Breaking News

ಮಧುಮೇಹ ಪೀಡಿತನ ಕಾಲು ತುಂಡರಿಸದೇ ಯಶಸ್ವಿ ಚಿಕಿತ್ಸೆ ನೀಡಿದ ವೈದ್ಯರು: ನೂತನ ಐವಿಎಲ್ ತಂತ್ರಜ್ಞಾನ ಬಳಕೆ!

Spread the love

ಬೆಳಗಾವಿ: ಮಧುಮೇಹ ಪೀಡಿತಗೊಂಡು ಮೊಣಕಾಲಿನ ಕೆಳಗೆ ರಕ್ತನಾಳದಲ್ಲಿ ಉಂಟಾದ ತೊಂದರೆಯಿಂದ (ಡಯಾಬಿಟಿಕ್ ಫೂಟ್/ ಪಿವಿಡಿ ಕಾಯಿಲೆ) ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗಿ ಗಾಯ ಹಾಗೂ ತೀವ್ರ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಿಂದ ನೀಡಲಾಗಿರುವ ಚಿಕಿತ್ಸೆ ಯಶಸ್ವಿಯಾಗಿದೆ.

”ಮೆರಿಲ್ ಮೆಸನ್ ಇಂಟ್ರಾವ್ಯಾಸ್ಕುಲರ್ ಲಿಥೋಟ್ರಿಪ್ಸಿ ಎಂಬ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಯಶಸ್ವಿ ಚಿಕಿತ್ಸಾ ಪ್ರಕ್ರಿಯೆ ನಡೆಸಿ ಕಾಲು ತುಂಡರಿಸುವುದನ್ನು ಉಳಿಸುವಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ನ್ಯುರೋ ಹಾಗೂ ವೆಸ್ಕುಲರ ಇಂಟರ್ವೆನ್ಷನಲ್’​ ರೆಡಿಯಾಲಾಜಿ ವಿಭಾಗದ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ” ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. (ಕರ್ನಲ್) ದಯಾನಂದ ತಿಳಿಸಿದರು.

ಚಿಕಿತ್ಸೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿರುವ ವೈದ್ಯರು (ETV Bharat)

ಇಲ್ಲಿನ ಕೆಎಲ್ಇ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ಗೋಕಾಕ ತಾಲೂಕಿನ 58 ವರ್ಷ ಹಾಗೂ ಬೆಳಗಾವಿಯ ಮೂಲದ 55 ವರ್ಷದ ವ್ಯಕ್ತಿಯು ಟೈಪ್ 2 ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದರು. ಕಾಲಿನಲ್ಲಿನ ರಕ್ತ ಸಂಚಾರ ಸ್ಥಗಿತಗೊಂಡು. ತೀವ್ರವಾದ ನೋವು ಹಾಗೂ ಗಾಯಗಳಿಂದ ಬಳಲುತ್ತಿದ್ದರು. ಈ ಹಿಂದೆ ಅವರಿಗೆ ಕಾಲಿನ ಎಂಜಿಯೊಪ್ಲಾಸ್ಟಿ ಮಾಡಿದರೂ ಈ ತೊಂದರೆ ನಿವಾರಣೆಯಾಗಿರಲಿಲ್ಲ.

ರೋಗಿಯು ತೀವ್ರತರವಾದ ನೋವಿನಿಂದ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಾಗಿದ್ದರು. ಇಲ್ಲಿಯ ವೈದ್ಯರು ರೋಗಿಯನ್ನು ತೀವ್ರತರವಾದ ತಪಾಸಣೆಗೂಳಪಡಿಸಿದಾಗ ಅವರ ಕಾಲಿನಲ್ಲಿ ಕ್ಯಾಲ್ಸಿಫೈಡ್ ರಕ್ತನಾಳಗಳು ಕಂಡು ಬಂದವು. ಕ್ಯಾಲ್ಸಿಫೈಡ್ ರಕ್ತನಾಳಗಳ ಚಿಕಿತ್ಸೆಯು ವೈದ್ಯಕೀಯ ಕ್ಷೇತ್ರದಲ್ಲೇ ತೀವ್ರ ಸವಾಲು ಒಡ್ಡುವ ಪ್ರಕ್ರಿಯೆ ಆಗಿದ್ದರಿಂದ ಅತ್ಯಾಧುನಿಕ ನೂತನ ತಂತ್ರಜ್ಞಾನವಾದ ಇಂಟ್ರಾವಾಸ್ಕುಲರ್ ಲಿಥೊಟ್ರಿಪ್ಸಿ (ಐವಿಎಲ್) ಮೂಲಕ ರಕ್ತ ಸಂಚಾರ ಸುಗಮಗೊಳಿಸಲಾಯಿತು” ಎಂದು ವಿವರಿಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ