Breaking News

ವಿಜಯೇಂದ್ರನಿಗೆ ಮತ್ತೇ ಮಣೆ ಹಾಕಿದ್ರೇ… ಹೊಸ ಪಕ್ಷ ಕಟ್ಟುವುದು ಗ್ಯಾರಂಟಿ…; ಯತ್ನಾಳ

Spread the love

ವಿಜಯೇಂದ್ರನಿಗೆ ಮತ್ತೇ ಮಣೆ ಹಾಕಿದ್ರೇ… ಹೊಸ ಪಕ್ಷ ಕಟ್ಟುವುದು ಗ್ಯಾರಂಟಿ…; ಯತ್ನಾಳ
ಶ್ರೀರಾಮು ಹೇಳಿದ್ದು ಕೇಳಲು ನನಗೆ ಹುಚ್ಚು ಹಿಡಿದಿದೆಯಾ???
ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿಜಯೇಂದ್ರನನ್ನ ಮತ್ತೇ ತಲೆಯ ಮೇಲೆ ಕೂರಿಸಿಕೊಂಡರೇ, ಹೊಸ ಪಕ್ಷ ಗ್ಯಾರಂಟಿ. ನಮ್ಮ ಸರ್ಕಾರ ಬಹುಮತ ಬರುವುದು ಗ್ಯಾರಂಟಿ. ಕರ್ನಾಟಕ ಉದ್ಧಾರವಾಗುವುದು ಗ್ಯಾರಂಟಿ. ಹೇಗಾದರೂ ವಿಜಯದಶಮಿ ಹತ್ತಿರವಾಗುತ್ತಿದೆ.
ವಿಜಯೇಂದ್ರನ ನೇತೃತ್ವ ಒಪ್ಪದ ಕಾರಣ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಗೊಂದಲುಮಯವಾಗಿದೆ ಎಂದರು.
ಇನ್ನು ವಿಜಯೇಂದ್ರ ಸಮ್ಮುಖದಲ್ಲಿ ರೆಡ್ಡಿಯೊಂದಿಗೆ ಒಂದಾದ ಬಳಿಕ ಯತ್ನಾಳ್ ಅವರನ್ನು ಕೈಕಾಲು ಬಿದ್ದು, ಒಪ್ಪಿಸುತ್ತೇವೆಂದ ಶ್ರೀರಾಮುಲು ಮಾತಿಗೆ ಪ್ರತಿಕ್ರಿಯಿಸಿದ ಯತ್ನಾಳ್, ರಾಮುಲು ಹೇಳುತ್ತಲೇ ಜೈ ಅನ್ನಲು ನನಗೆ ಹುಚ್ಚು ಹಿಡಿದಿದೆಯಾ? ರಾಮುಲುಗೆ ಸಚಿವರಾಗಿದ್ದಾಗಾ ವಿಜಯೇಂದ್ರ ಹಲವಾರು ಬಾರಿ ಅಪಮಾನ ಮಾಡಿ, ಅವರ ಭವಿಷ್ಯವನ್ನೇ ಹಾಳು ಮಾಡಿದ್ದಾರೆ.
ಆದರೀಗ ಅವನಿಗೆ ಜೈ ಎನ್ನುತ್ತಿರುವುದು ವಿಷಾದನೀಯ ಎಂದರು.
ಇನ್ನು ನಾನು ಬಿಜೆಪಿಯಲ್ಲಿಯೇ ಇದ್ದೇವೆ. ಯಡಿಯೂರಪ್ಪ 3 ಬಾರಿ ಹೊರ ಹಾಕಿದ್ದಾರೆ. ಬಿಜೆಪಿಯಲ್ಲಿ ಕೇವಲ ಯಡಿಯೂರಪ್ಪ, ಅವರ ನಂತರ ವಿಜಯೇಂದ್ರ. ಆ ನಂತರ ಮೊಮ್ಮಗನಿರಬೇಕು.
ಉಳಿದವರು ಇವರ ಮನೆ ಕಸ ಹೊಡೆಯಬೇಕೆಂಬ ಆಸೆ. ಯಡಿಯೂರಪ್ಪಗೆ ಅಪ್ಪಾಜಿ ಅನ್ನುವವರು ಅಪ್ಪಾಜಿ ಕಂಪನಿಗಳು ಎಂದು ಹರಿಹಾಯ್ದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ