ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮೈಸೂರಿನಂತೆ ಅದ್ಧೂರಿ ದಸರಾ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ವತಿಯಿಂದ ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ. ಅದರಂತೆ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರು ಭಾಗವಹಿಸಿದ್ದು ನೆರೆದಿದ್ದವರನ್ನು ಪುಲ್ ಖುಷಿ ಆಗುವಂತೆ ಮಾಡಿತು.
ಯುವ ದಸರಾದ ನಿಮಿತ್ತ ಖ್ಯಾತ ಹಿನ್ನೆಲೆ ಗಾಯಕ ಹೇಮಂತ್ ಹಾಗೂ ಅನನ್ಯ ಭಟ್ ಅವರ ಸಂಗೀತ ರಸಸಂಜೆ ಕಾರ್ಯಕ್ರಮ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿತು. ಶಿವಮೊಗ್ಗದ ಅಲ್ಲಮ ಪ್ರಭು ಮೈದಾನದ ಬೃಹತ್ ವೇದಿಕೆಯಲ್ಲಿ ಸಂಜೆ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮ ಸ್ವಲ್ಪ ತಡವಾಗಿ ಪ್ರಾರಂಭವಾಗಿ ತುಂತುರು ಮಳೆ ಇದ್ದರೂ ಸಹ ಶಿವಮೊಗ್ಗ ಕಲಾ ರಸಿಕರು ಯಾವುದಕ್ಕೂ ಜಗ್ಗದೇ ಸಂಗೀತ ರಸಸಂಜೆವನ್ನು ಕುಳಿತು ಎಂಜಾಯ್ ಮಾಡಿದರು.ಶಿವರಾಜ್ ಕುಮಾರ್ ಆಗಮಿಸುತ್ತಿದ್ದಂತೆ ಹರ್ಷೋದ್ಗಾರ:
ಅದರಲ್ಲೂ ನಟ ಶಿವರಾಜ್ ಕುಮಾರ್ ವೇದಿಕೆ ಮೇಲೆ ಆಗಮಿಸುತ್ತಿದ್ದಂತಯೇ ನೆರೆದಿದ್ದ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈ ವೇಳೆ ಮಾತನಾಡಿದ ಶಿವಣ್ಣ, “ಎಲ್ಲ ಕನ್ನಡಭಿಮಾನಿಗಳೇ ತುಂಬಾ ಖುಷಿ ಆಯ್ತು. ಶಿವಮೊಗ್ಗ ಯವ ದಸರಾಕ್ಕೆ ಬಂದು ಉದ್ಘಾಟನೆ ಮಾಡಿ ಖುಷಿ ಆಗಿದೆ. ನಿಮ್ಮ ಮುಂದೆ ಬಂದು ತುಂಬಾ ಖುಷಿ ಆಗಿದೆ. ದಸರಾ ಈಗ ಪ್ರತಿಯೊಂದು ಜಾಗದಲ್ಲಿ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಂತ ಭಾವಿಸಿ. ಜಾಸ್ತಿ ಮಾತು ಬೇಡ. ಈಗ ಕಾರ್ಯಕ್ರಮ ನೋಡೋಣ. ಹೇಮಂತ ಹಾಡು ಹಾಡೋದಕ್ಕೆ ಬಂದಿದ್ದಾರೆ. ನಾನು ಹಾಡು ಹಾಡುತ್ತೇನೆ. ನಿಮ್ಮ ಜೊತೆ ಇರುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ ಜಾಸ್ತಿ ಭಾಷಣ ಬೇಡ. ಎಲ್ಲರ ಹಾಡು ಕೇಳಿ ಮಜಾ ತೆಗೆದುಕೊಳ್ಳೋಣ” ಎಂದರು.
Laxmi News 24×7