ಹಾವೇರಿ: ನಾಡೋಜ ಪಾಟೀಲ್ ಪುಟ್ಟಪ್ಪ, ಸಾಹಿತಿ ಚಂದ್ರಶೇಖರ್ ಪಾಟೀಲ್, ವಿಮರ್ಶಕ ಜಿ.ಎಸ್. ಅಮೂರ್ ಸೇರಿದಂತೆ ನೂರಾರು ಸ್ವಾತಂತ್ರ ಹೋರಾಟಗಾರರಿಗೆ ಅಕ್ಷರ ನೀಡಿದ ಶಾಲೆ ಹಾವೇರಿಯ ಮುನಿಸಿಫಲ್ ಹೈಸ್ಕೂಲ್.
1892 ಆಗಸ್ಟ್ ಒಂದರಂದು ಹಾವೇರಿ ಪಟ್ಟಣದ ಏಲಕ್ಕಿ ಓಣಿಯಲ್ಲಿ ಹಳೆಯ ಕಟ್ಟಡದಲ್ಲಿ 26 ವಿದ್ಯಾರ್ಥಿಗಳಿಂದ ಆರಂಭವಾದ ಈ ಶಾಲೆ ಇಲ್ಲಿಯವರೆಗೆ ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳನ್ನು ಕಂಡಿದೆ. ಇಲ್ಲಿ ಕಲಿತವರು ದೇಶ – ವಿದೇಶಗಳಲ್ಲಿ ಉನ್ನತ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಆಗಸ್ಟ್ 1 ಕ್ಕೆ 133 ವರ್ಷ ಪೂರೈಸಲಿರುವ ಈ ಶಾಲೆ ಹಲವು ಎಡರು ತೊಡರು ಕಂಡಿದೆ.
ಆರಂಭದಲ್ಲಿ ಏಲಕ್ಕಿ ಓಣಿಯಲ್ಲಿ ಆರಂಭವಾದ ಈ ಶಾಲೆ ನಂತರ ಸ್ಥಳೀಯ ಸಂಸ್ಥೆ ಮುನ್ಸಿಪಾಲಿಟಿ ಆಡಳಿತದ ಆಶ್ರಯದಲ್ಲಿ ನಡೆಯುತ್ತಿತ್ತು. ಶಾಲೆಯ ಈ ದುಃಸ್ಥಿತಿ ಕಂಡ ಸ್ವಾತಂತ್ರ ಹೋರಾಟಗಾರ ಹೊಸಮನಿ ಸಿದ್ದಪ್ಪ ಮುನ್ಸಿಪಲ್ ಮೈದಾನದ ಆವರಣದಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರವಾಯಿತು. 1929ರಲ್ಲಿ ಸ್ವಾತಂತ್ರ ಹೋರಾಟಗಾರ ಹೊಸಮನಿ ಸಿದ್ದಪ್ಪ ತಮ್ಮ ಸ್ವಂತ 40 ಸಾವಿರ ರೂಪಾಯಿ ಹಣ ನೀಡಿ ಹೊಸ ಕಟ್ಟಡ ನಿರ್ಮಿಸಿದ್ದರು.
ಸುಮಾರು 11 ಎಕರೆ ವಿಸ್ತೀರ್ಣದ ಭೂಮಿ ಹೊಂದಿದ್ದ ಈ ಶಾಲೆಯ ಉದ್ಘಾಟನಾ ಫಲಕದಲ್ಲಿ ಹೊಸಮನಿ ಸಿದ್ದಪ್ಪ ತಮ್ಮ ಹೆಸರು ಬಾರದಂತೆ ನೋಡಿಕೊಳ್ಳುವ ಮೂಲಕ ಪ್ರಚಾರದಿಂದ ದೂರ ಉಳಿದಿದ್ದರು. ಸುಮಾರು 12 ಕೊಠಡಿಗಳಿರುವ ಈ ಕಟ್ಟಡದಲ್ಲಿ ಆರನೇ ತರಗತಿಯಿಂದ 10 ನೇ ತರಗತಿಯವರೆಗೆ ವಿದ್ಯಾಭ್ಯಾಸ ಆರಂಭವಾಯಿತು.
Laxmi News 24×7