Home / ಜಿಲ್ಲೆ / ಬೆಳಗಾವಿ / ವಿಟಿಯು “ಜ್ಞಾನ ಸಂಗಮ”ದಲ್ಲಿ ಗಮನ ಸೆಳೆದ 100 ಮೀಟರ್ ತಿರಂಗಾ ರ್ಯಾಲಿ

ವಿಟಿಯು “ಜ್ಞಾನ ಸಂಗಮ”ದಲ್ಲಿ ಗಮನ ಸೆಳೆದ 100 ಮೀಟರ್ ತಿರಂಗಾ ರ್ಯಾಲಿ

Spread the love

ಬೆಳಗಾವಿ: ಬೆಳಗಾವಿಯ ವಿಶ್ವೇಶ್ವರಯ್ಯ ‌ತಾಂತ್ರಿಕ ವಿಶ್ವವಿದ್ಯಾಲಯ “ಜ್ಞಾನ ಸಂಗಮ”ದಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 76ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.

ವಿ ತಾ ವಿ ಯ ಕುಲಪತಿಗಳಾದ ಪ್ರೋ. ಕರಿಸಿದ್ದಪ್ಪ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಲ್ ದೀಪಕ ಕುಮಾರ ಗುರುಂಗ ಆಗಮಿಸಿದ್ದರು.

ಧ್ವಜಾರೋಹಣ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ ಕರ್ನಲ್ ದೀಪಕ ಗುರುಂಗ, ಕನ್ನಡ ನಾಡನ್ನು ಆಳಿದ ರಾಜಮನೆತನಗಳ ಕೊಡುಗೆಗಳನ್ನು, ಸಂಗೀತ, ಸಾಹಿತ್ಯ ಹೀಗೆ ಅನೇಕ್ ಕ್ಷೇತ್ರಗಳಲ್ಲಿ ಕನ್ನಡ ನಾಡಿನ ಕೊಡುಗೆಯನ್ನು ನೆನೆದರು. ನಂತರ ‌ಇವರು ರಾಷ್ಟ್ರದ ರಕ್ಷಣಾ ಕ್ಷೇತ್ರದ ಬೆಳವಣಿಗೆ ಬಗ್ಗೆ ಮಾತನಾಡುತ್ತಾ ಜಾಗತಿಕವಾಗಿ ಹೇಗೆ ನಮ್ಮ ರಾಷ್ಟ್ರ ರಕ್ಷಣಾ ವಲಯದಲ್ಲಿ ಶಕ್ತಿಶಾಲಿಯಾಗುತ್ತಿದೆ ಎಂದು ತಿಳಿಸಿದರು.

ಅಗ್ನಿವೀರ ಯೋಜನೆ ಒಂದು ದೂರದರ್ಶಿ ಯೋಜನೆಯಾಗಿದ್ದು ಯಾವುದೆ ಗೊಂದಲ ಇಲ್ಲದೆ ಹೆಚ್ಚಿನ ಯುವಕರು ಇದಕ್ಕೆ ಸೇರಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳು ಯಶಸ್ವಿಗೆ ಕಷ್ಟಪಡಬೇಕು ಕಷ್ಟ ಪಡದೆ ಯಾವುದೇ ಸಾಧನೆ ಸಾಧ್ಯವಿಲ್ಲ ಎಂದು ಹೇಳುತ್ತ ಐದು ಪ್ರಮುಖ ಅಂಶಗಳಾದ Dedication, Determination, Devotion, Direction ಮತ್ತು Deadline ಇವುಗಳನ್ನು ತಮ್ಮ ಪ್ರತಿ ಕಾರ್ಯದಲ್ಲಿ ರೂಡಿಸಿಕೊಂಡರೆ ನಿಮ್ಮ ಕನಸುಗಳು ನನಸಾಗುತ್ತವೆ ಎಂದು ತಿಳಿಸಿದರು.

ಧ್ವಜಾರೋಹಣ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಲಪತಿಗಳು ಈ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾಶಯಗಳನ್ನು ತಿಳಿಸಿ‌ ಅನೇಕ ಮಹಾತ್ಮರ ತ್ಯಾಗ ಬಲಿದಾನಗಳಿಂದ ಆಗಷ್ಟ್ 15, 1947ರಂದು ನಮ್ಮ ರಾಷ್ಟ್ರ ಸ್ವಾತಂತ್ರ್ಯವನ್ನು ಪಡೆದುಕೊಂಡು ಜಗತ್ತಿನ “ಸಂವಿಧಾನದ ತಾಯಿ” ಯ ಗೌರವದ ಸ್ಥಾನವನ್ನು ಪಡೆದುಕೊಂಡಿದೆ. ಬ್ರಿಟಿಷರ ಗುಲಾಮಗಿರಿಯಲ್ಲಿ ನರಳಿದ್ದ ಪ್ರಜೆಗಳಿಗೆ ಸಂವಿಧಾನಾತ್ಮಕ ಹಕ್ಕುಗಳನ್ನು ನೀಡಿದ ಶ್ರೇಷ್ಠ ದಿನ‌ ಇವತ್ತು. ಕಳೆದ 75ವರ್ಷಗಳಲ್ಲಿ ನಮ್ಮ ಭಾರತದ ಸಾಧನೆಯನ್ನ ನೆನೆಯುವಂತಹ ಹಾಗೂ ಜಗತ್ತಿಗೆ ಸಾರಿ ಹೇಳುವ ದಿನ.

ಇವತ್ತು ರಾಷ್ಟ್ರದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅಮೂಲಾಗ್ರ ಬದಲಾವಣೆಗಳು ಆಗುತ್ತಿದ್ದು ಸಮಾಜದಲ್ಲಿ ಧನಾತ್ಮಕ ಬೆಳವಣಿಗೆ ಆಗಬೇಕೆಂದರೆ ಹಾಗೂ ಸಮಾಜ ಐಕ್ಯತೆ ಹಾಗೂ ಸಾಮರಸ್ಯದಿಂದ ಇರಲು ಶಿಕ್ಷಣ ಕ್ಷೇತ್ರವೇ ಪರಿಣಾಮಕಾರಿ ಮಾದ್ಯಮ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ಇರುವ ನಾವು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ಕೊಡಬೇಕು ಹಾಗೂ ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದು ಇದರ ಪರಿಣಾಮಕಾರಿ ಜಾರಿಗೆಯಲ್ಲಿ ಶಿಕ್ಷಕರ ಪಾತ್ರದ ಜೊತೆಗೆ ಪೋಷಕರ ಪಾತ್ರವು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ