Breaking News
Home / ಜಿಲ್ಲೆ / ಬೆಳಗಾವಿ / ಭೂತರಾಮನ ಹಟ್ಟಿಯಲ್ಲಿರುವ ಸರ್ಕಾರಿ ಶಾಲೆಯೊಂದು ಕಾನ್ವೆಂಟ್ ಶಾಲೆಯಂತೆ ಆಕರ್ಷಿತವಾಗಿದೆ.

ಭೂತರಾಮನ ಹಟ್ಟಿಯಲ್ಲಿರುವ ಸರ್ಕಾರಿ ಶಾಲೆಯೊಂದು ಕಾನ್ವೆಂಟ್ ಶಾಲೆಯಂತೆ ಆಕರ್ಷಿತವಾಗಿದೆ.

Spread the love

ಬೆಳಗಾವಿ: ಸರ್ಕಾರಿ ಶಾಲೆ ಎಂದು ಅಸಡ್ಡೆ ಮಾಡುವ ಜನರ ಮಧ್ಯೆ ಬೆಳಗಾವಿಯ ಭೂತರಾಮನ ಹಟ್ಟಿಯಲ್ಲಿರುವ ಸರ್ಕಾರಿ ಶಾಲೆಯೊಂದು ಕಾನ್ವೆಂಟ್ ಶಾಲೆಯಂತೆ ಆಕರ್ಷಿತವಾಗಿದೆ. ಈ ಸರ್ಕಾರಿ ಶಾಲೆಗೆ ವರ್ಷದಿಂದ ವರ್ಷಕ್ಕೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆಯು ಗಣನೀಯವಾಗಿ ಹಚ್ಚುತ್ತಿದೆ . ಬೆಳಗಾವಿಯಿಂದ (Belagavi News) ಸುಮಾರು 8 ಕಿ . ಮಿ ದೂರದಲ್ಲಿರುವ ಭೂತರಾಮನಹಟ್ಟಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯು (Government Primary School) ಈ ಭಾಗದ ಪಾಲಕರ ಪಾಲಿನ ನೆಚ್ಚಿನ ಶಾಲೆಯೂ ಹೌದು.

. ಹಾಗಾದರೆ ಈ ಶಾಲೆಯಲ್ಲಿರುವ ವಿಶೇಷತೆಯಾದ್ರು ಏನೂ ಅಂತೀರಾ..? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ..

ಪ್ರಾಯೋಗಿಕ ಪಾಠಕ್ಕೆ ಒತ್ತು
ಹೌದು, ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಯೊಂದು ಪಾಠವನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ. ಇಲ್ಲಿ ಒಟ್ಟು ಮೂರು ಲ್ಯಾಬ್ ಗಳನ್ನು ಸೃಷ್ಟಿಸಿ, ಪ್ರತಿದಿನ ಮಕ್ಕಳಿಗೆ ಪಾಠ ಬೋಧಿಸಲಾಗುತ್ತದೆ. ವಿಜ್ಞಾನ ಲ್ಯಾಬಬ್​ನಲ್ಲಿ ಮಕ್ಕಳೇ ಸೃಷ್ಟಿಸಿದ ವಿಜ್ಞಾನದ ಮಾದರಿಗಳಿವೆ. ಅಲ್ಲದೇ ಪಿಯುಸಿ ಹಂತಕ್ಕಿರುವ ಎಲ್ಲ ಪ್ರಯೋಗಗಳನ್ನು ಈ ಶಾಲೆಯಲ್ಲಿ ಪ್ರಾಥಮಿಕ ಹಂತದಲ್ಲಿಯೇ ಬೋಧಿಸಲಾಗುತ್ತದೆ.

ವಿಜ್ಞಾನ ವಿಷಯದಲ್ಲಿ ಬರುವ ಪ್ರತಿಯೊಂದು ಪ್ರಯೋಗಗಳನ್ನು ಇಲ್ಲಿ ಸ್ವತಃ ವಿದ್ಯಾರ್ಥಿಗಳೇ ಮಾಡುತ್ತಾರೆ. ಅದಕ್ಕೆಂದು ಶಾಲೆಯಲ್ಲಿ ಪ್ರತ್ಯೇಕ ಪ್ರಯೋಗ ಶಾಲೆ ಇರುವುದು ವಿಶೇಷವಾಗಿದೆ.

ಗಣಿತ ಮತ್ತು ಸಮಾಜ ಶಾಸ್ತ್ರಕ್ಕೂ ಇದೆ ಲ್ಯಾಬ್
ವಿಜ್ಞಾನ ವಿಷಯಕ್ಕೆ ಸಾಮಾನ್ಯವಾಗಿ ಲ್ಯಾಬ್ ಇರುತ್ತದೆ. ಆದರೆ ಈ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದ ವಿಶೇಷ ಆಸಕ್ತಿಯಿಂದ ಗಣಿತಶಾಸ್ತ್ರ ಮತ್ತು ಸಮಾಜ ವಿಜ್ಞಾನಕ್ಕೂ ಒಟ್ಟಿಗೆ ಲ್ಯಾಬ್ ಇರುವುದು ವಿಶೇಷ. ಗಣಿತಶಾಸ್ತ್ರದ ಪ್ರಯೋಗಶಾಲೆಯಲ್ಲಿ ಇರುವಂತಹ ಮ್ಯಾಜಿಕ್ ಕ್ಯಾಲೆಂಡರ್ ಕುರಿತು ಇಲ್ಲಿನ ವಿದ್ಯಾರ್ಥಿಗಳು ನಾ ಮುಂದು ತಾ ಮುಂದು ಎಂಬಂತೆ ಅದರಲ್ಲಿರುವ ಗಣಿತದ ಲೆಕ್ಕಚಾರವನ್ನು ಬಿಡಿಸುತ್ತಾರೆ.


ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಅಲ್ಲದೇ ಸಮಾಜ ವಿಜ್ಞಾನದ ವಿಷಯದ ಕುರಿತು ಬಹುತೇಕ ಸಮಾಜ ಸುಧಾರಕರು, ಗಣ್ಯ ವ್ಯಕ್ತಿಗಳ ಚಿತ್ರಗಳನ್ನು ಹಾಕಲಾಗಿದೆ. ಈ ಕುರಿತು ಇಲ್ಲಿನ ವಿದ್ಯಾರ್ಥಿಗಳು ಯಾರ ಕುರಿತಾಗಿ ಕೇಳಿದರೂ, ನಿರರ್ಗಳವಾಗಿ ಪರಿಪೂರ್ಣ ಮಾಹಿತಿ ನೀಡುತ್ತಾರೆ. ಒಬ್ಬೊಬ್ಬ ಗಣ್ಯ ವ್ಯಕ್ತಿಯ ಮಾಹಿತಿಯನ್ನೂ ಎಳೆಯ ಮಕ್ಕಳೂ ಚೆನ್ನಾಗಿಯೇ ಮಾಹಿತಿ ನೀಡುತ್ತಾರೆ.

ಹೈಟೆಕ್ ಶೌಚಾಲಯ, ಗ್ರೀನ್ ಗಾರ್ಡನ್
ಇಲ್ಲಿನ ಮಕ್ಕಳು ಹಾಗೂ ಸಿಬ್ಬಂದಿಗಳಿಗಾಗಿ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದ್ದರೆ, ನಿರುಪಯುಕ್ತ ವಸ್ತುಗಳನ್ನು ಬಳಸಿ ಶಾಲಾವರಣದಲ್ಲಿ ‘ಗ್ರೀನ್ ಗಾರ್ಡನ್’ ನಿರ್ಮಿಸಿರುವುದು ಶಾಲೆಗೆ ಮತ್ತಷ್ಟು ಸೌಂದರ್ಯ ನೀಡಿದೆ.

ದಾನಿಗಳ ನೆರವಿನಿಂದ ಮುನ್ನೆಲೆಗೆ ಬಂದ ಶಾಲೆ
ಭೂತರಾಮನಹಟ್ಟಿಯ ಸರಕಾರಿ ಪ್ರಾಥಮಿಕ ಶಾಲೆಯೂ ಸಾಮಾನ್ಯ ಸರಕಾರಿ ಶಾಲೆಗಳಂತೆಯೇ ಇತ್ತು. ಆದರೆ ಇಲ್ಲಿಗೆ ಕೆಲಸ ನಿಮಿತ್ತ ಅಂಬಿಕಾ ಎಂಬ ಉಪನ್ಯಾಸಕಿ ಆಗಮಿಸಿರುವ ವೇಳೆ ಶಾಲೆಯ ದುಸ್ಥಿತಿ ಕಂಡು, ಶಾಲೆಯ ಅಭಿವೃದ್ದಿಗೆ ದಾನ ನೀಡಿದ್ದರು. ಈ ದಾನದಿಂದಲೇ ಪ್ರಯೋಗಶಾಲೆಯ ಕೊಠಡಿಗಳು, ಗ್ರಂಥಾಲಯ, ಹೈಟೆಕ್ ಶೌಚಾಲಯ, ನಲಿ ಕಲಿ ಪದ್ದತಿಗೆ ಬೇಕಾದ ಎಲ್ಲ ಸಲಕರಣೆಗಳನ್ನು ಖರೀದಿಸಿ ಶಾಲಾ ವಿದ್ಯಾರ್ಥಿಗಳ ಪಾಠ ಬೋಧನೆಗೆ ಬಳಸಲಾಗುತ್ತಿದೆ.

ಸರ್ಕಾರದ ಕೇವಲ ಒಂದು ಲಕ್ಷ ರೂ. ಮಾತ್ರ ನೆರವು ಸಿಕ್ಕಿದ್ದು, ಅದೆಷ್ಟೋ ದಾನಿಗಳು ಇಲ್ಲಿ ಪುಸ್ತಕ, ಕೊಠಡಿ, ಪ್ರಯೋಗಶಾಲೆಯ ಸಾಮಗ್ರಿಗಳನ್ನು ಕೊಡಿಸಿರುವುದು ಶಾಲೆಯ ವಿದ್ಯಾರ್ಥಿಗಳ ಅಭಿವೃದ್ಧಿಗೆ ಕಾರಣವಾಗಿದೆ.‌

6 ಸಾವಿರ ಪುಸ್ತಕವುಳ್ಳ ಗ್ರಂಥಾಲಯ
ಇಲ್ಲಿನ ವಿದ್ಯಾರ್ಥಿಗಳ ನ ಆಸಕ್ತಿಯನ್ನು ಕಂಡು ಶಾಲಾ ಶಿಕ್ಷಕರು ದಾನಿಗಳನ್ನು ಸಂಪರ್ಕಿಸಿ ಗ್ರಂಥಾಲಯೊಂದನ್ನು ನಿರ್ಮಿಸಿದ್ದಾರೆ.‌ ಈ ಗ್ರಂಥಾಲಯದಲ್ಲಿ ಪ್ರಾಥಮಿಕ ಹಂತದಿಂದ ಹಿಡಿದು ಪದವಿ ಹಂತದವರೆಗೂ ಪುಸ್ತಕಗಳಿದ್ದು, ಇಲ್ಲಿ ವಿದ್ಯಾರ್ಥಿಗಳು ಸ್ವ ಆಸಕ್ತಿಯಿಂದ ಕುಳಿತು ಓದುತ್ತಾರೆ.

ಒಟ್ಟಿನಲ್ಲಿ ಭೂತರಾಮನಹಟ್ಟಿಯ ಈ ಸರಕಾರಿ ಪ್ರಾಥಮಿಕ ಶಾಲೆ ಅದ್ಯಾವ ಖಾಸಗಿ ಶಾಲೆಗೂ ಕಡಿಮೆಯದ್ದಲ್ಲ. ರಾಜ್ಯದ ಎಲ್ಲ ಸರಕಾರಿ ಶಾಲೆಗಳಿಗೂ ಈ ಶಾಲೆ ಮಾದರಿಯೆನಿಸುವಂತಿದೆ.


Spread the love

About Laxminews 24x7

Check Also

ಕೈ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಚಿಕ್ಕೋಡಿ-ಪ್ರಿಯಂಕಾ ಜಾರಕಿಹೊಳಿ, ಬೆಳಗಾವಿ-ಮೃಣಾಲ್ ಹೆಬ್ಬಾಳ್ ಕರ್

Spread the love ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು , ರಾಜ್ಯದ 17 ಮಂದಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ