Breaking News

‘ಸೈನಿಕರ ಸಾಹಸ ಯುವಕರಿಗೆ ಪ್ರೇರಣೆ’

Spread the love

ವದತ್ತಿ: 1965ರ ಸೆಪ್ಟೆಂಬರ್‌ನಲ್ಲಿ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಆಧೀನಕ್ಕೊಳಪಟ್ಟ ಮಹಾರಾಜ ಕೆ ಗ್ರಾಮವನ್ನು ಯುದ್ಧದಿಂದ ಮರಳಿ ಪಡೆಯುವ ಸಂದರ್ಭದಲ್ಲಿ ಕರ್ನಲ್ ಹನಬರಲಾಲ್ ಮೆಹ್ತಾ, ಸುಬೇದಾರ ನಂಬಿಯಾರ್, ಸಿಪಾಯಿ ಕನ್ನನ್, ಸಿ.ಬಿ. ಪಾಟೀಲ ಸೇರಿ ಹುತಾತ್ಮರಾದ ಯೋಧರಿಗೆ ಗುರುವಾರ ನವಿಲುತೀರ್ಥದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

 

ನಾಲ್ಕನೇ ಮದ್ರಾಸ್ ಬಟಾಲಿಯನ್‍ದಲ್ಲಿ ಸೇವೆ ಸಲ್ಲಿಸಿದ 55 ಮಾಜಿ ಸೈನಿಕರು ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ರೇಣುಕಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಗಿಲ್, ಪಂಜಾಬ ಸುವರ್ಣ ಸೌಧದಲ್ಲಿ ಅಡಗಿದ ಉಗ್ರರ ಸೆದೆಬಡಿದ, ಶ್ರೀಲಂಕಾ ಯುದ್ಧ, ಮೇಘಧೂತ, ಜಮ್ಮು ಕಾಶ್ಮೀರ, ಬಾಂಗ್ಲಾದೇಶ ಯುದ್ಧದಲ್ಲಿ ಭಾಗವಹಿಸಿದ ಕರ್ನಾಟಕ, ಆಂಧ್ರ ಪ್ರದೇಶ, ತಮಿಳನಾಡು, ಕೇರಳ ವೀರ ಯೋಧರು ಭಾಗಿಯಾಗಿ ತಮ್ಮ ಅನುಭವ ಹಂಚಿಕೊಂಡರು. ಹಿರೇಕುಂಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ರೀತ್‌ ಪರೇಡ್‌ನಲ್ಲಿ ಭಾಗವಹಿಸಿ ಗಮನ ಸೆಳೆದರು.

ಮಾಜಿ ಸೈನಿಕ ಬಿಇಒ ಎಸ್.ಸಿ.ಕರೀಕಟ್ಟಿ ಮಾತನಾಡಿ, ದೇಶದ ರಕ್ಷಣೆಗೆ ಸೈನಿಕರು ಸದಾ ಸನ್ನದ್ಧರಾಗಿರುತ್ತಾರೆ. ಸೈನಿಕ ಛಲ, ಸಾಹಸ, ಧೈರ್ಯ ಯುವಕರಿಗೆ ಪ್ರೇರಣೆ ಎಂದರು.

ಹಿರೇಕುಂಬಿ ಶಿಕ್ಷಕ ಹಾಗೂ ಮಾಜಿ ಸೈನಿಕ ರಮೇಶ ಪೂಜಾರಿ ಮಾತನಾಡಿ, ನಾಲ್ಕನೇ ಮದ್ರಾಸ್ ಬಟಾಲಿಯನ್‌ ಹಲವು ದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಪ್ರಖ್ಯಾತಿ ಪಡೆದಿದೆ. ಹುತಾತ್ಮರ ನೆನಪಿಗಾಗಿ ಪ್ರತಿ ವರ್ಷ ಮಹಾರಾಜ ಕೆ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು. 


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ