Breaking News

ರಾಜ್ಯದಲ್ಲಿ ಹಾಲು, ಮೊಸರು, ವಿದ್ಯುತ್ ದರ, ಟೋಲ್ ಶುಲ್ಕ ಮತ್ತಷ್ಟು ದುಬಾರಿ (

Spread the love

ಬೆಂಗಳೂರು: ಹಾಲು, ಮೊಸರು, ವಿದ್ಯುತ್ ದರ, ಟೋಲ್ ಶುಲ್ಕ, ಕಸ ಸಂಗ್ರಹ ಮೇಲಿನ ಸೆಸ್ ಸೇರಿದಂತೆ ಜನ ಬಳಕೆಯ ವಸ್ತುಗಳು ಮತ್ತು ಸೇವೆಗಳ ದರ ಇಂದಿನಿಂದ ಮತ್ತಷ್ಟು ತುಟ್ಟಿಯಾಗಲಿದೆ. ದರ ಏರಿಕೆ ಬಿಸಿ ಇಲ್ಲಿಗೇ ನಿಂತಿಲ್ಲ, ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾದಂತೆ ಇತರ ವಸ್ತುಗಳ ಬೆಲೆಯೂ ದುಬಾರಿಯಾಗಲಿದೆ.

ಇಂದಿನಿಂದ ಜನ ಬಳಕೆಯ ಹಾಲು, ಮೊಸರು ದರ ಒಂದು ಲೀಟರ್​​ಗೆ 4 ರೂಪಾಯಿ ಏರಿಕೆಯಾಗಲಿದೆ. ಕೆಎಂಎಫ್ ಮನವಿಯಂತೆ ರಾಜ್ಯ ಸರ್ಕಾರ ಹಾಲಿನ ದರ ಏರಿಕೆಗೆ ಸಹಮತ ನೀಡಿದೆ. ಅದರಂತೆ ಹಾಲು, ಮೊಸರು ದರ ಹೆಚ್ಚಳ ಇಂದಿನಿಂದ ಗ್ರಾಹಕರ ಜೇಬು ಸುಡಲಿದೆ.

ವಿದ್ಯುತ್ ದರ ಹೆಚ್ಚಳ: ವಿದ್ಯುತ್ ದರ ಹೆಚ್ಚಳವೂ ಸಹ ಇಂದಿನಿಂದ ಜಾರಿಗೆ ಬರಲಿದ್ದು, ಏಪ್ರಿಲ್ ತಿಂಗಳ ಬಿಲ್ ಪಾವತಿಸುವ ಸಂದರ್ಭದಲ್ಲಿ ವಿದ್ಯುತ್ ಬಿಲ್ ಶಾಕ್ ನೀಡಲಿದೆ. ಗೃಹ ಜ್ಯೋತಿ ಯೋಜನೆ ಹೊರತುಪಡಿಸಿದ ಗ್ರಾಹಕರಿಗೆ ಒಂದು ಯುನಿಟ್​​ಗೆ ವಿದ್ಯುತ್ ದರ 36 ಪೈಸೆಯಷ್ಟು ಹೆಚ್ಚಳವಾಗಲಿದೆ. ಕೆಪಿಟಿಸಿಎಲ್ ಮತ್ತು ಎಸ್ಕಾಮ್​​ಗಳ ಮನವಿ ಮೇರೆಗೆ ಕೆಇಆರ್​ಸಿ ವಿದ್ಯುತ್ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ. ಆ ಪ್ರಕಾರ ಇಂದಿನಿಂದ ಒಂದು ಯುನಿಟ್​​ಗೆ 36 ಪೈಸೆ ಕರೆಂಟ್ ದರ ತುಟ್ಟಿಯಾಗಲಿದೆ.

ಟ್ರೋಲ್ ದುಬಾರಿ: ಹಾಲು, ಮೊಸರು, ವಿದ್ಯುತ್ ನಂತರ ಸಾರಿಗೆ ಕ್ಷೇತ್ರದಲ್ಲಿ ವಾಹನಗಳ ಟೋಲ್ ದರವೂ ಇಂದಿನಿಂದ ಹೆಚ್ಚಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿಯಂತೆ ಟೋಲ್ ಶುಲ್ಕ ದರ ಶೇ. 3 ರಿಂದ 5 ರಷ್ಟು ಏರಿಕೆಯಾಗಲಿದೆ. ರಾಜ್ಯದಲ್ಲಿ ಒಟ್ಟು 60ಕ್ಕೂ ಹೆಚ್ಚು ಟೋಲ್ ಗಳಿದ್ದು ದರ ಏರಿಕೆ ಬಿಸಿ ವಾಹನ ಸವಾರರಿಗೆ ಹೊರೆಯಾಗಲಿದೆ.

ಕಸ ಸಂಗ್ರಹ ಸೆಸ್: ರಾಜಧಾನಿ ಬೆಂಗಳೂರಿನಲ್ಲಿ ಕಸ ಸಂಗ್ರಹದ ಮೇಲಿನ ಸೆಸ್ ಸಹ ಇಂದಿನಿಂದ ಜಾರಿಗೆ ಬರುವಂತೆ ವಿಧಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಕಸ ಸಂಗ್ರಹದ ಮೇಲೆ ಮಾಸಿಕ ಸೆಸ್ ಅನ್ನು ವಸೂಲು ಮಾಡಲಿದೆ. ಕಸದ ಸೆಸ್ ಅನ್ನು ಎರಡು ವಿಭಾಗಗಳನ್ನಾಗಿ ಮಾಡಲಾಗಿದ್ದು, ಮನೆಗಳ ಕಸ ಮತ್ತು ವಾಣಿಜ್ಯ ಸಂಸ್ಥೆಗಳ ಕಸ ಸಂಗ್ರಹಕ್ಕೆ ಪ್ರತ್ಯೇಕ ಪ್ರಮಾಣದ ಸೆಸ್ ವಿಧಿಸಲಾಗುತ್ತದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ