ಸಂಪೂರ್ಣವಾಗಿ ಭರ್ತಿಯಾದ ಬೆಳಗಾವಿಗರ ಜೀವದಾಯಿನಿ “ರಾಕಸಕೊಪ್ಪ ಜಲಾಶಯ”
ಮಹಾಪೌರರಿಂದ ಗಂಗಾಪೂಜೆ…ಬಾಗಿನ ಅರ್ಪಣೆ
ಬೆಳಗಾವಿ ಮಹಾನಗರದ ಜನರ ಜಲಸ್ತ್ರೋತವಾದ ರಾಕಸಕೊಪ್ಪ ಜಲಾಶಯ ಭರ್ತಿಯಾಗಿದ್ದು, ಬೆಳಗಾವಿ ಮಹಾನಗರದ ಜನತೆಯ ಪರವಾಗಿ ಇಂದು ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಗಂಗಾಪೂಜೆಯನ್ನು ನೆರವೇರಿಸಿ ಬಾಗಿನ ಅರ್ಪಿಸಲಾಯಿತು.
ಬೆಳಗಾವಿ ಮಹಾನಗರದ ಜನರ ಜೀವದಾಯಿನಿ ರಾಕಸಕೊಪ್ಪ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, ಇಂದು ಮಹಾಪೌರ ಮಂಗೇಶ್ ಪವಾರ್ ಮತ್ತು ಉಪಮಹಾಪೌರ ವಾಣಿ ಜೋಶಿ ಅವರು ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಮಹಾಪೌರ ಮಂಗೇಶ್ ಪವಾರ್ ಅವರು, ಇಂದು ರಾಕಸಕೊಪ್ಪ ಜಲಾಶಯದಲ್ಲಿ ಬೆಳಗಾವಿ ಮಹಾನಗರದ ಜನತೆಯ ಪರವಾಗಿ ಮಹಾನಗರ ಪಾಲಿಕೆಯ ವತಿಯಿಂದ ಗಂಗಾಪೂಜೆಯನ್ನು ಮಾಡಿ ಬಾಗಿನ ಅರ್ಪಿಸಲಾಗಿದೆ. ಈ ಬಾರಿ ಸಮರ್ಪಕ ನೀರು ಭರ್ತಿಯಾಗಿದ್ದು, ಈ ಬಾರಿ ನೀರಿನ ಮಹಾಜನತೆಗೆ ನೀರಿನ ಸಮಸ್ಯೆಯಾಗುವುದಿಲ್ಲವೆಂದರು.
ಇನ್ನು ಮಹಾನಗರ ಪಾಲಿಕೆ ಆಯುಕ್ತರಾದ ಶುಭಾ ಬಿ. ಅವರು, 58 ವಾರ್ಡಗಳಲ್ಲಿ ರಾಕಸಕೊಪ್ಪ ಜಲಾಶಯದಿಂದ ನೀರು ಪೂರೈಸಲು ಎಲ್. ಆಂಡ್ ಟಿ ಕಂಪನಿಗೆ 48 ವಾರ್ಡಗಳಿಗೆ ನೀರಿನ ವಾಹಿನಿ ಅಳವಡಿಸಲು ಕಾಮಗಾರಿಯನ್ನು ನೀಡಲಾಗಿತ್ತು. ಇದರಲ್ಲಿ 2 ವಾರ್ಡಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ವಾರ್ಡಗಳಲ್ಲಿ ಡಿಸೆಂಬರ್ 26 ರ ವರೆಗೆ ಪೂರ್ಣಗೊಳಿಸಲು ಅಂತಿಮ ಅವಧಿಯನ್ನು ನೀಡಲಾಗಿದೆ. ಯಾವುದೇ ರೀತಿಯ ನೀರಿನ
ಸೋರಿಕೆಯಾಗದಂತೆ ವಿಶೇಷ ತಂಡ ರಚಿಸಿ ಕ್ರಮಕೈಗೊಳ್ಳಲಾಗುತ್ತಿದೆ.
ಜನರು ಕೂಡ ನೀರಿನ ಅಪವ್ಯಯವನ್ನು ತಪ್ಪಿಸಿ ಮಿತವ್ಯಯವಾಗಿ ನೀರನ್ನು ಬಳಸಬೇಕೆಂದರು.
ಈ ಸಂದರ್ಭದಲ್ಲಿ 58 ನಗರಸೇವಕರು ಮತ್ತು ಸಿಬ್ಬಂದಿಗಳು ಗಂಗಾಪೂಜೆಗೆ ಸಾಕ್ಷಿಯಾದರು.
Laxmi News 24×7