Breaking News

ಔರಂಗಜೇಬ್, ಟಿಪ್ಪು ಪೋಟೋ ಹಾಕಿ ಪ್ರಚೋದನಕಾರಿ ಪೋಸ್ಟ್…

Spread the love

ಔರಂಗಜೇಬ್, ಟಿಪ್ಪು ಪೋಟೋ ಹಾಕಿ ಪ್ರಚೋದನಕಾರಿ ಪೋಸ್ಟ್…
ಬೆಳಗಾವಿ ಕಾಂಗ್ರೆಸ್ ಮುಖಂಡನ ಮೇಲೂ ಬಿತ್ತು ಕೇಸ್
ಔರಂಗಜೇಬ್, ಟಿಪ್ಪು ಪೋಟೋ ಹಾಕಿ ಪ್ರಚೋದನಕಾರಿ ಪೋಸ್ಟ್ ಹಾಕಿರುವ ಬೆಳಗಾವಿ ಕಾಂಗ್ರೆಸ್ ಮುಖಂಡನ ಮೇಲೆ ಕೇಸ್ ದಾಖಲಿಸಲಾಗಿದೆ.
ಬೆಳಗಾವಿಯ ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮಾ ಮಂದಿರಕ್ಕೆ ಕಲ್ಲು ಎಸೆತದ ಬಳಿಕ ಪೊಲೀಸರು ಅಲರ್ಟ್ ಆಗಿದ್ದು, ಯೂಥ್ ಕಾಂಗ್ರೆಸ್ ಮುಖಂಡ ಮುಜಮಿಲ್ ಅತ್ತಾರ (32) ಎಂಬಾತನ ವಿರುದ್ಧ ಕೇಸ್ ದಾಖಲಿಸಲಾಗಿದೆ. ಆರೋಪಿ ಬೆಳಗಾವಿಯ ಅಜಾದ್ ನಗರದ ನಿವಾಸಿಯಾಗಿದ್ದು, ಕಾಂಗ್ರೆಸ್ ಮುಖಂಡನೂ ಆಗಿದ್ದಾನೆ. ಈತ ತನ್ನ ಇನ್ಟಾಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದಾನೆ.
ಔರಂಗಜೇಬ್, ಟಿಪ್ಪು ಪೋಟೋ ಹಾಕಿ ಬಾಪ್ ಹೈ ತುಮಾರೇ ಭೂಲನಾ ಮತ್ ಎಂದು ಹಿಂದಿಯಲ್ಲಿ ಪೋಸ್ಟ್ ಹಾಕಿದ್ದಾನೆ.
ಜೊತೆಗೆ ಈ ಪೋಟೋಗೆ ಹಿಂದಿ ಅಗ್ನಿಪಥ್ ಚಿತ್ರದ ಜ್ವಾಲಾಸಿ ಜಲತಿ ಹೈ ಎಂಬ ಹಾಡಿನ ತುಣುಕು ಸೇರಿಸಿದ್ದಾನೆ. ಪ್ರಚೋದನಕಾರಿ ಪೋಸ್ಟ್ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರಿಂದ ಕೇಸ್ ದಾಖಲಿಸಲಾಗಿದೆ. ಇತ್ತ ಕೇಸ್ ದಾಖಲಾಗುತ್ತಿದ್ದಂತೆ ಹಾಕಿದ್ದ ಪೋಸ್ಟ್ ಡಿಲಿಟ್ ಮಾಡಿದ್ದಾನೆ.
ಕಾಂಗ್ರೆಸ್ ಮುಖಂಡನ ವಿರುದ್ಧ ಮಾರ್ಕೆಟ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ