Breaking News

ದೇವಲತ್ತಿ ಹಾಗೂ ಕಾಮಸಿನಕೊಪ್ಪ ಗ್ರಾಮಗಳ ಜಮೀನುಗಳಲ್ಲಿ ವಿದ್ಯುತ್ ನ್ನು ಈ ಹಿಂದೆ ನೀಡಲಾಗುತ್ತಿದ್ದ ರೀತಿಯಲ್ಲಿ ಒದಗಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಅವರಿಗೆ ಮನವಿ

Spread the love

ದೇವಲತ್ತಿ ಹಾಗೂ ಕಾಮಸಿನಕೊಪ್ಪ ಗ್ರಾಮಗಳ ಜಮೀನುಗಳಲ್ಲಿ ವಿದ್ಯುತ್ ನ್ನು ಈ ಹಿಂದೆ ನೀಡಲಾಗುತ್ತಿದ್ದ ರೀತಿಯಲ್ಲಿ ಒದಗಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಅವರಿಗೆ ಮನವಿ
ಖಾನಾಪೂರ ತಾಲೂಕಿನ ದೇವಲತ್ತಿ ಹಾಗೂ ಕಾಮಸಿನಕೊಪ್ಪ ಗ್ರಾಮಗಳ ರೈತಾಪಿ ವರ್ಗದವರು ಹಾಗೂ ಸಾರ್ವಜನಿಕರು ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಹೆಸ್ಕಾಂ ಇಲಾಖೆಯು ಇದರ ಮೊದಲು ಗ್ರಾಮಗಳ ಜಮೀನುಗಳಲ್ಲಿಯ ವಿದ್ಯುತ್ ನ್ನು ಹೇಗೆ ನೀಡಲಿಗುತ್ತಿತ್ತು
ಹಾಗೆಯೇ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು ತದನಂತರದಲ್ಲಿ ತಹಶೀಲ್ದಾರ್ ಅವರಿಗೆ, ಹೆಸ್ಕಾಂ ಇಲಾಖೆಯ ಅಭಿಯಂತರರಿಗೆ ಮನವಿ ಸಲ್ಲಿಸಿ ಬರುವ ಮೂರು ದಿನಗಳ ಒಳಗಾಗಿ ಸರ್ಕಾರದ ಸಮಯ ಸೂಚಿಯಂತೆ ವಿದ್ಯುತ್ ಒದಗಿಸಬೇಕು ಇಲ್ಲದಿದ್ದರೆ ಇದಕ್ಕೆ ಸಂಬಂಧಿಸಿದಂತೆ ದೇವಲತ್ತಿ,ಕಾಮಶೀನಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಿಂದ ತಮ್ಮ ಕಛೇರಿಯ ಮುಂದೆ ಧರಣಿ ಸತ್ಯಾಗ್ರಹ ಕೈಗೊಳ್ಳುವುದು ಅನಿವಾರ್ಯವಾಗಿದೆ
ಈ ಕಾರ್ಯಕ್ಕೆ ಅನುವುಮಾಡಿಕೊಡದೇ ರೈತರ ಕಷ್ಟಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸಿದರು ತಹಶೀಲ್ದಾರ್ ದುಂಡಪ್ಪ ಕೋಮಾರ ಅವರು ಮನವಿ ಸ್ವೀಕರಿಸಿ ಯೋಗ್ಯ ರೀತಿಯ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು.ಈ ಸಂದರ್ಭದಲ್ಲಿ ಬಹುಸಂಖ್ಯೆಯಲ್ಲಿ ರೈತರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ