Breaking News

ಡಿಜೆ ಬದಲಿಗೆ ಭಕ್ತರಿಗೆ ಹೋಳಿಗೆ ಊಟ ವಿತರಿಸಿದ ಗಣಪತಿ ಮಂಡಳಿ

Spread the love

ಹಾವೇರಿ : ಉತ್ತರ ಕರ್ನಾಟಕದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದರೆ ಸಮಿತಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತವೆ. ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಕ್ತರ ಮನಸ್ಸನ್ನು ಸಮಿತಿಗಳು ಸೆಳೆಯುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಗಣೇಶ ಮಂಡಳಿಗಳು ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸುತ್ತಿವೆ. ಗಣೇಶ ಸಮಿತಿ ಸದಸ್ಯರು ಭಕ್ತರ ದಾನಿಗಳನ್ನು ಕರೆದು ಅನ್ನಪ್ರಸಾದ ನೀಡಲು ಆರಂಭಿಸಿ ದಶಕಗಳಾಗಿವೆ.

ಡಿಜೆ ಬದಲು ಹೋಳಿಗೆ ಊಟ: ಕೆಲ ವರ್ಷಗಳಿಂದ ಗಣೇಶನ ಆಗಮನ ಮತ್ತು ನಿಮಜ್ಜನಕ್ಕೆ ಡಿಜೆ ಸಹ ಕಾಲಿಟ್ಟಿತ್ತು. ಗಣೇಶನನ್ನು ತರುವಾಗ ಇಲ್ಲದ ಡಿಜೆ ಗಣೇಶ ಕಳಿಸುವಾಗ ಅನಿವಾರ್ಯ ಎನ್ನುವಂತಾಗಿತ್ತು. ಇದಕ್ಕೆ ಹಾವೇರಿ ಜಿಲ್ಲೆ ಹೊರತಾಗಿಲ್ಲ. ಆದರೆ, ಪ್ರಸ್ತುತ ವರ್ಷ ಜಿಲ್ಲಾಡಳಿತ ಡಿ. ಜೆ. ನಿಷೇಧಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಡಿಜೆ ಬಳಕೆ ಮಾಡಿದ ಸಮಿತಿ ಮತ್ತು ಸೌಂಡ್ ಸಿಸ್ಟಮ್‌ಗಳ ಮೇಲೆ ಎಫ್ಐಆರ್ ಸಹ ದಾಖಲಿಸಿದೆ.ಒಂದು ಕಡೆ ಶಬ್ಧಮಾಲಿನ್ಯ, ಮತ್ತೊಂದು ಕಡೆ ಡಿ. ಜೆ. ಬಳಕೆಗೆ ಗಣೇಶ ಸಮಿತಿಗಳು ಆರ್ಥಿಕ ಹೊರೆಯನ್ನು ತೆರಬೇಕಾಗಿತ್ತು. ಆದರೆ, ಇದೇ ಹಣವನ್ನು ಸಾವಿರಾರು ಭಕ್ತರಿಗೆ ಊಟ ಬಡಿಸಿದರೆ ಹೇಗಿರುತ್ತೆ ಅಂತಾ ಹಾವೇರಿ ನಾಗೇಂದ್ರನಮಟ್ಟಿ ಕಾ ರಾಜಾ ಸಮಿತಿಯ ಸದಸ್ಯರಿಗೆ ಐಡಿಯಾ ಬಂದಿದೆ. ಅವರು ಕೇವಲ ಅನ್ನಸಂತರ್ಪಣೆ ಮಾತ್ರವಲ್ಲ, ಭಕ್ತರಿಗೆ ಹೋಳಿಗೆ ಊಟ ಹಾಕಿಸೋಣ ಎಂದು ನಿರ್ಧರಿಸಿದ್ದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ