Breaking News

ದೆವ್ವ ಮೆಟ್ಕೊಂಡಿದೆ ಎಂದು ಮನಸೋ ಇಚ್ಛೆ ಥಳಿತ, ಮಹಿಳೆ ಸಾವು

Spread the love

ಶಿವಮೊಗ್ಗ, ಜುಲೈ 07: ದೆವ್ವ ಮೆಟ್ಕೊಂಡಿದೆ ಎಂದು ಮನಸೋಯಿಚ್ಛೆ ಥಳಿಸಿದ್ದ ಮಹಿಳೆ (woman) ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನುರು ಸಮೀಪದ ಜಂಬರಗಟ್ಟೆ ಗ್ರಾಮದಲ್ಲಿ ನಡೆದಿದೆ. ಗೀತಮ್ಮ(53) ಮೃತ ಮಹಿಳೆ. ಗೀತಮ್ಮ ಮೇಲೆ ಹಲ್ಲೆ ಮಾಡಿದ ಆಶಾ ವಿರುದ್ಧ ಕೊಲೆ  ಕೇಸ್ ದಾಖಲಾಗಿದ್ದು, ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ಆಶಾ ಎಂಬ ಮಹಿಳೆ ತಮ್ಮ ಮೇಲೆ ಚೌಡಮ್ಮ ದೇವಿ ಬರುತ್ತಾಳೆ ಎಂದು ಊರವರಲ್ಲಿ ಮೌಡ್ಯತೆ ಹಬ್ಬಿಸಿದ್ದಳು. ಇದನ್ನೇ ನಂಬಿದ್ದ ಗೀತಮ್ಮ ಕುಟುಂಬಸ್ಥರು ದೆವ್ವ ಬಂದಿದೆ ಎಂದು ಅವರನ್ನು ಆಶಾ ಬಳಿ ಕರೆದುಕೊಂಡು ಹೋಗಿದ್ದಾರೆ.

ನಿನ್ನೆ ರಾತ್ರಿ 9 ಗಂಟೆಯಿಂದ ತಡರಾತ್ರಿ 3 ಗಂಟೆಯವರೆಗೂ ಆಶಾ ಗೀತಮ್ಮಳನ್ನು ಮನಸೋಯಿಚ್ಛೆ ತಳಿಸಿದ್ದಾರೆ. ಥಳಿತಕ್ಕೊಳಗಾದ ಗೀತಮ್ಮ ಅಸ್ವಸ್ಥಗೊಂಡಿದ್ದಾರೆ. ಬಳಿಕ ಅವರನ್ನು ಹೊಳೆಹೊನ್ನುರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಇನ್ನು ಸ್ಥಳಕ್ಕೆ ಹೊಳೆಹೊನ್ನುರು ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಹಾಸ್ಟೆಲ್​ನಲ್ಲಿ ನೀರು ಎಂದು ಭಾವಿಸಿ ಆ್ಯಸಿಡ್ ಕುಡಿದ ವಿದ್ಯಾರ್ಥಿ

ಔಷಧ ತೆಗೆದುಕೊಳ್ಳುವಾಗ ನೀರು ಎಂದು ಭಾವಿಸಿ ವಿದ್ಯಾರ್ಥಿ ಆ್ಯಸಿಡ್​ ಕುಡಿದಿರುವಂತಹ ಘಟನೆ ಧಾರವಾಡದ ಗಾಂಧಿನಗರದ ಸರ್ಕಾರಿ ಹಾಸ್ಟೆಲ್​ನಲ್ಲಿ ನಡೆದಿದೆ. ಅಂಜುಮನ್ ಕಾಲೇಜಿನಲ್ಲಿ ಬಿಎ ಓದುತ್ತಿರುವ ಕುಬೇರ ಲಮಾಣಿ ಆ್ಯಸಿಡ್​ ಕುಡಿದ ವಿದ್ಯಾರ್ಥಿ. ಅಸ್ವಸ್ಥ ವಿದ್ಯಾರ್ಥಿಯನ್ನು ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ