Breaking News

ರಾಜ್ಯದಲ್ಲಿ ಹೆಚ್ಚುತ್ತಿವೆ ಚಿಕೂನ್​ಗುನ್ಯಾ ಪ್ರಕರಣಗಳು

Spread the love

ಬೆಂಗಳೂರು: ರಾಜ್ಯದಲ್ಲಿ ಚಿಕೂನ್​ಗುನ್ಯಾ ಹಾಗೂ, ಡೆಂಗ್ಯೂ ಸೋಂಕಿನ ಪ್ರಕರಣಗಳು ಏರಿಕೆ ಕಂಡಿದ್ದು ಇದು ಸೋಂಕಿನ ನಿಯಂತ್ರಣ ವೈಫಲ್ಯವೂ ಸಾರ್ವಜನಿಕರಿಗೆ ಆರೋಗ್ಯ ಸವಾಲಿನ ಬೆದರಿಕೆ ಒಡ್ಡುತ್ತಿದೆ. ರಾಜ್ಯದಲ್ಲಿ ಚಿಕೂನ್​ಗುನ್ಯಾ ಹೆಚ್ಚಳವಾಗಿರುವ ಕುರಿತು ಎನ್​ವಿಬಿಡಿಎಸ್​ಪಿ ಅಂಕಿ ಅಂಶ ಬಿಡುಗಡೆ ಮಾಡಿದ್ದು, ಮಾಹಿತಿ ಇಲ್ಲಿದೆ.

2018ರಿಂದ 2025ರ ವರೆಗೆ ರಾಜ್ಯದಲ್ಲಿನ ಚಿಕೂನ್​ಗುನ್ಯಾ​ ಪ್ರಕರಣಗಳು

ವರ್ಷ ಶಂಕಿತ ಚಿಕೂನ್​ಗುನ್ಯಾ ಪ್ರಕರಣ ದೃಢ ಚಿಕೂನ್​ಗುನ್ಯಾ ಪ್ರಕರಣ
2018 20411 2546
2019 43698 3664
2020 16111 1326
2021 40134 2188
2022 65340 2312
2023 72662 1910
2024 78217 2954
2025 8892(31 ಮಾರ್ಚ್​ 2025) 238
  • 2019ರಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಚಿಕೂನ್​ಗುನ್ಯಾ ಪ್ರಕರಣಗಳು ಹೆಚ್ಚಳ ಕಂಡಿವೆ.
  • 2024ರಲ್ಲಿ 2954 ಕೇಸ್​ಗಳು ರಾಜ್ಯದಲ್ಲಿ ದಾಖಲಾಗಿದ್ದವು
  • ರಾಷ್ಟ್ರೀಯ ವೆಕ್ಟರ್ ಬೋರ್ನ್ ಡಿಸೀಸಸ್ ಕಂಟ್ರೋಲ್ ಸೆಂಟರ್ ವರದಿ ಪ್ರಕಾರ, 2024ರಲ್ಲಿ ಶಂಕಿತ ಚಿಕೂನ್​ಗುನ್ಯಾ ಪ್ರಕರಣ 78,217
  • 2024ರಲ್ಲಿ ಮಧ್ಯಪ್ರದೇಶದಲ್ಲಿ ಚಿಕೂನ್‌ಗುನ್ಯಾ ಅಂಕಿಅಂಶಗಳು ಹೆಚ್ಚಿದ್ದು, ಮಹಾರಾಷ್ಟ್ರದಲ್ಲಿ 5,854 ದೃಢವಾದರೆ, ರಾಜ್ಯದಲ್ಲಿ 2,954 ಪ್ರಕರಣಗಳು ವರದಿ ಆಗಿದ್ದವು. ಇದು ಪ್ರಾದೇಶಿಕ ಹರಡುವಿಕೆಯನ್ನು ಸೂಚಿಸುತ್ತದೆ.
  • 2024ರಲ್ಲಿ ಮಹಾರಾಷ್ಟ್ರ 57,509 ಪರೀಕ್ಷೆ ನಡೆಸಿದ್ದು, ಕರ್ನಾಟಕ 78,217 ಪರೀಕ್ಷೆಗಳನ್ನು ನಡೆಸಲಾಗಿತ್ತು. ಮಧ್ಯಪ್ರದೇಶವು 13,677 ಪರೀಕ್ಷೆ ನಡೆಸಿದ್ದು, ಕಣ್ಗಾವಲು ಕಾರಣದಿಂದಾಗಿ ಪ್ರಕರಣಗಳು ವರದಿ ಕಡಿಮೆಯಾಗಿರುವುದು ಕಂಡುಬಂದಿತ್ತು.

ಚಿಕೂನ್​ಗುನ್ಯಾ ಪ್ರಕರಣಗಳು ಹೆಚ್ಚಿರುವ ರಾಜ್ಯಗಳು

ರಾಜ್ಯ 2024ರಲ್ಲಿ ದೃಢಪಟ್ಟ ಚಿಕೂನ್​ಗುನ್ಯಾ ಪ್ರಕರಣ
ಮಹಾರಾಷ್ಟ್ರ 5854
ಕರ್ನಾಟಕ 2954
ಮಧ್ಯಪ್ರದೇಶ 1321

2018-2025ರ ನಡುವೆ ದೇಶದಲ್ಲಿ ದಾಖಲಾಗಿರುವ ಪ್ರಕರಣಗಳು

ಏನಿದು ಚಿಕೂನ್​ಗುನ್ಯಾ : ಪ್ರಾಥಮಿಕವಾಗಿ ಈಡಿಸ್ ಈಜಿಪ್ಟಿ ಮತ್ತು ಈಡಿಸ್ ಆಲ್ಬೋಪಿಕ್ಟಸ್ ಕಡಿತದಿಂದ ಈ ಸೋಂಕು ಹರಡುತ್ತದೆ. ಕೀಲು ಊತ, ಸ್ನಾಯು ನೋವು, ತಲೆನೋವು, ವಾಕರಿಕೆ, ಆಯಾಸ ಮತ್ತು ದದ್ದುಗಳು ಇದರ ಲಕ್ಷಣ. ಈಡಿಸ್ ಸೊಳ್ಳೆಗಳಿಂದ ಮನುಷ್ಯರಿಗೆ ಹರಡುವ ಆರ್ಬೋವೈರಸ್ ಆಗಿದೆ. ಈ ವೈರಸ್ ಮೊದಲು 1952 ರಲ್ಲಿ ದಕ್ಷಿಣ ಟಾಂಜಾನಿಯಾದ ಪ್ರಾಂತ್ಯ ಮಕೊಂಡೆಯಲ್ಲಿ ಮೊದಲ ಬಾರಿಗೆ ವರದಿಯಾಯಿತು. ಚಿಕೂನ್‌ಗುನ್ಯಾ ಎಂಬ ಪದವು ಟಾಂಜಾನಿಯಾ ಮತ್ತು ಮೊಜಾಂಬಿಕ್‌ನ ಮಕೊಂಡೆ ಜನಾಂಗೀಯ ಗುಂಪಿನ ಬಂಟು ಭಾಷೆಯಿಂದ ಉಗಮವಾಗಿದೆ. 1952ರ ಬಳಿಕ ಈ ಸೋಂಕು ಆಫ್ರಿಕಾ, ಹಿಂದೂ ಮಹಾಸಾಗರ ದ್ವೀಪಗಳು, ಏಷ್ಯಾ, ಯುರೋಪ್ ಮತ್ತು ಅಮೆರಿಕದಲ್ಲಿ ಕಂಡುಬಂದಿತು.

ಚಿಕೂನ್​ಗುನ್ಯಾ ಪ್ರಮುಖಾಂಶ:

  • ಚಿಕೂನ್‌ಗುನ್ಯಾ ವೈರಲ್ ಕಾಯಿಲೆಯಾಗಿದ್ದು, ಇದು ಸೋಂಕಿತ ಸೊಳ್ಳೆಗಳ ಕಡಿತದಿಂದ ಹರಡುತ್ತದೆ.
  • ಈ ರೋಗವು ಡೆಂಗ್ಯೂ ಜ್ವರವನ್ನು ಹೋಲುತ್ತದೆ. ಹಾಗೇ ತೀವ್ರವಾದ, ಕೆಲವೊಮ್ಮೆ ನಿರಂತರವಾದ, ಕೀಲು ನೋವು, ಜೊತೆಗೆ ಜ್ವರ ಮತ್ತು ದದ್ದುಗಳಿಂದ ಕೂಡಿದೆ. ಇದು ಕೆಲವು ಬಾರಿ ಮಾರಾಣಾಂತಿಕವಾಗಬಹುದು.
  • ಚಿಕೂನ್‌ಗುನ್ಯಾ ಹೆಚ್ಚಾಗಿ ಆಫ್ರಿಕಾ, ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ.
  • ಚಿಕೂನ್‌ಗುನ್ಯಾಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ.
  • ಇದಕ್ಕೆ ಚಿಕಿತ್ಸೆ ಎಂದರೆ, ಚಿಕೂನ್‌ಗುನ್ಯಾ ವೈರಸ್ ಇರುವ ಪ್ರದೇಶಗಳಲ್ಲಿ ಸೊಳ್ಳೆ ಕಡಿತಕ್ಕೆ ಒಳಗಾಗುವುದನ್ನು ತಪ್ಪಿಸುವುದು. ಸೊಳ್ಳೆ ಸಂತಾನೋತ್ಪತ್ತಿ ಸ್ಥಳಗಳನ್ನು ನಿರ್ಮೂಲನೆ ಮಾಡುವ ಮೂಲಕ ತಡೆಗಟ್ಟಬಹುದಾಗಿದೆ.
  • 2006ರಿಂದ ಈ ಚಿಕೂನ್​ ಗುನ್ಯಾ ಭಾರತದ ಬಹುತೇಕ ನಗರಗಳಲ್ಲಿ ಕಂಡು ಬಂದಿದ್ದು, ಎಲ್ಲಾ ರಾಜ್ಯಗಳು ಇದರಿಂದ ಬಾಧಿತವಾಗಿವೆ.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ