಷಣ ಮೈ ಜುಮ್ಮ ಎನ್ನುವ ಅನುಭವ ನೀಡುತ್ತದೆ. ಇನ್ನೂ ಸಾಕಷ್ಟು ಭಕ್ತರು ಇಲ್ಲಿಗೆ ಬರುವದೇ ದೇವಿ ಮೂರ್ತಿಯನ್ನು ನೋಡಿ ಸೆಲ್ಪಿ ತೆಗೆಸಿಕೊಳ್ಳಲು ಎನ್ನುವದು ವಿಶೇಷವಾಗಿದೆ.
ಇನ್ನೂ ನವರಾತ್ರಿಯ ಸಂದರ್ಭದಲ್ಲಿ ಮಾತ್ರವಲ್ಲದೆ ಈ ದೇವಿಗಾಗಿಯೇ ಒಂದು ಮಂದಿರವನ್ನು ನಿರ್ಮಿಸಲಾಗಿದೆ. ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಯ ಮೂರ್ತಿ ದರ್ಶನಕ್ಕೆ ಹಲವಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಇನ್ನೂ ನವರಾತ್ರಿಯ ಸಂಭ್ರಮದಲ್ಲಿ ಕಾಲೋನಿಯ ಮಹಿಳೆಯರು, ಪುಟಾಣಿಗಳು ಭಾಗವಹಿಸಿ ಸಂಭ್ರಮಿಸುತ್ತಾರೆ.
ದಾಂಡಿಯಾದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ, ಲಲಿತಾ ಸಹಸ್ರನಾಮ, ದೇವಿ ಪಾರಾಯಣ, ಉಡಿ ತುಂಬುವಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವಿ ಆರಾಧನೆ ಮಾಡುತ್ತಾರೆ. ಇಲ್ಲಿ‌ ಮಕ್ಕಳಿಗೆ ಉಡಿ ತುಂಬುವ ಮೂಲಕ ಬಾಲ ದೇವಿಯರನ್ನು ಪೂಜಿಸಲಾಗುತ್ತದೆ. ಅನ್ನ ಪ್ರಸಾದವೂ ನಡೆಯುತ್ತದೆ. ಕಾಲೋನಿಯ ಜನ ಒಗ್ಗಟ್ಟಿನ ಮಂತ್ರ ಪಠಿಸಿ ನವರಾತ್ರಿ ಸಂಭ್ರಮವನ್ನು ಆನಂದಮಯವಾಗಿ, ಭಕ್ತಿಮಯವಾಗಿ ಆಚರಿಸಿ ಶ್ರದ್ಧೆಯಿಂದ ಆಚರಿಸುತ್ತಾರೆ. ಇನ್ನೂ ಶೀಗಿ ಹುಣ್ಣಿಮೆಯ ನಿಮಿತ್ತವಾಗಿ ದಿನಾಂಕ 7 ರಂದು ಭಕ್ತರಿಗೆ ಅನ್ನಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಒಟ್ಟಾರೆ ನವರಾತ್ರಿಯ ಸಡಗರ ಮನೆ ಮಾಡಿದ್ದು ಆದಿ ಮಾತೆಯ ಸೇವೆ ಮಾಡುವ ಮೂಲಕ ಭಕ್ತರು ದೇವಿಯ ಆರಾಧನೆಯನ್ನು ಭಕ್ತಿ ಶ್ರದ್ಧೆಯಿಂದ, ನಿರ್ಮಲ ಮನಸ್ಸಿನಿಂದ ಮಾಡುತ್ತಿದ್ದಾರೆ.ಭಕ್ತರು ಜಗನ್ಮಾತೆ ತುಳಜಾಭವಾನಿಯನ್ನು ನಿತ್ಯ ನೆನೆದು ಕೃತಾರ್ಥರಾಗುತ್ತಿದ್ದಾರೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ