Breaking News

ಪ್ರಿಯಕರನ ಜೊತೆ ಸೇರಿ ತಾಯಿಯಿಂದಲೇ ಮಗಳ ಕೊಲೆ: ಕಠಿಣ ಶಿಕ್ಷೆಗೆ ಸಂಬಂಧಿಕರ ಆಗ್ರಹ

Spread the love

ಹಾವೇರಿ: ಪ್ರಪಂಚದಲ್ಲಿ ಕೆಟ್ಟ ತಂದೆ ಇರಬಹುದು. ಆದ್ರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ ಈ ಮಾತಿಗೆ ಅಪವಾದ ಎಂಬಂತೆ ನಡೆದುಕೊಂಡಿದ್ದಾಳೆ ಜಿಲ್ಲೆಯ ರಾಣೆಬೆನ್ನೂರಿನ ಮಹಿಳೆ. ಅನಾಥ ಶವವೆಂದು ಪೊಲೀಸರು ಅಂತ್ಯಕ್ರಿಯೆ ಮಾಡಿದ್ದರು. ಗುರುವಾರ ಬಾಲಕಿಯ ತಂದೆ ಮತ್ತು ಸಂಬಂಧಿಕರು ಸಮಾಧಿ ಸ್ಥಳಕ್ಕೆ ಆಗಮಿಸಿ ವಿಧಿವಿಧಾನ ನೆರವೇರಿಸಿದರು.

ಪ್ರಕರಣ ಯಲ್ಲಾಪುರ ಬಳಿಯ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಅಗಸ್ಟ್ 2 ರಂದು ಸುಮಾರು ನಾಲ್ಕು ವರ್ಷದ ಹೆಣ್ಣುಮಗುವಿನ ಶವ ಪತ್ತೆಯಾಗಿತ್ತು. ಮುಖ ಸುಟ್ಟಸ್ಥಿತಿಯಲ್ಲಿ ನೀರಲ್ಲಿ ತೇಲುತ್ತಿದ್ದ ಮಗುವನ್ನು ಕಂಡ ಸ್ಥಳೀಯರು ಗುತ್ತಲ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ವಿಷಯ ತಿಳಿದ ಪೊಲೀಸರು ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಅಲ್ಲದೆ ಈ ಕುರಿತಂತೆ ಅಕ್ಕಪಕ್ಕದ ಸ್ಟೇಷನ್ ಮಾಹಿತಿ ತಿಳಿಸಿದ್ದರು. ಆದರೆ ಶವ ನಿರ್ಜಲೀಕರಣವಾಗಲಾರಂಭಿಸಿದಾಗ ಗುತ್ತಲದ ರುದ್ರಭೂಮಿಯಲ್ಲಿ ಮಗುವಿನ ಅಂತ್ಯಕ್ರಿಯೆ ಮಾಡಿದ್ದರು.

ದಾಂಪತ್ಯಕ್ಕೆ ಕುತ್ತು ತಂದ ಪರ ಪುರುಷನ ಜೊತೆ ಸಂಬಂಧ: ಜಿಲ್ಲೆಯ ರಾಣೆಬೆನ್ನೂರಿನ ಮಂಜುನಾಥ್ 17 ವರ್ಷದ ಹಿಂದೆ ಗಂಗಮ್ಮಳನ್ನು ಮದುವೆಯಾಗಿದ್ದ. ಇವರಿಬ್ಬರ ದಾಂಪತ್ಯಕ್ಕೆ ಮೂರು ಮಕ್ಕಳು ಜನಿಸಿದ್ದವು. ಎರಡು ಹೆಣ್ಣು ಒಂದು ಗಂಡು ಮಗು ಪಡೆದು ಸುಖ ಸಂಸಾ ನಡೆಸುತ್ತಿದ್ದರು. ಆದರೆ ಹೋಟೆಲಗೆ ಕೆಲಸಕ್ಕೆ ಅಂತಾ ಗಂಗಮ್ಮಾ ಹೋದಾಗ ಪರಪುರುಷ ಅಣ್ಣಪ್ಪನೊಂದಿಗೆ ಸ್ನೇಹವಾಗಿ, ಬಳಿಕ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಆಗ ಗಂಗಮ್ಮ ಗಂಡ ಮಂಜುನಾಥನನ್ನು ಬಿಟ್ಟು ಬೇರೆ ಕಡೆ ವಾಸಿಸಲಾರಂಭಿಸಿದ್ದಳು. ಈ ಕುರಿತಂತೆ ಹಿರಿಯರು ಪಂಚಾಯಿತಿ ನಡೆಸಿ ಬುದ್ಧಿವಾದ ಹೇಳಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ ಎಂದು ಗುತ್ತಲ ಠಾಣೆ ಪೊಲೀಸರು ತಿಳಿಸಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ