Home / Uncategorized / ಬೆಳಗಾವಿ:ರೈಲ್ವೆ ನಿಲ್ದಾಣ ಅಭಿವೃದ್ಧಿ ಪರಿಶೀಲನೆ

ಬೆಳಗಾವಿ:ರೈಲ್ವೆ ನಿಲ್ದಾಣ ಅಭಿವೃದ್ಧಿ ಪರಿಶೀಲನೆ

Spread the love

ಬೆಳಗಾವಿ: ಬೆಳಗಾವಿ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿ ವೀಕ್ಷಿಸಲು ಶನಿವಾರ ಭೇಟಿ ನೀಡಿದ ನೈರುತ್ಯ ವಲಯ ರೇಲ್ವೆ ಮಹಾಪ್ರಬಂಧಕ ಸಂಜೀವ ಕಿಶೋರಿ ಅವರಿಗೆ ಸಂಸದೆ ಮಂಗಲಾ ಅಂಗಡಿ ಅವರು ಸುಧಾರಣಾ ಕಾಮಗಾರಿಗಳ ಪಟ್ಟಿ ನೀಡಿದರು.

ಬೆಳಗಾವಿ- ಕಿತ್ತೂು- ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಬೇಗ ಪ್ರಾರಂಭಿಸಬೇಕು.

ನಗರದ ಟಿಳಕವಾಡಿ ಸಿಎಲ್‌ಸಿ ಸಂಖ್ಯೆ 383 ಹಾಗೂ 382 (ಟಿಳಕವಾಡಿ ಗೇಟ್‌ ನಂಬರ್‌ 1 ಹಾಗೂ 2) ಹತ್ತಿರ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕು. ನಗರದ ರೈಲು ನಿಲ್ದಾಣದ ಪ್ಲ್ಯಾಟ್‌ಫಾರಂ ನಂವರ್ 4ಕ್ಕೆ ಪ್ರಯಾಣಿಕರ ಅನುಕೂಲಕ್ಕಾಗಿ ಷಲ್ಟರ್‌ ನಿರ್ಮಿಸಬೇಕು. ಗೋಕಾಕ ರಸ್ತೆಯ ರೈಲು ನಿಲ್ದಾಣದಲ್ಲಿ ಎಲ್ಲ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ಮಾಡಬೇಕು. ಈಗ ವಾರದಲ್ಲಿ ಒಂದು ಬಾರಿ ಸಂಚರಿಸುವ ಯಸವಂತಪುರ- ಪಂಢರಪುರ ರೈಲನ್ನು ನಾಲ್ಕು ಬಾರಿ ಸಂಚರಿಸುವಂತೆ ಆದೇಶಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಬೆಳಗಾವಿ ರೈಲ್ವೆ ನಿಲ್ದಾಣದ ನವೀಕರಣ ಕಾಮಗಾರಿ ಮುಕ್ತಾಯ ಹಂತ ತಲುಪಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸುವ ಉದ್ದೇಶವಿದೆ ಎಂದೂ ಮಂಗಲಾ ತಿಳಿಸಿದರು.

ಹುಬ್ಬಳ್ಳಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಳಖೇಡೆ ಹಾಗೂ ಬಿಜೆಪಿ ಮುಖಂಡರು ಇದ್ದರು.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ