Breaking News
Home / Uncategorized / ಚುನಾವಣೆಯಲ್ಲಿ ಸೋಲು ಕಾಣುತ್ತಿದ್ದೇವೆ ಇದಕ್ಕೆ ಕಾರಣ ಇವಿಎಂ ಮಷಿನ್:ಶಿವರಾಜ ತಂಗಡಗಿ ಆರೋಪ

ಚುನಾವಣೆಯಲ್ಲಿ ಸೋಲು ಕಾಣುತ್ತಿದ್ದೇವೆ ಇದಕ್ಕೆ ಕಾರಣ ಇವಿಎಂ ಮಷಿನ್:ಶಿವರಾಜ ತಂಗಡಗಿ ಆರೋಪ

Spread the love

ಕೊಪ್ಪಳ :  ದೇಶದಲ್ಲಿ ಕಾಂಗ್ರೆಸ್ ಗೆ ವ್ಯಾಪಕ ಬೆಂಬಲ ಇದೆ. ಆದರೂ ಚುನಾವಣೆಯಲ್ಲಿ ಸೋಲು ಕಾಣುತ್ತಿದ್ದೇವೆ ಇದಕ್ಕೆ ಕಾರಣ ಇವಿಎಂ ಮಷಿನ್ ದೋಷ ಎಂದು ಮಾಜಿ ಸಚಿವ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.

ನಗರದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಬಿಜೆಪಿ ಸರ್ಕಾರ ಆಡಳಿತವನ್ನು ದುರುಪಯೋಗ ಪಡೆದುಕೊಳ್ಳುತ್ತಿದೆ.  ಇವಿಎಂ ಮಷಿನ್ ಗಳನ್ನು ದುರುಪಯೋಗ ಪಡೆದುಕೊಳ್ಳುತ್ತಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರುಗಳನ್ನು ಸಲ್ಲಿಕೆಯಾಗಿವೆ.  ಈ ಬಗ್ಗೆ ಕಾಂಗ್ರೆಸ್ ಸಹ ಮಷಿನ್ ಬಗ್ಗೆ ಅನುಮಾನ ವ್ಯಕ್ತ ಪಡಿಸಿದೆ. ಈ ಯಂತ್ರಗಳ ಬಗ್ಗೆ ಬಹಿರಂಗವಾಗಿ ತಜ್ಞರ ಸಮ್ಮುಖದಲ್ಲಿ ಪ್ರಾತ್ಯಕ್ಷಿ ಮಾಡಬೇಕು ಇವಿಎಂ ಬದಲು ಬ್ಯಾಲೆಟ್ ಬಳಸಬೇಕು ಅಂತಾ ಆಗ್ರಹಿಸಿದರು.

 ಬಿಜೆಪಿ ಗೆ ನಾಯಕರನ್ನು ಬೆಳಸುವ ಹಾಗೂ ದೇಶವನ್ನು ಮುನ್ನೆಡೆಸುವ ಶಕ್ತಿ ಇಲ್ಲ. ಕಾಂಗ್ರೆಸ್ ಮತ್ತು ಇತರೆ ಪಕ್ಷದ ನಾಯಕರನ್ನು ಸೆಳೆದು ಬಿಜೆಪಿ ಕರೆತರಲಾಗುತ್ತಿದೆ. ಮೂಲ ಬಿಜೆಪಿಯವರಿಗಿಂತ ವಲಸೆ ಬಿಜೆಪಿಗರೆ ಹೆಚ್ಚು, ಜನರನ್ನು ಮೋಸ ಮಾಡಿ, ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಅಧಿಕಾರದಲ್ಲಿರುವ ಬಿಜೆಪಿಗೆ ಮುಂದೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಆಡಳಿತದ ಎಲ್ಲಾ ಹಂತದಲ್ಲಿ ವೈಪಲ್ಯವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ ಎಂದರು.

ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತೇವೆ ಅಂದ್ರೆ ತಾಲ್ಲೂಕುಗಳನ್ನು ಜಿಲ್ಲೆಯನ್ನಾಗಿ ಮಾಡ್ತಾರೆ. ಇದು ಬಿಜೆಪಿಯ ದುರಾಡಳಿತ. ಬಳ್ಳಾರಿ ಜಿಲ್ಲೆಯಲ್ಲಿ ವಿಜಯನಗರ ಜಿಲ್ಲೆ ಘೋಷಣೆ ಮಾಡಿದ್ದರ ಬಗ್ಗೆ ಬಿಜೆಪಿ ವಿರುದ್ಧ ವ್ಯಂಗ ಮಾಡಿದರು. ಕಾಂಗ್ರೆಸ್ ನಲ್ಲಿದ್ದ ಆನಂದ ಸಿಂಗ್ ಗೆ ಅಮೀಷ ಹೊಡ್ಡಿ, ಅವರ ಒತ್ತಾಯದಂತೆ ಜಿಲ್ಲೆಯನ್ನಾಗಿ ಮಾಡಲಾಗಿದೆ ಹೊರತು ಇದು ಜನರ ಬೇಡಿಕೆಯಿಂದಲ್ಲಲ್ಲಾ ಎಂದರು.
 
ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ರಾಜಶೇಖರ್ ಹಿಟ್ನಾಳ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ, ಮುಖಂಡರಾದ ಶೈಲಾಜ ಹಿರೇಮಠ, ರಾಜು ನಾಯಕ, ಕುರಗೋಡ ರವಿ, ಅಕ್ಬರ್ ಪಾಶ ಪಲ್ಟನ್, ಪಾಶಾ ಕಾಟನ್, ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ಇತರರು ಇದ್ದರು.


Spread the love

About Laxminews 24x7

Check Also

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Spread the love ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯುವ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ