Breaking News

ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಬೆಳಗಾವಿಯ ವಿದ್ಯಾರ್ಥಿನಿ ತನ್ವಿ ಪಾಟೀಲ್’ಗೆ ತೃತೀಯ ಸ್ಥಾನ…

Spread the love

ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಬೆಳಗಾವಿಯ ವಿದ್ಯಾರ್ಥಿನಿ ತನ್ವಿ ಪಾಟೀಲ್’ಗೆ ತೃತೀಯ ಸ್ಥಾನ…
ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಬೆಳಗಾವಿಯ ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನವನ್ನು ಪಡೆದಿದ್ದಾಳೆ.
ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಬೆಳಗಾವಿಯ ವಿದ್ಯಾರ್ಥಿನಿ ತನ್ವಿ ಹೇಮಂತ ಪಾಟೀಲ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನವನ್ನು ಪಡೆದಿದ್ದಾಳೆ. ಬೆಳಗಾವಿ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ತನ್ವಿ ಹೇಮಾ ಪಾಟೀಲ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 597 ಅಂಕ ಪಡೆದು ಸಾಧನೆಯನ್ನು ಮಾಡಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕುಟುಂಬಸ್ಥರು,
ಕಾಲೇಜು ಶಿಕ್ಷಕರರು ಹರ್ಷ ವ್ಯಕ್ತ ಪಡಿಸಿದ್ದು, ಸಿಹಿ ತಿನ್ನಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ತಮ್ಮ ಈ ಸಾಧನೆಯ ಶ್ರೇಯವನ್ನು ತಂದೆ-ತಾಯಿ ಮತ್ತು ಮಹಾವಿದ್ಯಾಲಯಕ್ಕೆ ನೀಡಿದ ತನ್ವಿ ಹೇಮಂತ ಪಾಟೀಲ್, ಮುಂದೆ ಚಾರ್ಟರ್ಡ್ ಅಕೌಂಟಂಟ್ ಆಗುವ ಆಸೆಯನ್ನು ತಿಳಿಸಿದರು.
ಪ್ರತಿದಿನ ನಿಯಮಾನುಸಾರ ಏಕಾಗ್ರತೆಯಿಂದ ಅಭ್ಯಾಸ ಮಾಡಿದರೇ, ಯಾವುದೇ ಕಷ್ಟವಲ್ಲ. ಪ್ರಾಧ್ಯಾಪಕರ ಮಾರ್ಗದರ್ಶನವನ್ನು ಪಡೆದು ಗುರಿ ಮುಟ್ಟಬೇಕೆಂದರು.
ಇನ್ನು ತನ್ವಿ ಹೇಮಂತ ಪಾಟೀಲ್ ತಾಯಿಯವರು ತಮ್ಮ ಮಗಳು ಪಟ್ಟ ಪರಿಶ್ರಮವನ್ನು ತಿಳಿಸಿ, ಮಗಳ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ