Home / ಜಿಲ್ಲೆ / ಬೆಳಗಾವಿ / ಕಾಂಗ್ರೆಸ್ ಜೊತೆ ಕೈ ಜೋಡಿಸೋದು ಬೇಡ ಅಂತಾ ನಾವು ಹೆಚ್‍ಡಿಕೆಗೆ ಮೊದಲೇ ಹೇಳಿದ್ದೆವು.: ಹೊರಟ್ಟಿ

ಕಾಂಗ್ರೆಸ್ ಜೊತೆ ಕೈ ಜೋಡಿಸೋದು ಬೇಡ ಅಂತಾ ನಾವು ಹೆಚ್‍ಡಿಕೆಗೆ ಮೊದಲೇ ಹೇಳಿದ್ದೆವು.: ಹೊರಟ್ಟಿ

Spread the love

ಧಾರವಾಡ: ಕಾಂಗ್ರೆಸ್ ಜೊತೆ ಕೈ ಜೋಡಿಸೋದು ಬೇಡ ಅಂತಾ ನಾವು ಹೆಚ್‍ಡಿಕೆಗೆ ಮೊದಲೇ ಹೇಳಿದ್ದೆವು. ಕೊಂಚ ತಡೆದುಕೊಳ್ಳಿ ಅಂದಿದ್ದೆವು ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಹೊರಟ್ಟಿ, ದೋಸ್ತಿ ಸರ್ಕಾರದಲ್ಲಿ ಸಿದ್ದರಾಮಯ್ಯ ಜೆಡಿಎಸ್ ಮುಗಿಸೋದು ನನ್ನ ಕೆಲಸ ಅಂದಿದ್ದರು. ಸಿದ್ದರಾಮಯ್ಯ ಹೆಚ್‍ಡಿಕೆ ಜೊತೆಯಾಗಿ ಕೂತು ಮಾತಾಡೋ ಸ್ಥಿತಿ ನಿರ್ಮಾಣವಾಗಲಿಲ್ಲ. ಇಬ್ಬರೂ ಕುಳಿತು ಮಾತನಾಡಬಹುದಿತ್ತು. ಸಮನ್ವಯತೆಯಿಂದ ಹೋಗಬೇಕಿತ್ತು ಆದರೆ ಇದು ಒತ್ತಾಯದ ಮದುವೆ ಆದಂತಾಯಿತು ಎಂದು ಹೇಳಿದರು.

ಈ ವೇಳೆ ಲೋಕಸಭಾ ಚುನಾವಣೆಯಲ್ಲಿ ಎಂಟು ಸೀಟು ತೆಗೆದುಕೊಳ್ಳಿ ಎಂದು ಬಿಜೆಪಿಯಿಂದ ಆಫರ್ ಬಂದಿತ್ತು. ಸಿಎಂ ಆಗಿ ಮುಂದುವರೆಯಲು ಹೆಚ್‍ಡಿಕೆಗೆ ಆಫರ್ ಕೊಟ್ಟಿದ್ದರು ಎಂದು ಕೂಡಾ ಹೇಳಿದರು. ಆದರೆ ಜಾತ್ಯಾತೀತ ನಿಲುವು ಹಿನ್ನೆಲೆ ದೇವೇಗೌಡರು ಬಿಜೆಪಿ ಸರ್ಕಾರ ಜೊತೆ ಬೇಡ ಅಂದಿದ್ದರು. ಗೌಡರು ಏನೇ ಹೇಳಿದರು ಅದರಲ್ಲಿ ಆದರ್ಶವಿರುತ್ತೆ. ಆದರೆ ಇವರೆಲ್ಲ ಗೌಡರನ್ನೂ ಟೀಕೆ ಮಾಡುತ್ತಿದ್ದಾರೆ ಎಂದರು.

ಜನವರಿಯಿಂದ ಬದಲಾವಣೆ ಎಂದು ಹೆಚ್‍ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಹೊರಟ್ಟಿ, ಕುಮಾರಸ್ವಾಮಿ ಏನೇ ಹೇಳಿದರು ಸತ್ಯವಿರುತ್ತೆ. ಅವರು ಎಲ್ಲವನ್ನು ತಿಳಿದುಕೊಂಡೇ ಹೇಳಿರುತ್ತಾರೆ. ಬಿಜೆಪಿಯಲ್ಲಿ 105 ಮತ್ತು 17ರ ಮಧ್ಯೆ ತಿಕ್ಕಾಟ ನಡೆದಿದೆ. 17 ಜನ ಬಂದ ಮೇಲೆ ಸರ್ಕಾರ ರಚನೆಯಾಗಿದೆ. ಅವರಿಗೆಲ್ಲ ಮಂತ್ರಿ ಸ್ಥಾನ ಕೊಡಬೇಕಾಗುತ್ತೆ. ಹೀಗಾಗಿ ವಿಶ್ವನಾಥ್ ಅವರು ಆರೋಪ ಮಾಡಿರೋದು ಸಹಜ ಎಂದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ