Breaking News

.5 ದಶಕಗಳಿಂದ ಹಿನ್ನೀರಿನ ಸಂಪರ್ಕ ಕೊಂಡಿಯಾಗಿದ್ದ ಲಾಂಚ್ ಸೇವೆ ಬಂದ್

Spread the love

ಶಿವಮೊಗ್ಗ: ಶರಾವತಿ ಹಿನ್ನೀರಿನ ದ್ವೀಪದ ಜನರ ಆರೇಳು ದಶಕಗಳ ಕನಸು ಸೇತುವೆ ಆಗಿತ್ತು. ಸೇತುವೆ ಉದ್ಘಾಟನೆ ಆಗಿ, ಸೇತುವೆ ಮೇಲೆ ಓಡಾಟದಿಂದ ಜನರ ಕನಸು ಈಗ ನನಸಾಗಿದೆ. ಆದರೆ, ಕಳೆದ ಐದೂವರೆ ದಶಕಳಿಂದ ಜನರ ಓಡಾಟದ ಪ್ರಮುಖ ಸಂಪರ್ಕ‌ಕೊಂಡಿಯಾಗಿದ್ದ ಲಾಂಚ್​ಗಳ‌ ಓಡಾಟ ಸ್ಥಗಿತವಾಗಿದೆ. ಇದರಿಂದ ಲಾಂಚ್ ಗಳು ನೇಪಥ್ಯಕ್ಕೆ ಸಾಗುವ ದಾರಿಯಲ್ಲಿದೆ ಎನ್ನಬಹುದು.Launch service, which had been a backwater connection for 7 decades, has been suspended due to bridge connection

ಲಾಂಚ್ ಸೇವೆ ಪ್ರಾರಂಭವಾಗಿದ್ದು: 1969 ರಲ್ಲಿ ಶರಾವತಿ ಹಿನ್ಜೀರಿಗೆ ಲಾಂಚ್ ಸೇವೆಗೆ ಬಂದವು. 1962 ರಲ್ಲಿ ಶರಾವತಿ ನದಿಗೆ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾದ ನಂತರ ಇದಕ್ಕೂ ಮೊದಲು ನಿರ್ಮಿತವಾದ ಗೇಟ್ ರಹಿತವಾದ ಹೀರೆ ಭಾಸ್ಕರ ಅಥವಾ ಮಡೆನೂರು ಡ್ಯಾಂ ಮುಳುಗಡೆಯಿತು. ಇದರಿಂದ ಹಿನ್ನೀರಿನಲ್ಲಿ ಹಲವು ಗ್ರಾಮಗಳು ಮುಳುಗಡೆಯಾದವು. ಇದರಿಂದ ತುಮರಿ, ಬ್ಯಾಕೋಡು ಹೋಬಳಿಯ 30 ಕ್ಕೂ ಅಧಿಕ ಗ್ರಾಮಗಳು ನೀರಿನಿಂದ ಆವೃತವಾದವು. ಹಲವು ಗ್ರಾಮಗಳು ಮುಳುಗಡೆಯಾದವು. ಉಳಿದ ಗ್ರಾಮಗಳಿಗೆ ಶರಾವತಿ ನೀರು ದ್ವೀಪವನ್ನಾಗಿ ಮಾಡಿದವು.ಇದರಿಂದ ಈ ಭಾಗದ ಜನ ಸಾಗರ ಹಾಗೂ ಶಿವಮೊಗ್ಗ, ಹೊಸನಗರ ಭಾಗಗಳಿಗೆ ಹೊಂದಿದ್ದ ರಸ್ತೆಗಳು ಸಹ ಮುಳುಗಿ ಹೋದವು. ಸಂಪರ್ಕವೇ ಇಲ್ಲದೇ ದ್ವೀಪದಂತಾಗಿದ್ದ ಪ್ರದೇಶದ ಜನತೆ ಮೊದಲು ತಮ್ಮ ಸಾಗರ ಪಟ್ಟಣದ ಸವಾರಿಗೆ ತೆಪ್ಪವನ್ನು ಅವಲಂಬಿಸುವಂತಾಯಿತು. ತೆಪ್ಪ ಮಗುಚಿ ಹಲವು ದುರಂತಗಳೇ ನಡೆದು ಹೋದವು. ಹಲವು ಜೀವಗಳು ನೀರು ಪಾಲಾದವು. ನಂತರ ಎಚ್ಚೆತ್ತ ಸರ್ಕಾರಗಳು ಹಿನ್ನೀರಿನ ಜನರಿಗೆ ಮೊದಲ ಬಾರಿಗೆ 1969 ರಲ್ಲಿ ಲಾಂಚ್ ವ್ಯವಸ್ಥೆಯನ್ನು ಜಾರಿಗೆ ತಂದವು. ಅಂದಿನಿಂದ 2025 ರ ಜುಲೈ 14 ರ ತನಕ ಸುಧೀರ್ಘ ಸೇವೆ ನೀಡಿದ್ದ ಇವುಗಳು ಈಗ ಶರಾವತಿ ಹಿನ್ನೀರಿನಲ್ಲಿ ತೇಲುವುದನ್ನು ಬಂದ್ ಮಾಡಿವೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ