ಸಮೃದ್ಧ ಅಂಗವಿಕಲರ ಸಂಸ್ಥೆಗೆ ಆಹಾರ ಸಾಮಗ್ರಿಗಳ ವಿತರಣೆ
ಕಾರ್ಮಿಕರ ದಿನಾಚರಣೆಯ ಎಕ್ಸ್ಪರ್ಟ್ ವಾಲ್ ಅಂಡ್ ಇಕ್ವಿಪ್ಮೆಂಟ್ ಕಂಪನಿಯಿಂದ ಸಾಮಾಜೀಕ ಉಪಕ್ರಮ
ಸಮೃದ್ಧ ಅಂಗವಿಕಲರ ಸಂಸ್ಥೆಗೆ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಎಕ್ಸ್ಪರ್ಟ್ ವಾಲ್ ಅಂಡ್ ಇಕ್ವಿಪ್ಮೆಂಟ್ ಕಂಪನಿ ಉದ್ಯಮಬಾಗ ಬೆಳಗಾವಿಯ ನಿರ್ದೇಶಕರು ಮತ್ತು ಸಂಸ್ಥಾಪಕರು ವಿನಾಯಕ್ ಹಾಗೂ ಕಾರ್ಮಿಕರು ಸೇರಿ ಸಂಸ್ಥೆಗೆ ಅವಶ್ಯಕ ಆಹಾರ ಸಾಮಗ್ರಿಗಳನ್ನು ಒದಗಿಸಿ ಸಂಸ್ಥೆಯ ಉದ್ದೇಶವನ್ನು ಕೇಳಿ ಸಂಸ್ಥೆಯ ಅಭಿವೃದ್ಧಿಗೆ ಕೈಲಾದಷ್ಟು ಸಹಾಯ ಮಾಡಲಾಗುತ್ತಿದೆ.
ನಿಮ್ಮೊಂದಿಗೆ ನಾವು ಸದಾಕಾಲ ಇರುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ಸಂಸ್ಥಾಪಕರು ಸಂತೋಷ್ ದರೆಕರರ ಅವರು ಸಂಸ್ಥೆಯ ಕುರಿತು ಪರಿಚಯ ಮಾಡಿಕೊಟ್ಟು ಕಂಪನಿ ದವರಿಂದ ಸಂಸ್ಥೆಗೆ ಸಹಾಯ ನೀಡಲು ಮಾರ್ಗದರ್ಶನ ನೀಡಿದರು
ಸಂಸ್ಥೆಗೆ ಸಹಾಯ ಹಸ್ತವನ್ನು ನೀಡಿದ್ದಕ್ಕೆ ಸಂಸ್ಥೆಯ ವತಿಯಿಂದ ಎಲ್ಲಾ ಕಾರ್ಮಿಕರಿಗೆ, ನಿರ್ದೇಶಕರಿಗೆ ಹಾಗೂ ವಿಶೇಷವಾಗಿ ಸಂತೋಷ್ ದರೇಕರ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿ ಅಂಗವಿಕಲರು ಸಾವಲಂಬಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ನಾವು ನೆರವಾಗುತ್ತೇವೆ ಹಾಗೂ ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸುತ್ತೇವೆ ಎಂದರು.
Laxmi News 24×7