Breaking News

ಶೆಟ್ಟಿ ಗಲ್ಲಿ ಗಣೇಶೋತ್ಸವ ಮಂಡಳದಿಂದ ಮಹಾಪ್ರಸಾದ ಶ್ರೀ ಸತ್ಯನಾರಾಯಣಸ್ವಾಮಿಯ ದರ್ಶನ ಪಡೆದ ಭಕ್ತರು

Spread the love

ಶೆಟ್ಟಿ ಗಲ್ಲಿ ಗಣೇಶೋತ್ಸವ ಮಂಡಳದಿಂದ ಮಹಾಪ್ರಸಾದ
ಶ್ರೀ ಸತ್ಯನಾರಾಯಣಸ್ವಾಮಿಯ ದರ್ಶನ ಪಡೆದ ಭಕ್ತರು
ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳ ಶೆಟ್ಟಿ ಗಲ್ಲಿ
ಇಂದು 5ನೇ ದಿನ ಶ್ರೀ ಸತ್ಯನಾರಾಯಣ ಪೂಜೆ
ಮಹಾಪ್ರಸಾದದ ಆಯೋಜನೆ ಮಾಡಿದ ಮಂಡಳ
ಸಾವಿರಾರು ಜನರು ಪಡೆದು ಲಾಭ
ಬೆಳಗಾವಿಯ ಶೆಟ್ಟಿ ಗಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳದ ವತಿಯಿಂದ ಮಹಾಪ್ರಸಾದವನ್ನು ಆಯೋಜಿಸಲಾಗಿತ್ತು.
ಬೆಳಗಾವಿ ಮಹಾನಗರದ ಶೆಟ್ಟಿ ಗಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳದ ವತಿಯಿಂದ ಪ್ರತಿಷ್ಠಾಪಿಸಲಾದ ಶ್ರೀ ಗಣೇಶನ ಮಂಟಪದಲ್ಲಿ ಇಂದು ಗಣೇಶೋತ್ಸವದ 5ನೇ ದಿನ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಮಹಾಪ್ರಸಾದವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 2 ರಿಂದ ಮೂರು ಸಾವಿರ ಜನರು ಈ ಮಹಾಪ್ರಸಾದದ ಲಾಭವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಗೋರಕ್ಷಕ ನಿಲೇಶ್ ಅವರು ಪ್ರತಿ ವರ್ಷದಂತೆ ಈ ಬಾರಿಯೂ 39ನೇ ವರ್ಷ ಶೆಟ್ಟಿ ಗಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳವು ಅತ್ಯಂತ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸುತ್ತಿದ್ದು, ಮಹಾಪ್ರಸಾದವನ್ನು ಆಯೋಜಿಸಿದೆ ಎಂದರು. 
ಇನ್ನು ಮಂಡಳದ ಅಧ್ಯಕ್ಷರು ಮಾತನಾಡಿ  ಮಾಹಿತಿಯನ್ನು ನೀಡಿದರು. ವಾರದಲ್ಲಿ ಮೂರು ಬಾರಿ ಅಲ್ಪೋಪಹಾರದೊಂದಿಗೆ 5ನೇ ದಿನ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಮಹಾಪ್ರಸಾದವನ್ನು ಆಯೋಜಿಸಲಾಗಿದೆ ಎಂದರು. 
ಈ ಸಂದರ್ಭದಲ್ಲಿ ಉಮೇಶ್, ದೀಪಕ್ ಶೆಟ್ಟಿ, ಕೃಷ್ಣಾ ಚವ್ಹಾಣ್ ಸೇರಿದಂತೆ ಶೆಟ್ಟಿ ಗಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ