Breaking News

ರೈಲು ಹಳಿಮೇಲೆ ಬಿದ್ದ ನೌಕಾನೆಲೆ ಅಧಿಕಾರಿ ರಕ್ಷಣೆ: ಪ್ರಾಣ ಉಳಿಸಿದ ಯುವಕನಿಗೆ ನೌಕಾನೆಲೆಗೆ ಆಹ್ವಾನಿಸಿ ಸನ್ಮಾನ!

Spread the love

ಕಾರವಾರ: ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ನೌಕಾನೆಲೆ ಅಧಿಕಾರಿಯನ್ನು ರಕ್ಷಣೆ ಮಾಡಿದ ಕಾರವಾರದ ಯುವಕನನ್ನು ನೌಕಾನೆಲೆ ಅಧಿಕಾರಿಗಳು ಗೌರವಿಸಿ ಸನ್ಮಾನಿಸಿದ್ದಾರೆ.

ಆಗಸ್ಟ್ 1 ರಂದು ಕಾರವಾರದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಿಂದ ಐಎನ್ಎಸ್ ತಬರ್ ನೌಕೆಯಲ್ಲಿ ಅಧಿಕಾರಿಯಾಗಿದ್ದ ಸಾಕೇತ ಕಶ್ಯಪ್ ಎಂಬಾತ ಕಾಲು ಜಾರಿ ಟ್ರ್ಯಾಕ್ ಮೇಲೆ ಬಿದ್ದಿದ್ದರು. ನಗರದ ನಂದನಗದ್ದ ಬಡಾವಣೆಯ ಬಂಗಾರದ ಕೆಲಸ ಮಾಡುವ ನಾಗಪ್ರಸಾದ್ ರಾಯ್ಕರ್ ಎನ್ನುವ ಯುವಕ ಅಧಿಕಾರಿಯನ್ನು ರಕ್ಷಣೆ ಮಾಡಿದ್ದನು.

ಅಧಿಕಾರಿ ರೈಲಿನಿಂದ ಟ್ರ್ಯಾಕ್ ಮೇಲೆ ಬಿದ್ದು ಜ್ಞಾನ ತಪ್ಪಿದ್ದನ್ನು ಯಾರೂ ಗಮನಿಸಿರಲಿಲ್ಲ. ಟ್ರ್ಯಾಕ್ ಮೇಲೆ ಮತ್ತೊಂದು ರೈಲು ಬಂದಿದ್ದರೆ ಅವರ ಮೇಲೆ ಹತ್ತಿ ಹೋಗುವ ಪರಿಸ್ಥಿತಿಯಲ್ಲಿ ಬಿದ್ದಿದ್ದನ್ನು ನಾಗಪ್ರಸಾದ್ ಗಮನಿಸಿದ್ದರು. ತನ್ನನ್ನು ರಕ್ಷಣೆ ಮಾಡಿ ಎಂದು ಕೂಗಿ ಜ್ಞಾನ ತಪ್ಪಿದ್ದ ಅಧಿಕಾರಿಯನ್ನು ಗಮನಿಸಿದ್ದ ನಾಗಪ್ರಸಾದ್ ರಾಯ್ಕರ್ ತಮ್ಮ ಬೈಕ್​ನಲ್ಲಿಯೇ ಕೂರಿಸಿಕೊಂಡು ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು.

Honored young man

ರೈಲಿನಿಂದ ಬಿದ್ದಿದ್ದ ನೌಕಾನೆಲೆ ಅಧಿಕಾರಿಗೆ ಗಂಭೀರವಾಗಿ ಗಾಯವಾಗಿದ್ದು, ರಕ್ತಸ್ರಾವ ಆಗುತ್ತಿದ್ದರೂ ಅದನ್ನು ಲೆಕ್ಕಿಸದೇ ನಾಗಪ್ರಸಾದ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಆತನ ಮುಖಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ವಿಷಯ ತಿಳಿದ ನೌಕಾನೆಲೆ ಅಧಿಕಾರಿಗಳು ಆಸ್ಪತ್ರೆಗೆ ಬಂದು ಆತನನ್ನು ಪತಂಜಲಿ ಆಸ್ಪತ್ರೆ ಕರೆದುಕೊಂಡು ಹೋಗಿ ಚಿಕಿತ್ಸೆ ಮುಂದುವರೆಸಿದ್ದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ