Breaking News

ಉದ್ಯಮಿ ಸಂತೋಷ್ ಜಾರಕಿಹೊಳಿ ಅವರಿಂದ ಸಮೀಕ್ಷ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ಉದ್ಘಾಟನೆ.

Spread the love

ರಾಯಚೂರು : ನೂತನವಾಗಿ ಆರಂಭಗೊಂಡ ಸಮೀಕ್ಷ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತವನ್ನು ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ಉದ್ಘಾಟಿಸಿದರು.

ರಾಯಚೂರು ತಾಲೂಕಿನ ಯಾಪಲದಿನ್ನಿಯಲ್ಲಿ ಶ್ರೀ ದಳಪತಿ ಚಂದ್ರಶೇಖರರೆಡ್ಡಿ ಸಾರಥ್ಯದಲ್ಲಿ ನೂತನವಾಗಿ ಆರಂಭಗೊಂಡ ಸಮೀಕ್ಷ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ಭಾಗವಹಿಸಿ ಉದ್ಘಾಟಿಸಿ ಮಾತನಾಡಿದ ಅವರು ಈ ಸಹಕಾರಿ ಸಂಘ ರೈತ ವರ್ಗಕ್ಕೆ , ಕಾರ್ಮಿಕ ವರ್ಗಕ್ಕೆ, ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎಂದು ಶುಭ ಹಾರೈಸಿದರು.
ಈ ಸಮಯದಲ್ಲಿ ಸಂಘದ ಪದಾಧಿಕಾರಿಗಳಿಂದ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರಿಗೆ ಸತ್ಕಾರ ಮಾಡಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ರಜನಿಕಾಂತ್ ರೆಡ್ಡಿ, ಉದ್ಯಮಿಗಳಾದ ಪ್ರಶಾಂತ್ ಜೊರಾಪುರ, ಕೃಷಿ ಅಧಿಕಾರಿ ಪ್ರವೀಣ್ ನಾಯಕ್, ಮಾಜಿ ಎಪಿಎಂಸಿ ಚೇರಮನ್ ಅಚ್ಯುತಾ ರೆಡ್ಡಿ, ವಕೀಲರಾದ ಜಂಬುನಾಥ ಯಾದವ, ಮಾಜಿ ಗ್ರಾ ಪಂ. ಅಧ್ಯಕ್ಷ ವಿಶ್ವನಾಥ ರೆಡ್ಡಿ, ಮಾಜಿ ಸದಸ್ಯ ಗೋಪಾಲ ರೆಡ್ಡಿ, ವಿಕ್ರಮ್ ರಾಥೋಡ್, ಮಿಥುನ ಪಾಟೀಲ್, ಸಚಿನ್ ಕಲಾಲ, ಕಿಶೋರ್ ಕಲಾಲ, ರಘು ಜೊರಾಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ

Spread the loveಬೆಂಗಳೂರು: ರಾಮ ಮಂದಿರ ದೇಣಿಗೆ ಹಗರಣವನ್ನು ಬಿಜೆಪಿ ಮುಚ್ಚಿ ಹಾಕೋಕೆ ಪ್ರಯತ್ನ ಮಾಡ್ತಿದೆ ಅಂತ ಗೃಹ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ