Breaking News

ಖುಷಿಯಿಂದಲೇ ತಾಳಿ, ಬಟ್ಟೆ ಖರೀದಿಸಿದ್ದ ಯುವತಿ ಆತ್ಮಹತ್ಯೆಗೆ ಶರಣು

Spread the love

ಗದಗ, ಏಪ್ರಿಲ್​ 21: ಮಾಜಿ ಪ್ರೇಮಿ ಬ್ಲ್ಯಾಕ್​ ಮೇಲ್ ಮಾಡಿದ್ದಕ್ಕೆ ಮರ್ಯಾದೆಗೆ ಹೆದರಿ​ ಮದುವೆ ಸಂಭ್ರಮದಲ್ಲಿದ್ದ ಯುವತಿ (girl) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ. ಸಾಯಿರಾಬಾನು ನದಾಫ್​(29) ಆತ್ಮಹತ್ಯೆ (death) ಮಾಡಿಕೊಂಡ ಯುವತಿ. ಸಾಯಿರಾಬಾನು ಡೆತ್​​ನೋಟ್​ ಬರೆದಿಟ್ಟಿದ್ದು, ಮೈಲಾರಿ ಎಂಬುತಾನ ವಿರುದ್ಧ ಬ್ಲ್ಯಾಕ್ ಮೇಲ್ ಆರೋಪ ಕೇಳಿಬಂದಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಖುಷಿಯಿಂದಲೇ ತಾಳಿ, ಬಟ್ಟೆ ಖರೀದಿಸಿದ್ದ ಯುವತಿ ಆತ್ಮಹತ್ಯೆಗೆ ಶರಣು

ಮೇ 8ರಂದು ಸಾಯಿರಾಬಾನು ನದಾಫ್​ ಮದುವೆ ನಿಗದಿಯಾಗಿತ್ತು. ಹಾಗಾಗಿ ಇತ್ತ ಮನೆಯಲ್ಲಿ ಅದ್ಧೂರಿ ಮದುವೆಗೆ ಭರ್ಜರಿ ತಯಾರಿ ಕೂಡ ನಡೆದಿತ್ತು. ಸಾಯಿರಾಬಾನು ಖುಷಿಯಿಂದಲೇ ತಾಳಿ, ಬಟ್ಟೆ ಎಲ್ಲವನ್ನು ಖರಿಸಿದ್ದರು. ಇಂದು ಪೋಷಕರು ಮದುವೆ ವಸ್ತುಗಳ ಖರೀದಿಗೆ ಹೋದಾಗ ಸಾಯಿರಾಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಬಾಗಿಲು ತೆರೆದು ನೋಡಿದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದುಬಂದಿದೆ. ಮಗಳ ಸ್ಥಿತಿ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಮದುವೆ ಸಂಭ್ರಮದಲ್ಲಿ ಇದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ