Breaking News

ಶಕ್ತಿ ನಗರದಲ್ಲಿ ಮಾಕ್ ಡ್ರಿಲ್ ಮಾಡಲಿದ್ದೇವೆ : ಡಿಸಿ ನಿತೀಶ್ ಕೆ

Spread the love

ರಾಯಚೂರು : ಕೇಂದ್ರದ ಗೃಹ ಇಲಾಖೆಯಿಂದ ಮಾಕ್ ಡ್ರಿಲ್​ಗೆ ಆದೇಶ ಬಂದಿರುವ ಹಿನ್ನೆಲೆ ನಾಳೆಯೇ ಮಾಕ್ ಡ್ರಿಲ್ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ‌ನಿತೀಶ್ ಕೆ. ತಿಳಿಸಿದ್ದಾರೆ.

ಈ ಕುರಿತು ನಗರದ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇಂದು ಬೆಳಗ್ಗೆ ಕೇಂದ್ರ ಸರ್ಕಾರದ ಹೋಂ ಸೆಕ್ರಟರಿಯವರು, ನಮ್ಮ ರಾಜ್ಯದ ಚೀಫ್ ಸೆಕ್ರಟರಿಯವರು, ಪೊಲೀಸ್ ಇಲಾಖೆ ಮುಖ್ಯಸ್ಥರೊಂದಿಗೆ ಈಗಾಗಲೇ ವಿಡಿಯೋ ಸಂವಾದ ಮಾಡಿ ಇದರ ಬಗ್ಗೆ ಮಾರ್ಗದರ್ಶನ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಮಾಕ್ ಡ್ರಿಲ್ ಹೇಗೆ ಮಾಡಬೇಕು ಎಂಬ ಬಗ್ಗೆ ನಮಗೂ ಪ್ರೋಟೋಕಾಲ್ ಕಳುಹಿಸಿಕೊಡುತ್ತಿದ್ದಾರೆ. ಬೆಂಗಳೂರಿನಲ್ಲಿನ ಸಿವಿಲ್ ಡಿಫೆನ್ಸ್ ಡೈರೆಕ್ಟರ್ ಅವರೊಂದಿಗೆ ನಮ್ಮ ಪೊಲೀಸ್ ಇಲಾಖೆಯವರು ಸಮನ್ವಯ ಮಾಡಿಕೊಂಡು, ನಮ್ಮ ಜಿಲ್ಲೆಯಲ್ಲಿರುವ ಎನ್​ಸಿಸಿ, ಎನ್​ಎಸ್​ಎಸ್​, ಸ್ಥಳೀಯ ಪೊಲೀಸ್ ಇಲಾಖೆ, ಸ್ವಯಂ ಸೇವಕರನ್ನು ಹಿಡಿದುಕೊಂಡು ಶಕ್ತಿನಗರದಲ್ಲಿ ಮಾಕ್ ಡ್ರಿಲ್ ಮಾಡಲು ಯೋಜಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ