Breaking News

ಪೊಲೀಸರ ಮೇಲೆ ಹಲ್ಲೆಗೈದ ಆರೋಪಿ ಕಾಲಿಗೆ ಗುಂಡೇಟು

Spread the love

ಬೀದರ್​: ನಗರದ ಓಲ್ಡ್​​​​ ಆದರ್ಶ ಕಾಲೋನಿಯಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ವೇಳೆ ಹಲ್ಲೆ ನಡೆಸಿದ ಓರ್ವನ ಕಾಲಿಗೆ ಪೊಲೀಸರು ಗುಂಡು ಹಾರಿಸಿ​ ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಪೊಲೀಸ್​ ಸಿಬ್ಬಂದಿಗೂ ಗಾಯಗಳಾಗಿದೆ.

ಮಹಾರಾಷ್ಟ್ರದ ಬೀಡ್​ ಜಿಲ್ಲೆಯ ಪರಳಿಯ ಕರ್ತಾರ್‍ಸಿಂಗ್​​​, ಆತನ ಸಹೋದರನಾದ ಬೀದರ್​​​ ನಿವಾಸಿ ಜಗಜೀತ್‍ಸಿಂಗ್​ ಹಾಗೂ ಪುಣೆಯ ಅಕ್ಷಯ ಬಂಧಿತರು.

ಇಲ್ಲಿನ ಓಲ್ಡ್​ ಆದರ್ಶ ಬಡಾವಣೆಯಲ್ಲಿ ಏಪ್ರಿಲ್​ 26ರಂದು ಬೆಳಗ್ಗಿನಜಾವ ಮನೆ ಕಳ್ಳತನ ನಡೆದಿತ್ತು. ಡಿಎಲ್‍ಆರ್​​​ ಸೂಪರಿಟೆಂಡಂಟ್​​​ ಜ್ಯೋತಿಲತಾ ಅವರ ಮನೆಗೆ ನುಗ್ಗಿದ ಮುಸುಕುಧಾರಿಗಳು ಮಾರಕಾಸ್ತ್ರಗಳಿಂದ ಹೆದರಿಸಿ, 15.55 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಹಣ ದೋಚಿದ್ದರು. ಪೊಲೀಸರಿಗೆ ಮಾಹಿತಿ ನೀಡದಂತೆ ಮನೆಯವರನ್ನು ಬಾತ್‍ರೂಂನಲ್ಲಿ ಕೂಡಿ ಹಾಕಿದ್ದರು.

ಈ ಬಗ್ಗೆ ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ಸಂಬಂಧ ಗಾಂಧಿಗಂಜ್ ಹಾಗೂ ಗ್ರಾಮೀಣ ಪೊಲೀಸರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ತಂಡವು ಶುಕ್ರವಾರ ಬೆಳಗ್ಗೆ ತಾಲೂಕಿನ ಹೊನ್ನಿಕೇರಿ ಕ್ರಾಸ್ ಹತ್ತಿರ ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾಗಿತ್ತು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ