Breaking News

ನಾಡಹಬ್ಬ ದಸರಾ ಅಂಗವಾಗಿ ರೈತ ದಸರಾ ಉಪ ಸಮಿತಿ ವತಿಯಿಂದ ಜೆ.ಕೆ ಮೈದಾನದಲ್ಲಿ ನಡೆದ ಮುದ್ದು ಪ್ರಾಣಿಗಳ ಪ್ರದರ್ಶನ

Spread the love

ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ರೈತ ದಸರಾ ಉಪ ಸಮಿತಿ ವತಿಯಿಂದ ಜೆ.ಕೆ ಮೈದಾನದಲ್ಲಿ ನಡೆದ ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯಲ್ಲಿ ಮೈಸೂರಿನ ಜರ್ಮನ್ ಶಫರ್ಡ್ ಶ್ವಾನಕ್ಕೆ ಪ್ರಥಮ ಬಹುಮಾನ ದೊರೆಯಿತು.

ಮೈಸೂರು, ಮಂಡ್ಯ, ಬೆಂಗಳೂರು, ನೆರೆಯ ಕೇರಳ ಹಾಗೂ ಊಟಿ ಸೇರಿದಂತೆ ನಾನಾ ಭಾಗಗಳಿಂದ ಒಟ್ಟು 640 ಶ್ವಾನಗಳು ಸ್ಪರ್ಧೆಯಲ್ಲಿ ನೋಂದಣಿಯಾಗಿದ್ದವು. ಸೈಬೀರಿಯನ್ ಹಸ್ಕಿ, ಜರ್ಮನ್ ಶಫರ್ಡ್, ಮುಧೋಳ ಹಾಗೂ ವಿದೇಶಗಳ ಒಟ್ಟು 51 ತಳಿಯ ಶ್ವಾನಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಅಂತಿಮವಾಗಿ ಏಳು ತಳಿಗಳು ಪ್ರಶಸ್ತಿ ಜಯಿಸಿದ್ದು, ಮಾಲೀಕರಿಗೆ ಪ್ರಮಾಣ ಪತ್ರ ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು.

ಶ್ವಾನಗಳ ನಡಿಗೆ, ಚರ್ಮದ ಬಣ್ಣ ಹಾಗೂ ಗುಣ ಲಕ್ಷಣಗಳನ್ನು ಆಧರಿಸಿ ತೀರ್ಪುಗಾರರಾದ ಡಾ. ಅಜೀಂ ಹುಲ್ಲಾ, ಡಾ.ಕೆ.ಟಿ.ಪರಮೇಶ್ವರ್, ಡಾ.ಬಸವರಾಜು ಹಾಗೂ ಡಾ.ಭಟ್ ಅವರು ಪ್ರಶಸ್ತಿ ಗೆದ್ದ ಶ್ವಾನ ತಳಿಗಳ ಹೆಸರನ್ನು ಘೋಷಿಸಿದರು.

ಪ್ರಶಸ್ತಿ ಗೆದ್ದ ಶ್ವಾನ ತಳಿಗಳು: ಜರ್ಮನ್ ಶಫರ್ಡ್ ತಳಿಗೆ ಪ್ರಥಮ, ಬಾಕ್ಸರ್ ತಳಿಗೆ ದ್ವಿತೀಯ, ರಾಟ್ ವಿಲ್ಲರ್​ ತಳಿಗೆ ಮೂರನೇ, ಡಾಬರ್ ವೆಲಸ್ ತಳಿಗೆ ನಾಲ್ಕನೇ, ಮಾಲ್ವಿಸ್ ತಳಿಗೆ ಐದನೇ, ಮುಧೋಳ್ ತಳಿಗೆ ಆರನೇ ಹಾಗೂ ಸೈಬೀರಿಯನ್ ಹಸ್ಕಿ ತಳಿಗೆ ಏಳನೇ ಸ್ಥಾನಗಳು ದೊರೆಯಿತು.

ಈ ವೇಳೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಭೀಮಪ್ಪ ಕೆ. ಲಾಳಿ, ಪಶುಪಾಲನ ಮತ್ತು ಪಶು ವೈದ್ಯಕೀಯ ಉಪನಿರ್ದೇಶಕರು (ಆಡಳಿತ) ಡಾ.ನಾಗರಾಜು, ಉಪನಿರ್ದೇಶಕರು (ಪಾಲಿ ಕ್ಲಿನಿಕ್) ಡಾ.ರಮೇಶ್, ಸಹಾಯಕ ನಿರ್ದೇಶಕರಾದ ಡಾ.ಪೂರ್ಣನಂದ ಸೇರಿದಂತೆ ಇತರರು ಇದ್ದರು.

ಇದಕ್ಕೂ ಮುನ್ನ ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯಲ್ಲಿ ದೇಶ-ವಿದೇಶಗಳ ಶ್ವಾನಗಳು ತಮ್ಮ ತುಂಟಾಟ, ಬೆಡಗು ಬಿನ್ನಾಣದ ಮೂಲಕ ಪ್ರಾಣಿಪ್ರಿಯರ ಗಮನ ಸೆಳೆದವು. ಶ್ವಾನಗಳ ಓಡಾಟ, ಬುದ್ಧಿವಂತಿಕೆ, ಜಾಣ್ಮೆಯನ್ನು ಪ್ರದರ್ಶನದಲ್ಲಿ ನೆರೆದಿದ್ದ ಪ್ರೇಕ್ಷಕರು ಕಣ್ತುಂಬಿಕೊಂಡರು. ಮುದ್ದು ಮುದ್ದಾದ ಶ್ವಾನಗಳನ್ನು ಕಂಡು ಪ್ರಾಣಿ ಪ್ರಿಯರು ಖುಷಿಪಟ್ಟರು. ಪಿಂಕ್ ಮತ್ತು ಪರ್ಪಲ್ ಕಲರ್ ಉಡುಗೆ ತೊಡಿಸಲಾಗಿದ್ದ ಶ್ವಾನಗಳು ನೀಡಿದ ಪ್ರದರ್ಶನ ನೆರೆದಿದ್ದವರನ್ನು ಆಕರ್ಷಿಸಿದವು. ಮೈಸೂರಿನ ಡಾಗ್ ಸ್ಕ್ವಾಡ್​​ನ ಪೊಲೀಸ್ ಶ್ವಾನಗಳು ಅತ್ಯುತ್ತಮ ಪ್ರದರ್ಶನ ನೀಡುವುದರ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡವು.

ವಿವಿಧ ಶ್ವಾನ ತಳಿಗಳು: ಮುಧೋಳ ಹೌಂಡ್, ಸೈಬೀರಿಯನ್ ಹಸ್ಕಿ, ಗ್ರೇಟ್ ಡೆನ್, ಪೂಡ್ಲೀ, ಡಾಗೂ ಅರ್ಜೆಂಟೀನಾ, ರಾಜಪಾಳ್ಯಂ, ಪಿಟ್ ಬುಲ್, ಕಾಕರ್ ಸ್ಪ್ಯಾನಿಯಲ್, ಬಾಕ್ಸರ್, ಪಗ್, ಕೊಕ್ಕೊಪೋ, ಫ್ರೆಂಚ್ ಬುಲ್ ಡಾಗ್, ಓಲ್ಡ್ ಶೀಪ್ ಡಾಗ್, ಐರಿಷ್ ಸೆಟ್ಟರ್, ಬೀಗಲ್, ಡಚ್ ಶೆಪರ್ಡ್, ಜರ್ಮನ್ ಶೆಫರ್ಡ್, ಚೌ ಚೌ, ಗೋಲ್ಡನ್ ರಿಟ್ರೀವರ್, ಬಾರ್ಡರ್ ಕೋಲಿ, ಬರ್ಮೀಸ್ ಮೌಂಟೇನ್ ಡಾಗ್, ಲಾಸ್ ಅಪ್ಸೋ, ರಾಟ್ ವಿಲ್ಲರ್, ಟಿಬೆಟಿಯನ್ ಮಸ್ಟಿಫ್, ಡಾಬರ್ ಮ್ಯಾನ್, ಕಾಕರ್ ಸ್ಫ್ಯಾನಿಯಲ್, ಅಮೆರಿಕನ್​ ಬುಲ್ಲಿ, ಪೋಮೋರಿಯನ್ ಸೇರಿದಂತೆ ಮತ್ತಿತರ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ