Breaking News

ಭಾರತಕ್ಕೆ ಕೀರ್ತಿತಂದ ಹೆಮ್ಮೆಯ ಮೂಡಲಗಿಯ ಮಗಳು ಭಾರತಕ್ಕೆ ಕೀರ್ತಿತಂದ ಹೆಮ್ಮೆಯ ಮೂಡಲಗಿಯ ಮಗಳು

Spread the love

ಭಾರತಕ್ಕೆ ಕೀರ್ತಿತಂದ ಹೆಮ್ಮೆಯ ಮೂಡಲಗಿಯ ಮಗಳು
ಭಾರತಕ್ಕೆ ಕೀರ್ತಿತಂದ ಹೆಮ್ಮೆಯ ಮೂಡಲಗಿಯ ಮಗಳು
ಮಲೇಶಿಯಾದಲ್ಲಿ ನಡೆದ ಎಷೀಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್ ಶಿಪ್
ಏಷಿಯನ್ ಟೇಕ್ವಾಂಡೋ ಕಂಚಿನ ಪದಕ ವಿಜೇತೆ ಲಕ್ಷ್ಮೀಗೆ ಅದ್ದೂರಿ ಸ್ವಾಗತ
ಲಕ್ಷ್ಮೀ ರಡರಟ್ಟಿ ಅವರಿಗೆ ಮೂಡಲಗಿಯಲ್ಲಿ ತೆರೆದ ವಾಹನದಲ್ಲಿ ಮೇರವಣಿಗೆ
ಮಲೇಶಿಯಾದಲ್ಲಿ ಇತ್ತಿಚೆಗೆ ಜರುಗಿದ ಎಷೀಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದ ಮೂಡಲಗಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಲಕ್ಷ್ಮೀ ರಡರಟ್ಟಿ ಅವರನ್ನು ಗುರುವಾರ ಮೂಡಲಗಿ ಯಲ್ಲಿ ತೆರೆದ ವಾಹನದಲ್ಲಿ ಮೇರವಣಿಗೆ ಮೂಲಕ ಸ್ವಾಗತಿಸಲಾಯಿತು.
ಮಲೇಶಿಯಾದಲ್ಲಿ ಏಷಿಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಭಾರತಕ್ಕೆ ಕೀರ್ತಿ ತಂದಿರುವ ಮೂಡಲಗಿಯ ಲಕ್ಷ್ಮೀ ಮಲ್ಲಪ್ಪಾ ರಡರಟ್ಟಿ ಗುರುವಾರ ಸಂಜೆ ತವರೂರಿಗೆ ಆಗಮಿಸಿದಾಗ ಅಭೂತಪೂರ್ವ ಸ್ವಾಗತ , ಸನ್ಮಾನಗಳು ಜರುಗಿದವು. ಮೂಡಲಗಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಪಟ್ಟಣದ ಗಣ್ಯರು, ಮುಖಂಡರು, ಜನಪ್ರತಿನಿಧಿಗಳು ಹಾಗೂ ಸನ್ಮಾನಿಸಿ ಪೂರಕ್ಕೆ ಬರಮಾಡಿಕೊಂಡರು .
ಸಂಸ್ಥೆಯಿಂದ ತೆರೆದ ಜೀಪನಲ್ಲಿ ಮೇರವಣಿಗೆ ಜರುಗಿತು. ಝಾಂಜ ಪಥಕ್, ವಿವಿಧ ವಾಧ್ಯ ಮೇಳದೊಂದಿಗೆ ಮಂಜುನಾಥ ಸೈನಿಕ ತರಬೇತಿ ಪ್ರಶಿಕ್ಷಣಾರ್ಥಿಗಳ ಉದ್ದನೆಯ ಸಾಲು , ನೂರಾರು ಸಂಖ್ಯೆಯ ಮಹಿಳೆಯರು, ದಾರಿಯುದ್ದಕ್ಕೂ ಪಟಾಕಿ, ಬಾನ್ ಬೀರುಸುಗಳು ಮೇರವಣಿಗೆಗೆ ಮೇರಗು ನೀಡಿದವು . ದಾರಿಯುದ್ದಕ್ಕೂ ಲಕ್ಷ್ಮೀ ಸಾಧನೆಗೆ ಜೈಕಾರ ಹಾಕಿದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ