ವಿಜಯಪುರ…:ರಾಜಕೀಯ ಪಕ್ಷಗಳು ಕೋಮುವಾದ ಸೃಷ್ಠಿಸಿ ಜನರನ್ನು ಭಾಗವಹಿಸಬೇಕು ಎಂಬ ವಾತಾವರದ ಸೃಷ್ಠಿಸಿವೆ; ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ*
ಮತ್ತೆ ಮುನ್ನಲೆಗೆ ಬಂದಿರುವ ವೀರಶೈವ ಲಿಂಗಾಯತ ಗೊಂದಲ ನಿವಾರಣೆಗೆ ಮತದಾನ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ ಸಲಹೆ ನೀಡಿದರು.
ವಿಜಯಪುರ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವ ರು, ವೀರಶೈವ ಲಿಂಗಾಯತ ಗೊಂದಲ ನಿನ್ನೆ ಮೊನ್ನೆಯದಲ್ಲ. ಶತ ಮಾನದಿಂದ ಚರ್ಚಿತವಾಗುತ್ತಾ ಗೊಂದಲದ ವಿಷಯವಾಗಿ ಪುನ ರಾವರ್ತನೆ ಯಾಗುತ್ತಲೇ ಇದೆ. ಈಗ 80ರ ದಶಕದಿಂದಲೂ ಮತ್ತೆ ಸ ಮಸ್ಯೆ ಉದ್ಭವಿಸಿದೆ ಎಂದರು.
ಇಷ್ಟೊಂದು ದೀರ್ಘಕಾಲಕ್ಕೆ ಇದು ಹೋಗ ಬಾರದಿತ್ತು. ವೀರಶೈವ ಮತ್ತು ಲಿಂಗಾಯತ ವ್ಯಾಪ್ತಿಯಲ್ಲಿ ಬರುವ ಬಹುತೇಕರು ಒಂದಾಗಿ ಹೋಗಬೇಕು ಎಂದು ಬಯಸುತ್ತಾರೆ. ನಗರವಾಸಿಗಳು, ವಿದ್ಯಾವಂತರು ಪ್ರತ್ಯೇಕವಾಗಿ ಹೋಗಬೇಕು ಎಂದು ಹೇಳುತ್ತಿದ್ದಾರೆ.
ಹೀಗಾಗಿ ಕೇಂದ್ರ ಸರ್ಕಾರದ ಜಾತಿ ಜನಗಣತಿ ಆರಂಭವಾಗುವ ವೇಳೆಗಾದರೂ ಜೀವಂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರ ಯತ್ನ ಮಾಡಬೇಕಿದೆ ಎಂದರು. ಈ ನಿಟ್ಟಿನಲ್ಲಿ ಗೊಂದಲ ನಿವಾರಣೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತದಾನ ಪ್ರಕ್ರಿಯೆ ನಡೆಸುವ ಮೂಲಕ ಪರಿಹಾರ ದೊರಕಿಸಬೇಕು. ಅಲ್ಲದೇ, ಇದು ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದರು.
ಈ ನಿಟ್ಟಿನಲ್ಲಿ ಗೊಂದಲ ನಿವಾರಣೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತದಾನ ಪ್ರಕ್ರಿಯೆ ನಡೆಸುವ ಮೂಲಕ ಪರಿಹಾರ ದೊರಕಿಸಬೇಕು. ಅಲ್ಲದೇ, ಇದು ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದರು. ಬಸವಣ್ಣನವರ ಸಾಮಾಜಿಕ, ಧರ್ಮಿಕ ಆದರ್ಶಗಳನ್ನು ಪಾಲನೆ ಮಾಡಲು ಆಗುತ್ತದಾ?, ಅದನ್ನು ಪಾಲನೆ ಮಾಡಿದರೆ ಅವರು ಮಹಾನ ಪುರುಷರಾಗುತ್ತಾರೆ.
ಇದನ್ನು ಲಾಭಕ್ಕಾಗಿ, ರಾಜಕೀಯವಾಗಿ ಬಳಕೆ ಆಗುತ್ತಿರುವುದು ನೋವಿನ ಸಂಗತಿ ಎಂದರು. ಇನ್ನೂ ಬಾನುಮುಷ್ತಾಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಮೈಸೂರಿನ ದಸರಾ ಉತ್ಸವ ಎನ್ನುವುದು ನಾಡ ಉತ್ಸವವಾಗಿದೆ. ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಸಾಧಕರು ಯಾರೇ ಆಗಿದ್ದರು ಅವರು ಒಪ್ಪಿಕೊಂಡು ಪಾಲ್ಗೊಳ್ಳುವುದಾದರೆ ಅದನ್ನು ಸ್ವೀಕಾರ ಮಾಡಬೇಕು, ವಿರೋಧ ಮಾಡಬಾರದು.
ಹಿಂದು, ಮುಸ್ಲಿಂ, ಜೈನ್, ಬೌಧ್ದ ಯಾರೇ ಇರಲಿ ಸಾಧಕರು ಪಾಲ್ಗೊಳ್ಳುವುದು ತಪ್ಪಿಲ್ಲಾ ಎಂದು ಸಮರ್ಥಿಸಿಕೊಂಡರು.
ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಕೋಮುವಾದವನ್ನು ಹುಟ್ಟುಹಾಕಿದ್ದಾರೆ. ಕೋಮುವಾದಲ್ಲಿ ಹಿಂದೆ ಜನರು ಭಾಗವಹಿಸುತ್ತಿರಲಿಲ್ಲ. ರಾಜಕೀಯ ಪಕ್ಷಗಳು ಕೋಮುವಾದ ಸೃಷ್ಠಿಸಿ ಜನರನ್ನು ಭಾಗವಹಿಸಬೇಕು ಎಂಬ ವಾತಾವರದ ಸೃಷ್ಠಿಸಿವೆ. ಹಿಂದೂ ಕೋಮವಾದವಾಗಿರಲಿ, ಮುಸ್ಲಿಂ ಕೋಮುವಾದವಾಗಿರಲಿ ಇದನ್ನು ಮಾಡಬಾರದು, ಇದು ದೇಶಕ್ಕೆ ಮಾರಕ ಎಂದರು. ಈ ಸಂದರ್ಭದಲ್ಲಿ ಎಸ್. ಎಸ್ ಪಾಟೀಲ, ಕಾರ್ಯದರ್ಶಿ ಆರ್ ಎಸ್ ಪಾಟೀಲ, ಸಹ ಪ್ರಧಾನ ಕಾರ್ಯದರ್ಶಿ ಪ್ರಭು ಬೆಳ್ಳಿ, ಪ್ರಧಾನ ಉಪಸ್ಥಿತರಿದ್ದರು.
Laxmi News 24×7