Breaking News

ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ ಅವಳಿನಗರದಲ್ಲಿನ 400 ಡ್ರಗ್ ಪೆಡ್ಲರ್ಸ್ ಹಾಗೂ ಸೇವನೆ ಮಾಡುವವರ ಪರೇಡ್

Spread the love

ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆ
ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ ಅವಳಿನಗರದಲ್ಲಿನ 400 ಡ್ರಗ್ ಪೆಡ್ಲರ್ಸ್ ಹಾಗೂ ಸೇವನೆ ಮಾಡುವವರ ಪರೇಡ್
ಮಾಡಲಾಯಿತು.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು
ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಾಕೀತು ಮಾಡಲಾಗಿದ್ದು.
ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ತಯಾರಿ ಮಾಡಿಕೊಂಡಿದ್ದೇವೆ . ರೌಡಿ ಶೀಟರ್ ಗಳ ಮೇಲೆ ಹಲವು ರೀತಿಯ ಕ್ರಮ ಕೈಗೊಂಡಿದ್ದೇವೆ
ಧಾರ್ಮಿಕ ಮುಖಂಡರು, ಆಯೋಜಕರು ಸೇರಿ ಹಲವರನ್ನ ಭೇಟಿ ಆಗಿದ್ದೇವೆ. ಸೇಫ್ಟಿ ಐಲ್ಯಾಂಡ್ ಕೂಡ ಪಾಲಿಕೆಗೆ ಮನವಿ ಮಾಡಿಕೊಂಡಿದ್ದೇವೆ
ಡ್ರಗ್ ಪೆಡ್ಲರ್ಸ್ ಹಾಗೂ ಸೇವನೆ ಮಾಡುವವರ ಪರೇಡ್ ಮಾಡ್ತಾ ಇದ್ದೇವೆ. ನಾನು ಬಂದಾಗಿಂದ 1,800 ಕ್ಕೂ ಹೆಚ್ಚು ಜನರನ್ನ ತಪಾಸನೆ ಮಾಡಿದ್ದೇವೆ. ಅದರಲ್ಲಿ 900ಕ್ಕೂ ಹೆಚ್ಚು ಪಾಸಿಟಿವ್ ಬಂದಿವೆ .
200ಕ್ಕೂ ಹೆಚ್ಚು ಪ್ರಕರಣ ದಾಖಲು ಮಾಡಿದ್ದೇವೆ. ಸುಮಾರು 90 ಪೆಡ್ಲಿಂಗ್ ಪ್ರಕರಣ ದಾಖಲಿಸಿಕೊಂಡಿದ್ದೇವೆ 2024-25 ಸಾಲಿನಲ್ಲಿ 80ಕ್ಕೂ ಹೆಚ್ಚು ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. 250ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದೇವೆ.
ಈ ವರ್ಷದಲ್ಲಿ 105 ಜನರನ್ನ ಗಡಿಪಾರು ಮಾಡಿದ್ದೇವೆ. 19 ಜನ ಡ್ರಗ್ ಪೆಡ್ಲರ್ಸ್ ಇದ್ದರೂ ಅವರನ್ನ ಗಡಿಪಾರು ಆದೇಶ ಮಾಡಿದ್ದೇವೆ.
ಅವರ ಪೋಷಕರನ್ನ ಕರೆಯಿಸಿ ಮಾಹಿತಿ ಕೊಡುವ ಕೆಲಸ ಮಾಡಿದ್ದೇವೆ ಎಂದರು.
ಹಬ್ಬದ ಸಂದರ್ಭದಲ್ಲಿ ಇವರುಗಳಿಂದ ತೊಂದರೆ ಆಗಬಾರದು ಅಂತ ಪರೇಡ್ ಮಾಡಲಾಗುತ್ತಿದೆ
ಒಟ್ಟು 900ಕ್ಕೂ ಹೆಚ್ಚು ಜನ ಇದ್ದಾರೆ .ಇವತ್ತು 400 ಜನರನ್ನ ಪರೇಡ್ ಗೆ ಕರೆದುಕೊಂಡು ಬಂದಿದ್ದೇವೆ
ಪರೇಡ್ ಮಾಹಿತಿ ಪಡೆದು ಕೆಲವರು ತಪ್ಪಿಸಿಕೊಂಡಿದ್ದಾರೆ ಎಂದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ