Breaking News

ವಿಶ್ವ ಆರೋಗ್ಯದ ದಿನದ ಹಿನ್ನೆಲೆ… ಬಿಮ್ಸ್ ವಿದ್ಯಾರ್ಥಿಗಳಿಂದ ಬೀದಿ ನಾಟಕದ ಮೂಲಕ ಆರೋಗ್ಯ ಜಾಗೃತಿ

Spread the love

ವಿಶ್ವ ಆರೋಗ್ಯದ ದಿನದ ಹಿನ್ನೆಲೆ…
ಬಿಮ್ಸ್ ವಿದ್ಯಾರ್ಥಿಗಳಿಂದ ಬೀದಿ ನಾಟಕದ ಮೂಲಕ ಆರೋಗ್ಯ ಜಾಗೃತಿ
ವಿಶ್ವ ಆರೋಗ್ಯ ದಿನದ ಹಿನ್ನೆಲೆ ಬೆಳಗಾವಿ ಬಿಮ್ಸ್ ಮಹಾವಿದ್ಯಾಲಯದ ಆರೋಗ್ಯ ಜಾಗೃತಿಯನ್ನು ಮೂಡಿಸಲಾಯಿತು.
ಇಂದು ವಿಶ್ವ ಆರೋಗ್ಯ ದಿನದ ಹಿನ್ನೆಲೆ ಬೆಳಗಾವಿಯ ಬಿಮ್ಸ್ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಬೀದಿ ನಾಟಕದ ಮೂಲಕ ಬಿಮ್ಸ್ ಆವರಣದಲ್ಲಿನ ರೋಗಿಗಳು ಮತ್ತು ಅವರ ಸಂಬಂಧಿಗಳಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸಲಾಯಿತು.
ಪ್ರಸವಪೂರ್ವ ಮತ್ತು ಪ್ರಸವಪೂರ್ವ ಆರೈಕೆ ವಿದ್ಯಾರ್ಥಿಗಳು ಆರೋಗ್ಯ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದರು, ಆರೋಗ್ಯಕರ ಜೀವನಶೈಲಿಯ ಬಗ್ಗೆ ಜನರಿಗೆ ಅದರ ಬಗ್ಗೆ ಮಾಹಿತಿ ಹಾಗೂ ಶಿಕ್ಷಣ ತರಬೇತಿ ನೀಡಿದರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರು,
ತಾಯಿ ಹೆರಿಗೆ ಸಂದರ್ಭದಲ್ಲಿ ಯಾವ ರೀತಿ ಡೆಲಿವರಿ ಆಗುತ್ತೆ ಎಂದು ಮಾಹಿತಿ ನೀಡಿದರು ತಾಯಿಯ ಗರ್ಭಕೋಶದಲ್ಲಿ ಮಗು ಬೆಳೆಯುತ್ತಿದ್ದಾಗ ಯಾವ ರೀತಿ ಆಹಾರವನ್ನು ಸೇವಿಸಬೇಕು ಹಾಗೂ ಮಾತ್ರೆಗಳನ್ನು ತೆಗೆದುಕೊಳ್ಳಬೇಕೆಂದು ಮಾಹಿತಿ ನೀಡಿದರು
ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಇದು ಉಚಿತ ಲಸಿಕೆಯಾಗಿದ್ದು ಸರ್ಕಾರಿ ಆಸ್ಪತ್ರೆ ಹಾಗೂ ಅಂಗನವಾಡಿ ಮಾತ್ರ ಲಭ್ಯವಿರುತ್ತದೆ ಮಾತ್ರೆಗಳ ವಿವರಗಳನ್ನು ಯಾವುದೇ ಸಮಯದಲ್ಲಿ ಜನರಿಗೆ ತೊಂದರೆ ಆದಾಗ ಯಾವ ಬೇಕಾದರೂ ಮಾತ್ರೆಗಳನ್ನು ತೆಗೆದುಕೊಳ್ಳಬಾರದು ವೈದ್ಯರ ಸೂಚನೆ ಮೇರೆಗೆ ಕಾಯಿಲೆ ಆದಂತ ಸಂದರ್ಭದಲ್ಲಿ ವೈದ್ಯರಿಂದ ಕೇಳಿ ಪಡೆಯುವುದು ಉತ್ತಮ ಎಂದು ಹೇಳಿದರು
ಮಕ್ಕಳಿಗೆ ಮೊಬೈಲ್ ದಿಂದ ದೂರವಿಡಿ ಇದು ಚಿಕ್ಕ ಮಕ್ಕಳಿಗೆ ಅಪಾಯ ಆಗುತ್ತದೆ ಮಕ್ಕಳಿಗೆ ಓದಲು ಪುಸ್ತಕ ಆಟದ ಮೈದಾನ ಕುಟುಂಬ ಸಮೇತ ಅವರ ಜೊತೆ ಸಮಯವನ್ನು ತೆಗೆದು ಒಳ್ಳೆ ಕಲ್ಚರಲ್ ಸಂಗೀತ ನೃತ್ಯ ಮಕ್ಕಳಿಗೆ ಒಳ್ಳೆಯ ತಿನಸು ಪೌಷ್ಟಿಕ ಅಂಶದ ಆಹಾರ ಹಸಿ ತರಕಾರಿ ಕಾಳುಗಳು ವ್ಯಾಯಾಮ ಕ್ರಿಕೆಟ್ ಕ್ರೀಡೆಗಳಲ್ಲಿ ಭಾಗವಹಿಸಲು ತಿಳಿಸುವುದು
ಮನೆಯಲ್ಲಿ ಯಾವ ರೀತಿ ಸಂಸ್ಕಾರ ನೀಡಬೇಕು ಮನೆಯಲ್ಲಿ ಅತ್ತೆ ಸೊಸೆ ಜಗಳವಾಡಬಾರದು ಗಂಡ ಹೆಂಡತಿ ಮಾತು ಮಾತಿಗೆ ಜಗಳವಾಡಬಾರದು ಇದರಿಂದ ಮಕ್ಕಳಿಗೆ ಪರಿಣಾಮ ಬೀರುತ್ತದೆ ಹಾಗೂ ಸಮಾಜದಲ್ಲಿ ಕೆಟ್ಟ ಹೆಸರು ಮಾಡುತ್ತದೆ ಎಂದು ಜಾಗೃತಿ ಮೂಡಿಸಿದರು .
ಈ ವೇಳೆ ಪ್ರಾಂಶುಪಾಲರಾದ ಅರುಣ್, ಪ್ರಾಧ್ಯಾಪಕರಾದ ಸೋಹಿನಾ, ಅನಯ, ಲತಾ, ಲಕ್ಷ್ಮೀ, ವಿದ್ಯಾರ್ಥಿಗಳಾದ ಅಶ್ವಿನಿ, ಜ್ಯೋತಿ, ದೇವಗೊಂಡಾ ಸೇರಿದಂತೆ ಇನ್ನುಳಿದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ಧರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ