Breaking News

ಬಾಗಲಕೋಟೆ ಎಲ್ಲೆಂದರಲ್ಲಿ ಓಡಾಡೋ ಹಾಗಿಲ್ಲ,ಈ ನಗರ ಈಗ ಹೈ ಅಲರ್ಟ್..

Spread the love

ಬಾಗಲಕೋಟೆ ಎಲ್ಲೆಂದರಲ್ಲಿ ಓಡಾಡೋ ಹಾಗಿಲ್ಲ, ಏನು ಬೇಕು ಅದನ್ನ ಮಾಡೋ ಹಾಗಿಲ್ಲ…ಈ ನಗರ ಈಗ ಹೈ ಅಲರ್ಟ್..
ಮಂಗಳೂರು ಕೇಸ್ ಬೆನ್ನಲ್ಲೆ ಹೈ ಅಲರ್ಟ್ ಆಗಿರೋ ಬಾಗಲಕೋಟೆ ಪೋಲಿಸ್..
ಹೈ ಡೆಪ್ನಿಷನ್ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಬಾಗಲಕೋಟೆ ನಗರ.
ಬ್ಯಾಂಕ್, ಎಟಿಎಂಗಳಿಂದ ಹಣ ರವಾನೆ ಮಾಡೋದಾದ್ರೆ ಪೋಲಿಸರು ಹೈ ಅಲರ್ಟ್
ಅಪರಾಧಿ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಬಾಗಲಕೋಟೆ, ನವನಗರ ಸೇರಿ ನಗರದಾದ್ಯಂತ 393 ಹೈಡೆಪ್ನಿಷನ್ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ದೂರದವರೆಗಿನ ವಾಹನದಲ್ಲಿನ ವ್ಯಕ್ತಿಯ ಚಹರೆ ಮತ್ತು ವಾಹನ ಸಂಖ್ಯೆಯನ್ನು ಈ ಸಿ ಸಿ ಕ್ಯಾಮೆರಾಗಳು ಸ್ಪಷ್ಟವಾಗಿ ಗುರುತಿಸುತ್ತವೆ. ಯಾವುದೇ ಭಾಗದಲ್ಲಿ ಹಲ್ಲೆ, ದರೋಡೆ ಸೇರಿ ಕ್ರೈಂ ನಡೆದ್ರೂ ತಕ್ಷಣ ಪೋಲಿಸ ಅಲರ್ಟ್ ಆಗುತ್ತಾರೆ.
ಬಾಗಲಕೋಟೆ ಎಸ್.ಪಿ. ಕಚೇರಿಯಿಂದಲೇ 393 ಕ್ಯಾಮರಾಗಳ ಮಾನಿಟರಿಂಗ್ ನಡೆಯುತ್ತದೆ. 24*7 ಸದಾಕಾಲ ಸಿಸಿ ಕ್ಯಾಮರಾ ವೀಕ್ಷಣೆಗೆ ವಿಶೇಷ ಪೋಲಿಸರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯಾದ್ಯಂತ ಇರೋ 320 ಬ್ಯಾಂಕ್ ಗಳ 240ಕ್ಕೂ ಅಧಿಕ ಬ್ರ್ಯಾಂಚ್ ಅಧಿಕಾರಿಗಳ ಜೊತೆ ಪೋಲಿಸರ ಸಭೆ ನಡೆಸಿದ್ದಾರೆ.
ವಾರಕ್ಕೊಮ್ಮೆ ಸಿಸಿ ಕ್ಯಾಮರಾ ಪರಿಶೀಲಿಸಿ ಸಂಶಯಾ ಸ್ಪದ ವ್ಯಕ್ತಿಗಳು ಕಂಡು ಬಂದರೆ ಪೋಲಿಸರಿಗೆ ತಿಳಿಸಲು ಸೂಚಿಸಲಾಗಿದೆ.
20 ಲಕ್ಕಕ್ಕೂ ಅಧಿಕ ಹಣ ವಿಥ್ ಡ್ರಾ ಮಾಡಿದ್ರೆ ವ್ಯಕ್ತಿಗೆ ಗನ್ ಮ್ಯಾನ್ ಸೌಲಭ್ಯ ನೀಡಲಾಗುವುದು. ಕೋಟಿಗೂ ಅಧಿಕ ಹಣ ಸಾಗಿಸೋದಾದ್ರೆ ಪೋಲಿಸರ ಭದ್ರತೆ ಪಡೆಯಲು ಸೂಚನೆ. ಜಿಲ್ಲಾದ್ಯಂತ 305 ಇರುವ ಎಟಿಎಂಗಳಿಗೆ ಕಡ್ಡಾಯ ಭದ್ರತಾ ಸಿಬ್ಬಂದಿ ನಿಯೋಜನೆಗೆ ಸೂಚಸಲಾಗಿದೆ.
ಈಗಾಗಲೇ ಜಿಲ್ಲಾದ್ಯಂತ 22 ನಾಕಾ ಬಂಧಿ ನಿರ್ಮಿಸಿ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಒಟ್ಟಾರೆ ಬಾಗಲಕೋಟೆಯಲ್ಲಿ ಪೊಲೀಸ್ ಇಲಾಖೆ ಮತ್ತಷ್ಟು ಅಲರ್ಟ್ ಆಗಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ