Breaking News

ಪೆಟ್ರೋಲ್​ ಹಾಕಿಸಲು ಬಂದ ಯುವಕರು, ಹಣ ಕೇಳಿದ್ದಕ್ಕೆ ಬಂಕ್​ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಇತ್ತೀಚೆಗೆ ಗಂಗಾವತಿಯಲ್ಲಿ ನಡೆದಿತ್ತು.

Spread the love

ಕೊಪ್ಪಳ: ಗಂಗಾವತಿಯ ಸಾಯಿನಗರದ ಪೆಟ್ರೋಲ್ ಬಂಕ್​ನಲ್ಲಿ ಇಬ್ಬರು ಯುವಕರು ತಮ್ಮ ದ್ವಿಚಕ್ರ ವಾಹನಕ್ಕೆ

ಪೆಟ್ರೋಲ್ ಹಾಕಿಸಿಕೊಂಡು, ಬಳಿಕ ಹಣ ಕೇಳಿದ್ದಕ್ಕೆ ಬಂಕ್ ಸಿಬ್ಬಂದಿಗೆ ಮನಸೋ ಇಚ್ಛೆ ಥಳಿಸಿರುವ ಘಟನೆ ಮಾರ್ಚ್​ 31ರ ಸಂಜೆ ನಡೆದಿದೆ.

ಎಸ್ಪಿ ಪ್ರತಿಕ್ರಿಯೆ: “ಪೆಟ್ರೋಲ್ ಬಂಕ್ ಸಿಬ್ಬಂದಿ ಶ್ರೀಕಾಂತ್ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವರು ಹೇಳುವಂತೆ ಮೂವರು ಅಪರಿಚಿತರು ಸ್ಕೂಟಿಯಲ್ಲಿ ಬಂದು ಹಲ್ಲೆ ಮಾಡಿದ್ದಾರೆ‌.

ಹಲ್ಲೆ ಮಾಡಿದವರು ಯಾರು ಎನ್ನುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಸಿಸಿಟಿವಿ ದೃಶ್ಯಾವಳಿ ಮತ್ತು ಹಲ್ಲೆ ಮಾಡಿದವರ ವಾಹನ ಸಂಖ್ಯೆ ಆಧರಿಸಿ ಗಂಗಾವತಿ ಗ್ರಾಮೀಣ ಠಾಣಾ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು” ಎಂದು ಎಸ್ಪಿ ರಾಮ್ ಎಲ್.ಅರಸಿದ್ಧಿ ಮಾಹಿತಿ ನೀಡಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ