Breaking News

‘ಕೃಷಿ ದೇವೋಭವ’ ಕಬ್ಬು ಬೆಳೆಯ ವಿಚಾರ ಸಂಕಿರಣ ಕಾರ್ಯಕ್ರಮ

Spread the love

ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಡಾ. ಬಿ.ಎಸ್. ಜೀರಿಗೆ ಆಡಿಟೋರಿಯಂನಲ್ಲಿ ಕನ್ನಡದ ಪ್ರತಿಷ್ಠಿತ ಸುದ್ದಿ
ವಾಹಿನಿ ನ್ಯೂಸ್ ಫರ್ಸ್ಟ್ ಕನ್ನಡ (NewsFirstKannada) ವತಿಯಿಂದ ಹಮ್ಮಿಕೊಳ್ಳಲಾದ ‘ಕೃಷಿ ದೇವೋಭವ’ ಕಬ್ಬು ಬೆಳೆಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದೆ.
ಈ ವಿಶೇಷ ಕಾರ್ಯಕ್ರಮವು ರೈತರಿಗೆ — ಉತ್ತಮ ಕಬ್ಬು ಇಳುವರಿಗಾಗಿ ಅನುಸರಿಸಬೇಕಾದ ಆಧುನಿಕ ಕೃಷಿ ವಿಧಾನಗಳು, ಮಣ್ಣಿನ ಆರೋಗ್ಯ ಸಂರಕ್ಷಣೆ, ಗೊಣ್ಣೆ ಹುಳು ಸಮಸ್ಯೆಗೆ ಪರಿಹಾರಗಳು ಹಾಗೂ ತಂತ್ರಜ್ಞಾನ ಬಳಕೆಯಿಂದ ಕಬ್ಬು ಬೆಳೆ ಉತ್ಪಾದನೆ ಹೆಚ್ಚಿಸುವ ಮಾರ್ಗಗಳು ಕುರಿತು ಸಮಗ್ರ ತಿಳುವಳಿಕೆಯನ್ನು ನೀಡಿತು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, NewsFirst Kannada ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್. ರವಿಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಹೆಚ್.ಡಿ. ಕೋಳೆಕರ್, ಜಿಕೆವಿಕೆ ಬೆಂಗಳೂರು ಕೃಷಿ ವಿವಿಯ ಡಾ. ಚನ್ನಕೇಶವ ಎಸ್, ಧಾರವಾಡ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ
ಚನ್ನಪ್ಪ ಅಂಗಡಿ, ಸಾಯಿಲ್ ಟ್ರಸ್ಟ್ ಮುಖ್ಯಸ್ಥರಾದ ಪಿ. ಶ್ರೀನಿವಾಸ್, ಮತ್ತಿಕೊಪ್ಪ ಸಾಯಿಲ್ ಸೈನ್ಸ್ ನ ಎಸ್.ಎಂ. ವಾರದ ಸೇರಿದಂತೆ ಗಣ್ಯರು ಹಾಗೂ ಅನೇಕ ರೈತ ಬಾಂಧವರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ