ಲಿಂಗಾಯತ ಮಹಿಳಾ ಸಮಾಜದಿಂದ ಅರಿಶಿಣ ಕುಂಕುಮ ಕಾರ್ಯಕ್ರಮ
ಅರಿಶಿಣ ಕುಂಕುಮ ನಮ್ಮ ಸಂಸ್ಕೃತಿ ಯ ಪ್ರತೀಕ: ಬಸವಾನಂದ ಶ್ರೀ
ಬೆಳಗಾವಿ: ಅರಿಶಿಣ ಕುಂಕುಮ ನಮ್ಮ ಸಂಸ್ಕೃತಿ ಯ ಪ್ರತೀಕ ಇಂತಹ ಕಾರ್ಯಕ್ರಮ ಮೂಲಕ ನಮ್ಮ ಸಂಸ್ಕೃತಿಯ ಸಕಾರಾತ್ಮಕ ಮೌಲ್ಯವನ್ನು ಪಸರಿಸುವ ಕಾರ್ಯವಾಗುತ್ತಿದೆ ಎಂದು ಧಾರವಾಡದ ಮನಗುಂಡಿಯ ಚನ್ನಯ್ಯಗಿರಿಯ ಶ್ರೀ ಗುರುಬಸವ ಮಹಾಮನೆಯ ಶ್ರೀ ಬಸವಾನಂದ ಮಹಾಸ್ವಾಮಿಗಳು ಹೇಳಿದರು.
ಇಲ್ಲಿನ ಲಿಂಗಾಯತ ಭವನದಲ್ಲಿ ಬುಧವಾರ 20 ರಂದು ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಆಯೋಜಿಸಲಾದ ಸಂತ ವಾಣಿ ಮತ್ತು “ಶ್ರಾವಣ ಮಾಸದ ಅರಿಶಿಣ ಕುಂಕುಮ” ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಅರಿಶಿಣ ಕುಂಕುಮದ ಮಹತ್ವ ವಿವರಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ, ಹೆಣ್ಣಿಗೆ ಬಹಳ ಮಹತ್ವ ಪೂರ್ಣವಾದ ಸ್ಥಾನವನ್ನು ನೀಡಿ ಗೌರವಿಸಲಾಗುತ್ತಿದೆ. ಅದರಂತೆ ಶ್ರಾವಣ ಮಾಸದ ನಿಮಿತ್ತ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಅರ್ಥಪೂರ್ಣವಾದ ಕಾರ್ಯಕ್ರಮ ಆಯೋಜಿಸಿರುವುದು ಒಳ್ಳೆಯ ಕಾರ್ಯವಾಗಿದೆ ಎಂದು ಹಾರೈಸಿದರು.
ಶ್ರಾವಣ ಮಾಸದಲ್ಲಿ ಮಹಿಳೆಯರನ್ನು ಸಂಘಟಿಸುವ ಉದ್ದೇಶದಿಂದ ಸಾಮೂಹಿಕ ಅರಿಶಿಣ ಕುಂಕುಮ ಆಯೋಜನೆ, ಅರಿಶಿಣ ರೋಗ ನಿರೋಧಕ ಮಾತ್ರವಲ್ಲದೇ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಅರಿಶಿಣ ಬಾಹ್ಯವಾಗಿ ಹಾಗೂ ಆಂತರಿಕವಾಗಿಯೂ ಸೇವಿಸುವುದರಿಂದ ದೇಹದಲ್ಲಿನ ಕಲ್ಮಶಗಳನ್ನು ಹೊರ ಹಾಕುವ ಕೆಲಸ ಮಾಡುತ್ತದೆ ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿ. ಅಲ್ಲದೇ ಮಹಿಳೆಯರು ಸಂಘಟಿತರಾಗುವಂತೆ ಅವರು ಶ್ರೀಗಳು ಕರೆ ನೀಡಿದರು.
ಯಾರನ್ನು ದ್ವೇಷಿಸದೇ ಸರ್ವರಿಗೂ ಒಳಿತನ್ನು ಬಯಿಸಿ, ಅಪ್ಪಿಕೊಳ್ಳುವುದು ಧರ್ಮವೇ ಲಿಂಗಾಯತ ಧರ್ಮವು. ದಯೆಯಿಲ್ಲದ ಧರ್ಮವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ.
ಒಂದು ವೇಳೆ ಅಂಥ ಧರ್ಮವಿದ್ದರೂ ಅದು ಪ್ರಯೋಜನಕಾರಿಯಾದ ಧರ್ಮವಲ್ಲ. ಈ ಕಾರಣಕ್ಕಾಗಿಯೇ ಬಸವಣ್ಣನವರು ‘ದಯವಿಲ್ಲದ ಧರ್ಮ ಅದೇವುದಯ್ಯ?’ ಎಂದು ಕೇಳುತ್ತಾರೆ. ದಯೆ ಇಲ್ಲದ ಧರ್ಮವು ಏನು ತಾನೆ ಮಾಡಬಲ್ಲುದು? ದಯೆ ಇಲ್ಲದೆ ತಾವು ಧರ್ಮಿಗಳೆಂದು ಬಡಾಯಿ ಕೊಚ್ಚಿಕೊಳ್ಳುವವರನ್ನು ಭಗವಂತನೂ ಮೆಚ್ಚಲಾರನು. ಆದ್ದರಿಂದ ದಯವೇ ಧರ್ಮದ ಮೂಲವೆಂದು ಅವರು ಸ್ಪಷ್ಟಪಡಿಸುತ್ತಾರೆ ಎಂದು ಶ್ರೀಗಳು ಹೇಳಿದರು.
ಇತರರ ದುಃಖಗಳನ್ನು ಕಂಡು ಸಂತಸಪಡುವುದು ಮನಸ್ಸಿನ ಮನುಷ್ಯನಲ್ಲ, ಸಹಾಯ-ಸಹಕಾರ ನೀಡುವವರೇ ನಿಜ ಮನುಷ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಲಿಂಗಾಯತ ಮಹಿಳಾ ಸಮಾಜದ ಗೌರವ ಅಧ್ಯಕ್ಷರಾದ ಶೈಲಜಾ ಬಿಂಗೆ ರತ್ನಪ್ರಭಾ ಬೆಲ್ಲದ ಜ್ಯೋತಿ ಬದಾಮಿ ಶೈಲಾ ಪಾಟೀಲ್ ಆಶಾ ಪಾಟೀಲ್ ಸುರೇಖಾ ಮಾನ್ವಿ ಅನುರಾಧ ಭಾಗಿ ಅಧ್ಯಕ್ಷೇ ಮಧುಮತಿ ಹಿರೇಮಠ, ಕಾರ್ಯದರ್ಶಿ ರಕ್ಷಾ ದೇಗಿನಾಳ, ಸಹ ಕಾರ್ಯದರ್ಶಿ ಸರೋಜಾ ನಿಶಾನ್ಹಾರ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು
Laxmi News 24×7