Breaking News
Home / ಕ್ರೀಡೆ / ರಿಕೆಟ್‌ಗೆ ವಿದಾಯ ಹೇಳಿದ ಪಾರ್ಥೀವ್ ಪಟೇಲ್..!

ರಿಕೆಟ್‌ಗೆ ವಿದಾಯ ಹೇಳಿದ ಪಾರ್ಥೀವ್ ಪಟೇಲ್..!

Spread the love

ಮುಂಬೈ, ಡಿ.9- ಟೀಂ ಇಂಡಿಯಾ ಹಾಗೂ ಆರ್‍ಸಿಬಿ ತಂಡದ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಅವರು ಇಂದು 17 ವರ್ಷಗಳ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿಗೆ ಅವರು ರಾಜೀನಾಮೆ ಪತ್ರ ನೀಡುವ ಮೂಲಕ ತಾವು ಇನ್ನು ಮುಂದೆ ಯಾವುದೇ ಮಾದರಿಯ ಕ್ರಿಕೆಟ್‍ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆರ್‍ಸಿಬಿ ತಂಡದ ಭರವಸೆಯ ಆಟಗಾರನಾಗಿದ್ದ ಪಾರ್ಥೀವ್ ಪಟೇಲ್‍ಗೆ 2013ರ ಐಪಿಎಲ್‍ನಲ್ಲಿ ಒಂದೇ ಒಂದು ಪಂದ್ಯ ಆಡಲು ಅವಕಾಶ ಸಿಕ್ಕಿರಲಿಲ್ಲ ಹಾಗೂ ಭಾರತ ತಂಡದಲ್ಲೂ ಸ್ಥಾನ ಪಡೆಯಲು ಪದೇ ಪದೇ ಎಡವುತ್ತಿದ್ದರಿಂದ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ರಣಜಿ ಪಂದ್ಯಾವಳಿ ನಡೆಸಲು ಬಿಸಿಸಿಐ ನಿರ್ಧರಿಸುತ್ತಿದ್ದ ಬೆನ್ನಲ್ಲೇ ಪಾರ್ಥೀವ್ ಪಟೇಲ್ ಅವರು ನಿವೃತ್ತಿ ಘೋಷಿಸಿರುವುದರಿಂದ ಆ ರಾಜ್ಯಕ್ಕೆ ನಷ್ಟವಾಗಿದೆ.

ಪಾರ್ಥೀವ್ ಪಟೇಲ್‍ರ ನಾಯಕತ್ವದಲ್ಲೇ ಗುಜರಾತ್ ತಂಡವು ಮೊದಲ ಬಾರಿಗೆ ರಣಜಿ ಟ್ರೋಫಿಯನ್ನು ಗೆದ್ದು ಸಂಭ್ರಮಿಸಿತ್ತು.
2002ರಲ್ಲಿ ತಮ್ಮ 17ನೇ ವಯಸ್ಸಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದ ಪಟೇಲ್ 25 ಟೆಸ್ಟ್ ಪಂದ್ಯಗಳಿಂದ 6 ಅರ್ಧಶತಕಗಳ ನೆರವಿನಿಂದ 934 ರನ್ ಗಳಿಸಿದ್ದರೆ, 38 ಏಕದಿನ ಪಂದ್ಯಗಳಿಂದ 4 ಅರ್ಧಶತಕಗಳ ನೆರವಿನಿಂದ 734 ರನ್, 2 ಚುಟುಕು ಪಂದ್ಯಗಳಿಂದ 36 ರನ್ ಗಳಿಸಿದ್ದಾರೆ.


Spread the love

About Laxminews 24x7

Check Also

ಕ್ರಿಕೆಟರ್ ಶಿಖರ್​ ಧವನ್​​ ಕಪಾಳಕ್ಕೆ ಬಾರಿಸಿದ ತಂದೆ..!

Spread the loveಧವನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ. ಶಿಖರ್ ಧವನ್ ಕಪಾಳಮೋಕ್ಷ ಮಾಡಿಸಿಕೊಂಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ