ಭುವನೇಶ್ವರಿ ಉತ್ಸವದ ಸಮಾರೋಪ…
ವಿವಿಧ ರಾಜ್ಯಗಳ ಹಬ್ಬದಾಚರಣೆಯ ನೃತ್ಯಗಳ ಪ್ರಸ್ತುತಿ
ಭುವನೇಶ್ವರಿ ಉತ್ಸವದ ಸಮಾರೋಪ…
ವಿವಿಧ ರಾಜ್ಯಗಳ ಹಬ್ಬದಾಚರಣೆಯ ನೃತ್ಯಗಳ ಪ್ರಸ್ತುತಿ
ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ
ವಿವಿಧ ಗಣ್ಯರಿಂದ ಶ್ಲಾಘನೆ
ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ನಡೆಯುತ್ತಿದ್ದ ಭುವನೇಶ್ವರಿ ಉತ್ಸವ ಇಂದು ಸಮಾರೋಪಗೊಂಡಿತು. ಮೂರನೇಯ ದಿನವಾದ ಇಂದು ವಿವಿಧ ರಾಜ್ಯಗಳ ಹಬ್ಬಗಳನ್ನು ಆಧರಿಸಿದ ನೃತ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ನವರಾತ್ರಿಯ ನಿಮಿತ್ಯ ಆಯೋಜಿಸಿದ್ದ ನಡೆಯುತ್ತಿದ್ದ ಭುವನೇಶ್ವರಿ ಉತ್ಸವ ಇಂದು ಸಮಾರೋಪಗೊಂಡಿತು. ಸಮಾರೋಪ ಸಮಾರಂಭವನ್ನು ದಕ್ಷಿಣ ಶಾಸಕ ಅಭಯ್ ಪಾಟೀಲ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿಯವರು ಚಾಲನೆಯನ್ನು ನೀಡಿದರು. ಭುವನೇಶ್ವರಿ ಉತ್ಸವದ ಅಧ್ಯಕ್ಷೆ ಲೀಲಾ ಚೌಗುಲೆ ಅಧ್ಯಕ್ಷತೆಯನ್ನು ವಹಿಸಿದ್ದರು.
ಮೊದಲದಿನ ಉತ್ತರ ಶಾಸಕರಾದ ಆಸೀಫ್ ಸೇಠ್ ಮತ್ತು ಸಾಹಿತಿ ಎಂ.ಎಸ್. ಆಶಾದೇವಿ ಅವರ ಹಸ್ತದಿಂದ ಭುವನೇಶ್ವರಿ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಇದೇ ವೇಳೆ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು. ನಂತರ ಕರ್ನಾಟಕ ಭಗಿನಿ ಮಂಡಳದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಕಿಲಾಡಿ ಅತ್ತೆ ನಾಟಕ ಪ್ರದರ್ಶನ ನಡೆಯಿತು. ಎರಡನೇಯ ದಿನ ನಡೆದ ನಾಟಕ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಉಂಟಾಯಿತು. ಮೂರನೇಯ ದಿನವಾದ ಇಂದು ವಿವಿಧ ರಾಜ್ಯಗಳ ಹಬ್ಬಗಳನ್ನು ಆಧರಿಸಿದ ನೃತ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಸುಮಾರು 6 ಮಂಡಳಗಳು ಇದರಲ್ಲಿ ಭಾಗಿಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಈ ಕುರಿತು ಭುವನೇಶ್ವರಿ ಉತ್ಸವದ ಅಧ್ಯಕ್ಷೆ ಲೀಲಾ ಚೌಗುಲೆ ಅವರು ಇನ್ ನ್ಯೂಸ್;ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
Laxmi News 24×7