Breaking News
Home / Uncategorized / ಅತ್ಯಾಚಾರ ಬೆದರಿಕೆ ಪ್ರಕರಣ ದಾಖಲಿಸಿದ ರಾಜಕುಮಾರ್ ವಿರುದ್ಧ 10 ಕೇಸು ಹಾಕಿದ ಯುವತಿ

ಅತ್ಯಾಚಾರ ಬೆದರಿಕೆ ಪ್ರಕರಣ ದಾಖಲಿಸಿದ ರಾಜಕುಮಾರ್ ವಿರುದ್ಧ 10 ಕೇಸು ಹಾಕಿದ ಯುವತಿ

Spread the love

ಬೆಳಗಾವಿ: ತೋಟಗಾರಿಕೆ ಇಲಾಖೆಯ ಖಾನಾಪುರದ ಸಸ್ಯಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ್ ‌ಟಾಕಳೆ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ, ಚನ್ನಪಟ್ಟಣ ಮೂಲದ ಯುವತಿ ಸೋಮವಾರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು.

ಇಲ್ಲಿನ ಎಪಿಎಂಸಿ ಪೊಲೀಸ್‌ ಠಾಣೆಗೆ ಹಾಜರಾದ ಯುವತಿಯನ್ನು ಪೊಲೀಸರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿದರು.

 

‘ರಾಜಕುಮಾರ ನನ್ನನ್ನು ಯಾಮಾರಿಸಿ ಮದುವೆಯಾಗಿದ್ದಾರೆ. ಆದರೆ, ಈಗ ನನ್ನ ವಿರುದ್ಧವೇ ‘ಸುಳ್ಳು ಅತ್ಯಾಚಾರದ ಬೆದರಿಕೆ ಹಾಗೂ ಹಣ ಕೇಳುತ್ತಿದ್ದೇನೆ’ ಎಂದು ಜುಲೈ 18ರಂದು ದೂರು ನೀಡಿದ್ದಾರೆ. ಇದರ ವಿಚಾರಣೆಗೂ ನಾನು ಪೊಲೀಸರಿಗೆ ಸಹಕರಿಸಿದ್ದೇನೆ. ನನಗೆ ಆದ ಅನ್ಯಾಯದ ವಿರುದ್ಧವೂ ಜುಲೈ 23ರಂದು ಪ್ರತಿ ದೂರು ದಾಖಲಿಸಿದ್ದೇನೆ. ಅದರ ವಿಚಾರಣೆಗೆ ಹಾಜರಾಗಲು ಬಂದಿದ್ದೇನೆ’ ಎಂದು ಯುವತಿ ಮಾಧ್ಯಮದವರ ಮುಂದೆ ಹೇಳಿಕೊಂಡರು.

10 ಕಲಂ ಅಡಿ ಪ್ರಕರಣ

ರಾಜಕುಮಾರ ಟಾಕಳೆ ವಿರುದ್ಧ ಯುವತಿ ಬರೋಬ್ಬರಿ 10 ವಿವಿಧ ಕಲಂಗಳ ಅಡಿ ದೂರು ದಾಖಲಿಸಿದ್ದಾರೆ. ಅತ್ಯಾಚಾರ (ಐಪಿಸಿ ಸೆಕ್ಷಣ್‌ 376), ಅಪಹರಣ (ಐಪಿಸಿ 366), ಗರ್ಭಪಾತ ಮಾಡಿಸಿದ್ದು (312), ‌ವಂಚನೆ (420), ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ (354), ಅವಾಚ್ಯವಾಗಿ ನಿಂದಿಸುವುದು (ಐಪಿಸಿ 504), ಜೀವ ಬೆದರಿಕೆ (506), ಗೌರವಕ್ಕೆ ಧಕೆ ತರುವುದು (509) ಹಾಗೂ ಖಾಸಗಿತನಕ್ಕೆ ಧಕ್ಕೆ (ಐಟಿ ಆಯಕ್ಟ್‌ 66ಇ), ಲೈಂಗಿಕ ಪ್ರಚೋದನಕಾರಿ ವಿಡಿಯೊಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ (ಐಟಿ ಆಯಕ್ಟ್‌ 67ಎ) ಕೇಸ್‌ಗಳನ್ನು ದಾಖಲಿಸಿದ್ದಾರೆ.

ಯುವತಿಯ ಖಾಸಗಿತನ ವಿಡಿಯೊಗಳು ಕಳೆದ 15 ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಆರೋಪ ಹೊತ್ತಿರುವ ರಾಜಕುಮಾರ ಟಾಕಳೆ ಅವರು, 2018ರಲ್ಲಿ ಸಚಿವರಾಗಿದ್ದ ಶ್ರಿಮಂತ ಪಾಟೀಲ ಅವರ ಆಪ್ತ ಸಹಾಯಕರಾಗಿದ್ದರು. ಆ ಸಂದರ್ಭದಲ್ಲಿ ಯುವತಿಯೊಂದಿಗೆ ಸಖ್ಯ ಬೆಳೆದಿತ್ತು ಎಂಬ ವಿಷಯಗಳನ್ನು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳುವುದೂ ಅಪರಾಧವಾಗಿತ್ತು:ಮೋದಿ

Spread the love ಜೈಪುರ(ಮಾ.23): ಲೋಕಸಭೆ ಚುನಾವಣೆಗೂ ಮುನ್ನ ನಾಯಕರು ದೇಶಾದ್ಯಂತ ನಿರಂತರವಾಗಿ ಪ್ರವಾಸ ಮಾಡುತ್ತಿದ್ದರೆ, ಪ್ರಧಾನಿ ಮೋದಿ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ