Breaking News
Home / ಅಂತರಾಷ್ಟ್ರೀಯ / ಕಿಲ್ಲರ್ ಕೊರೋನಾ ಹಾವಳಿಗೆ ವಿಶ್ವ ಹೈರಾಣ : 1.18 ಕೋಟಿ ಸೋಂಕಿತರು, ಮೃತರ ಸಂಖ್ಯೆ 5.41 ಲಕ್ಷ..!

ಕಿಲ್ಲರ್ ಕೊರೋನಾ ಹಾವಳಿಗೆ ವಿಶ್ವ ಹೈರಾಣ : 1.18 ಕೋಟಿ ಸೋಂಕಿತರು, ಮೃತರ ಸಂಖ್ಯೆ 5.41 ಲಕ್ಷ..!

Spread the love

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಜು.7- ಮಹಾಮಾರಿ ಕಿಲ್ಲರ್ ಕೊರೊನಾ ಕಬಂಧ ಬಾಹುಗಳಲ್ಲಿ ವಿಶ್ವವೇ ಹೈರಾಣಾಗಿದ್ದು, ರೋಗಿಗಳು ಮತ್ತು ಮೃತರÀ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲೇ ಮುಂದುವರಿದಿದೆ. ಜಗತ್ತಿನಾದ್ಯಂತ ಒಟ್ಟು ಸಾವಿನ ಸಂಖ್ಯೆ 5.41 ಲಕ್ಷ ಹಾಗೂ ಸೋಂಕಿತರ ಸಂಖ್ಯೆ 1.18 ಕೋಟಿ ದಾಟಿದೆ.

ಇದರ ನಡುವೆಯೂ ವಿಶ್ವದಲ್ಲಿ ಸುಮಾರು 67.42 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಗುಣಮುಖರಾಗಿದ್ದಾರೆ. ಜಗತ್ತಿನಾದ್ಯಂತ ನಿನ್ನೆ ಮಧ್ಯರಾತ್ರಿವರೆಗೆ 5,40,848 ಮಂದಿ ಸಾವಿಗೀಡಾಗಿದ್ದು, 1,17,48,938 ಸೋಂಕು ಪ್ರಕರಣಗಳು ವರದಿಯಾಗಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 44.65 ಲಕ್ಷ ದಾಟಿದೆ. ಅಲ್ಲದೇ ಇನ್ನೂ 58,500ಕ್ಕೂ ಹೆಚ್ಚು ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಆತಂಕವಿದೆ. ನಾಳೆ ವೇಳೆಗೆ ಸಾವಿನ ಸಂಖ್ಯೆ 5.46 ಲಕ್ಷ ಮತ್ತು ಸಾಂಕ್ರಾಮಿಕ ರೋಗಿಗಳ ಪ್ರಮಾಣ 1.20 ಕೋಟಿ ದಾಟುವ ಆತಂಕವಿದೆ.

ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ರೋಗಿಗಳ ಚೇತರಿಕೆ/ಗುಣಮುಖ ಪ್ರಮಾಣದಲ್ಲೂ ವೃದ್ದಿ ಕಂಡುಬಂದಿದೆ. ವಿಶ್ವದಲ್ಲಿ ಈವರೆಗೆ 67,42,587 ಮಂದಿ ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು ಗುಣಮುಖರಾಗಿದ್ದಾರೆ. ಅಮೆರಿಕ, ಬ್ರೆಜಿಲ್, ಭಾರತ, ರಷ್ಯಾ, ಮತ್ತು ಇಂಗ್ಲೆಂಡ್ ಕೊರೊನಾ ಕೇಸ್‍ಗಳಲ್ಲಿ ವಿಶ್ವದ ಟಾಪ್ ಫೈವ್ ದೇಶಗಳಾಗಿವೆ


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ