ಬೆಳಗಾವಿ: ಕೃಷಿ ಹೊಂಡದಲ್ಲಿ ಮುಳುಗಿ ತಂದೆ – ಮಗ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.

ಘಟನೆ ವಿವರ: ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಬಸವರಾಜ ಕೆಂಗೇರಿ (40) ಹಾಗೂ ಪುತ್ರ ಧರೆಪ್ಪ ಬಸವರಾಜ ಕೆಂಗೇರಿ (14) ಮೃತರು. ಬಸವರಾಜ ಪತ್ನಿ ತವರೂರು ಮಳಗಲಿ ಗ್ರಾಮದಲ್ಲಿರುವ ಜಮೀನಿನಲ್ಲಿ ಸೋಯಾಬಿನ್ ಬೆಳೆಗೆ ಕೀಟನಾಶಕ ಸಿಂಪಡಿಸಲು ಹೋಗಿದ್ದ ವೇಳೆ ದುರಂತ ಸಂಭವಿಸಿದೆ. ನೀರು ತರಲು ಹೋಗಿದ್ದ ಬಸವರಾಜ ಪುತ್ರ ಧರೆಪ್ಪ, ಮತ್ತೋರ್ವ ಬಾಲಕ ಬಾಗಪ್ಪ ಸಣ್ಣಕ್ಕಿ ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದಿದ್ದರು. ತಕ್ಷಣ ಇಬ್ಬರ ರಕ್ಷಣೆಗೆ ದೌಡಾಯಿಸಿದ ಬಸವರಾಜ ಮತ್ತು ಪುತ್ರ ಧರೆಪ್ಪ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಪೊಲೀಸರು ಮಾಹಿತಿ ನೀಡಿದ್ದಾರೆ.ಬದುಕುಳಿದ ಬಾಲಕ: ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯರು ಮೂವರನ್ನು ನೀರಿನಿಂದ ಹೊರ ತೆಗೆದಿದ್ದರು. ಅಷ್ಟರೊಳಗೆ ತಂದೆ – ಮಗ ಸಾವನ್ನಪ್ಪಿದ್ದಾರೆ. ಬಾಗಪ್ಪ ಬದುಕುಳಿದಿದ್ದು, ಆತನನ್ನು ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.![]()
ದುರಂತ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಘಟನೆ, ಮೂವರು ಯುವಕರು ನೀರುಪಾಲು: ಕಾವೇರಿ ನದಿ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಮೈಸೂರು ಜಿಲ್ಲೆಯ ಮೀನಾಕ್ಷಿಪುರ ಗ್ರಾಮದಲ್ಲಿ ಸಂಭವಿಸಿದೆ. ಮಂಡ್ಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಹಾವೇರಿಯ ಕೃಷ್ಣ (21), ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿ ಗ್ರಾಮದ ಸಿದ್ದೇಶ್ (22) ಹಾಗೂ ಮೈಸೂರಿನ ಪಿರಿಯಾಪಟ್ಟಣದ ಪ್ರಶಾಂತ್(21) ಮೃತಪಟ್ಟಿವರು.
Laxmi News 24×7