ಚಿಕ್ಕೋಡಿ: ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 50 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ಚಿಕ್ಕೋಡಿ ತಾಲೂಕಿನ ಹಿರೇಕೊಡಿ ಗ್ರಾಮದ ಯಕ್ಸಂಬಾ-ಚಿಕ್ಕೋಡಿ ರಸ್ತೆಯಿಂದ ದೇಸಾಯಿ, ಪಟೇಲ, ಮಾನೆ ತೋಟದ ರಸ್ತೆ ಸುಧಾರಣೆ ಮತ್ತು ಹಳ್ಳಕ್ಕೆ ಬ್ರಿಜ್ ನಿರ್ಮಾಣಕ್ಕೆ ರೂ 2 ಕೋಟಿ 30 ಲಕ್ಷ ಅನುದಾನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಹಿರೇಕೊಡಿ ಗ್ರಾಮದ ದೇಸಾಯಿ, ಪಟೇಲ ತೋಟದ ಜನರು ಹಳ್ಳಕ್ಕೆ ಸೇತುವೆ ನಿರ್ಮಿಸಿ, ರಸ್ತೆ ನಿರ್ಮಿಸಿಕೊಡುವಂತೆ ಇಲ್ಲಿನ ನಿವಾಸಿಗಳು ಬಹು ದಿನಗಳಿಂದ ಬೇಡಿಕೆ ಸಲ್ಲಿಸಿದ್ದರು.
ಈ ಹಿನ್ನಲೆಯಲ್ಲಿ ಇವತ್ತು ದೇಸಾಯಿ ತೋಟದ ರಸ್ತೆ ನಿರ್ಮಾಣ ಹಾಗೂ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಈ ರಸ್ತೆ ನಿರ್ಮಾಣದಿಂದ ರೈತರಿಗೆ ಕಬ್ಬು ಸಾಗಣಿಕೆಗೆ ಹಾಗೂ ಟಾಂಗ್ಯಾಕೋಡಿ ಸಂಪರ್ಕಕ್ಕೆ ಈ ಅನುಕೂಲವಾಗಲಿದೆ ಎಂದು ಹೇಳಿದರು.
ಈಗಾಗಲೇ ಹಿರೇಕೊಡಿ ಗ್ರಾಮಕ್ಕೆ ಅಲ್ಪಸಂಖ್ಯಾತರ ಮೋರಾರ್ಜಿ ದೇಸಾಯಿ ವಸತಿ ಕಾಲೇಜು ಕಟ್ಟಡಕ್ಕೆ ರಾಜ್ಯ ಸರ್ಕಾರದಿಂದ ರೂ 27 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರವಾಗಿ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಹಿರೇಕೊಡಿ ಗ್ರಾ.ಪಂ ಅಧ್ಯಕ್ಷೆ ರಮಾದೇವಿ ಮುಕುಂದ, ಚಿಕ್ಕೋಡಿ ಪುರಸಭೆ ಸದಸ್ಯ ಅನೀಲ ಮಾನೆ, ರಾಮಾ ಮಾನೆ, ಗುಲಾಬ ಬಾಗವಾನ, ಗ್ರಾ.ಪಂ ಉಪಾಧ್ಯಕ್ಷ ರಾಮಾ ಬಂಡಗರ, ದಾದಾ ಪಟೇಲ, ಸುರೇಶ ಚೌಗಲಾ, ಬಾಬರ ಪಟೇಲ, ನಿಜಾಮ ಪಟೇಲ, ಗಂಗಾಧರ ಕಮತೆ, ಸತೀಶ ಧಾಮನ್ನವರ, ಮಹಾದೇವ ಪವಾಡೆ, ಪ್ರಹ್ಲಾದ ಪಾಂಡವ, ಮಲ್ಲಿಕಾರ್ಜುನ ಚೌಗಲಾ, ಗಣಪತಿ ಮಾಳಿ, ಸುನೀಲ ಭೋಸಲೆ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಿರೇಕೊಡಿ ಗ್ರಾಮದ ಲಕ್ಷ್ಮೀಕೊಡಿಯಲ್ಲಿ ಶಾಸಕರ ಅನುದಾನದಲ್ಲಿ ರೂ 10.00 ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಶ್ರೀ ಹನುಮಾನ ದೇವಸ್ಥಾನದ ಸಮುದಾಯ ಭವನವನ್ನು ಶಾಸಕರು ಉದ್ಘಾಟಿಸಿದರು.
Laxmi News 24×7