Breaking News

ಜನಿವಾರ ಕತ್ತರಿಸಿದ ಕೃತ್ಯ ಖಂಡಿಸಿ ಇಲಕಲ್ ನಲ್ಲಿ ಪ್ರತಿಭಟನಾ ಮೆರವಣಿಗೆ..

Spread the love

ಜನಿವಾರ ಕತ್ತರಿಸಿದ ಕೃತ್ಯ ಖಂಡಿಸಿ ಇಲಕಲ್ ನಲ್ಲಿ ಪ್ರತಿಭಟನಾ ಮೆರವಣಿಗೆ..
ಸಿ.ಇ.ಟಿ.ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ಕತ್ತಿರಿಸಿದ ಕೃತ್ಯವನ್ನು ಖಂಡಿಸಿ ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ಜನಿವಾರ ಧರಿಸುವ ವಿವಿಧ ಸಮಾಜಗಳ‌ ಒಕ್ಕೂಟದಿಂದ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ನಗರದ ವೆಂಕಟೇಶ್ವರ ಮಂದಿರದಿಂದ ಚಾಲನೆಗೊಂಡು ರ್ಯಾಲಿಯು ಗಾಂಧಿಚೌಕ್, ಹಳೆ ಮುನಸಿಪಾರ್ಟಿ ದಾರಿಯಿಂದ ಕಂಠಿವೃತ್ತದವರೆಗೆ ನಡೆಯಿತು. ಕಂಠಿ ವೃತ್ತದಲ್ಲಿ ಘೋಷಣೆಗಳನ್ನು ಹಾಕಿದ ಪ್ರತಿಭಟನಾಕಾರರು, ಜನಿವಾರ ಕತ್ತರಿಸಿ ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಮಾಡಿದ್ದು ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ರು.
ಇನ್ನು ಪ್ರತಿಭಟನಾ ಮೆರವಣಿಗೆಯಲ್ಲಿ ಮಹಿಳೆಯರು ಸಹ ಭಾಗವಹಿಸಿದ್ದು ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ ಬ್ರಾಹ್ಮಣ, ದೇವಾಂಗ,ಸ್ವಕುಳಸಾಳಿ, ಮಾಹೇಶ್ವರಿ, ಪದ್ಮಸಾಲಿ , ಭಾವಸಾರ ಕ್ಷತ್ರೀಯ, ಮರಾಠಾ ಸೇರಿದಂತೆ ವಿವಿಧ ಸಮಾಜಗಳ ನೂರಾರು ಜನರು ಪಾಲ್ಗೊಂಡಿದ್ದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ