Breaking News

ಸರ್ವ ಸಮಾಜದ ಏಳ್ಗೆಗೆ ಜಾತಿ ಗಣತಿ ಸಮೀಕ್ಷೆ; ಸಿಎಂ ಸಿದ್ಧರಾಮಯ್ಯ ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್.ಟಿ.ಐ. ವಾರ್ಷಿಕ ಸಮಾವೇಶ

Spread the love

ಸರ್ವ ಸಮಾಜದ ಏಳ್ಗೆಗೆ ಜಾತಿ ಗಣತಿ ಸಮೀಕ್ಷೆ; ಸಿಎಂ ಸಿದ್ಧರಾಮಯ್ಯ
ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್.ಟಿ.ಐ. ವಾರ್ಷಿಕ ಸಮಾವೇಶ
ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು
ಆರ್.ಟಿ.ಐ. ವಾರ್ಷಿಕ ಸಮಾವೇಶ
ಸರ್ವ ಸಮಾಜದ ಏಳ್ಗೆಗೆ ಜಾತಿ ಗಣತಿ ಸಮೀಕ್ಷೆ
ಸಿಎಂ ಸಿದ್ಧರಾಮಯ್ಯ ಅಭಿಪ್ರಾಯ
ಡಾ. ಬಾಬಾಸಾಹೇಬ ಅಂಬೇಡ್ಕರರು ಬರೆದ ಸಂವಿಧಾನದಂತೆ ಎಲ್ಲ ಸಮಾಜಗಳಿಗೂ ಸಮಾನತೆಯನ್ನು ನೀಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರವು ಮಾಡಿದ್ದು, ರಾಜ್ಯದಲ್ಲಿ ಜಾತಿ ಗಣತಿ ಸಮೀಕ್ಷೆಯೊಂದಿಗೆ ಸಂವಿಧಾನದ ಆಶಯಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಹೊರಟಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್.ಟಿ.ಐ. ವಾರ್ಷಿಕ ಸಮಾವೇಶವನ್ನು ಉದ್ಧೇಶಿಸಿ ಸಿಎಂ ಸಿದ್ಧರಾಮಯ್ಯನವರು ಮಾತನಾಡಿದರು.ಭಾರತೀಯ ಸಂವಿಧಾನದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರರು ಎಲ್ಲರಿಗೂ ಶಿಕ್ಷಣ, ಸಮಾನತೆ ಮತ್ತು ಮೌಲ್ಯಾಧಾರಿತ ಹಕ್ಕುಗಳನ್ನು ನೀಡಿದ್ದಾರೆ. ಮಾಜಿ ಪಿಎಂ ಜವಾಹರಲಾಲ್ ನೆಹರು ಅವರು ದೇಶಕ್ಕೆ ಸಾಮಾಜೀಕ ನ್ಯಾಯವನ್ನು ನೀಡಲು ಶ್ರಮಿಸಿದ್ದಾರೆ.
ವರ್ಗರಹಿತ ಸಮಾಜವನ್ನು ನಿರ್ಮಿಸಲು ಇದು ಪೂರಕವಾಗಿದೆ. ದೇಶದ ಸಂವಿಧಾನ ಜಗತ್ತಿನಲ್ಲಿಯೇ ಮಾದರಿಯಾಗಿದೆ. ಅತಿ ಹೆಚ್ಚಾದ ಜನಸಂಖ್ಯೆಯನ್ನು ಹೊಂದಿದ್ದ ಭಾರತ ದೇಶದಲ್ಲಿದ್ದ ವಂಶಾಧಾರಿತ ವೃತ್ತಿ ಆಧಾರಿತ ಪದ್ಧತಿಯನ್ನು ಸಂವಿಧಾನವೂ ಬದಲಾಯಿಸಿದೆ. ದೇಶದಲ್ಲಿದ್ದ ಅಸ್ಪೃಶ್ಯತೆಯನ್ನು ಇದು ಹೊಗಲಾಡಿಸಿದೆ. ಎಲ್ಲ ವರ್ಗ ಎಲ್ಲ ಜಾತಿ ಧರ್ಮಗಳ ಏಳ್ಗೆಗೆ ಏಕರೂಪ ನ್ಯಾಯವನ್ನು ಸಂವಿಧಾನವು ನೀಡಿದೆ. ಕರ್ನಾಟಕವು ಸಾಮಾಜೀಕ ನ್ಯಾಯವನ್ನು ಒದಗಿಸಲು ಸದಾಬದ್ಧವಾಗಿದೆ. ಆಂತರೀಕ ಮೀಸಲಾತಿ ನೀಡಿ ಎಲ್ಲ ಧರ್ಮ ಜಾತಿಗಳಿಗೆ ನ್ಯಾಯ ನೀಡುವ ಉದ್ಧೇಶದಿಂದ ಜಾತಿ ಸಮೀಕ್ಷೆಗೆ ಮುಂದಾಗಿದೆ ಎಂದರು.
ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದರಾದ ಪ್ರಿಯಾಂಕಾ ಗಾಂಧಿ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ವಿವಿಧ ಸಚಿವರು, ವಿವಿಧ ರಾಜ್ಯಗಳ ಪಕ್ಷದ ಮುಖಂಡರು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ