ಶುಧ್ದ ನೀರಿನ ಘಟಕಗಳನ್ನು ಉದ್ಘಾಟಿಸಿದ ಶಾಸಕ ಗಣೇಶ ಹುಕ್ಕೇರಿ
ಚಿಕ್ಕೋಡಿ: ನಗರದ ಇಂದಿರಾ ನಗರದಲ್ಲಿ 2 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶಾಸಕ ಗಣೇಶ ಹುಕ್ಕೇರಿ ಉದ್ಘಾಟಿಸಿದರು.

ಬಳಿಕ ಮಾತನಾಡಿ ಅವರು ಮುಖ್ಯಮಂತ್ರಿ ಅವರ ವಿಶೇಷ ಅನುದಾನದಲ್ಲಿ 10 ಕೋಟಿ ರೂಪಾಯಿಗಳು ತಂದು ಚಿಕ್ಕೋಡಿ ನಗರದ ಪ್ರತಿಯೊಂದು ವಾರ್ಡನಲ್ಲಿ ಡಾಂಬರೀಕರಣ ಕಾರ್ಯ ಕೈಗೊಳ್ಳಲಾಗುವುದು. ಇಂದಿರಾ ನಗರದಲ್ಲಿ ಜನರಿಗೆ ಶುಧ್ಧ ಕುಡಿಯುವ ದೃಷ್ಟಿಯಿಂದ ಆರ್ ಓ ಪ್ಲಾಂಟ್ ಅಳವಡಿಸಿಲಾಗಿದೆ. ಈ ತರಹ ಪ್ರತಿಯೊಂದು ವಾರ್ಡ್ ನಲ್ಲಿ ಎರಡು ಆರ ಓ ಪ್ಲಾಂಟ್ ಗಳು ಅಳವಡಿಸಲಾಗುವುದು ಎಂದರು.

ಸ್ಥಳೀಯ ಪುರಸಭೆ ಸದಸ್ಯ ಸಾಬಿರ ಜಮಾದಾರ ಮಾತನಾಡಿ ಗುಡ್ಡಗಾಢ ಪ್ರದೇಶ ಇರೋದ್ರಿಂದ ಮಹಿಳೆಯರಿಗೆ ಕೆಳಗಡೆ ಹೋಗಿ ನೀರು ತರಲಿಕ್ಕೆ ತೊಂದರೆ ಆಗುತಿತ್ತು.ಆ ಕಾರಣಕ್ಕಾಗಿ ಇಲ್ಲಿ ಕುಡಿಯುವ ನೀರಿನ ಘಟಕಗಳು ಅಳವಡಿಸಲಾಗಿದೆ ಎಂದರು.ಎಂಎಲ್ಸಿ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ರಸ್ತೆ, ಚರಂಡಿ, ವಿದ್ಯುತ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ತರಹದ ಅಭಿವೃದ್ಧಿ ಕಾರ್ಯಗಳು ಇಂದಿರಾನಗರದಲ್ಲಿ ಆಗಿದೆ ಎಂದರು.

ಪುರಸಭೆಯ ಹಿರಿಯ ಸದಸ್ಯ ರಾಮ ಮಾನೆ ಮಾತನಾಡಿ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ ಹಾಗೂ ಪುರಸಭೆ ಸದಸ್ಯ ಸಾಬೀರ ಜಮಾದಾರ ಅವರ ನೇತೃತ್ವದಲ್ಲಿ ಇಂದಿರಾ ನಗರದಲ್ಲಿ ಆರ್. ಓ ಪ್ಲಾಂಟ ಅಳವಡಿಸಿದ್ದು ಒಳ್ಳೆ ಕಾರ್ಯ ಎಂದರು.

ಈ ಸಂಧರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಈರಫಾನ ಬೇಪಾರಿ,ಅನೀಲ ಮಾನೆ,ಗುಲಾಬ ಹುಸೇನ್ ಬಾಗವಾನ,ಫಿರೋಜ ಕಲಾವಂತ,ವರ್ಧಮಾನ ಸದಲಗೆ,ಚಂದ್ರಕಾಂತ ಕಾಮಕರ,ಸಲಿಂ ನಾಯಿಕವಾಡಿ,ಗಜಾನನ ಪೋತದಾರ, ವಿನೋದ ಕಾಮಕರ,ಅರಫಿ ನಾಯಿಕವಾಡಿ,ಜಾಹಂಗೀರ ಹುದಲಿ,ಮಂಜೂರ ಜಮದಾರ,ಸಂತೋಷ ಕಾಮಕರ,ರವಿ ದರ್ಜಿ,ಸುಧೀರ ಮಾಯಪ್ಪಗೋಳ,ಹಣಮಂತ ಗಾಡಿವಡ್ಡರ,ಶಂಕರ ಗಾಡಿವಡ್ಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Laxmi News 24×7